Advertisement
ಸುರಂಗದ ಅವಶೇಷಗಳನ್ನು ಕೊರೆಯಲು ಅಮೆರಿಕದಿಂದ ತರಲಾದ ಆಗರ್ ಯಂತ್ರವು ಕಾರ್ಯ ಸ್ಥಗಿತಗೊಳಿಸಿದ ಬೆನ್ನಲ್ಲೇ ಭಾರತೀಯ ಸೇನೆಯ ಯೋಧರಿಗೆ ಕರೆ ಹೋಗಿದ್ದು, ಅವರು ಕೈಯಿಂದಲೇ ಅವಶೇಷಗಳನ್ನು ಅಗೆಯುವ ಕೆಲಸಕ್ಕೆ ಸಾಥ್ ನೀಡಲಿದ್ದಾರೆ. ಮದ್ರಾಸ್ ಸ್ಯಾಪರ್ಸ್‌ನ ಒಂದು ಘಟಕ, ಸೇನೆಯ ಕಾಪ್ಸ್ ಆಫ್ ಎಂಜಿನಿಯರ್ಸ್‌ನ ಒಂದು ತಂಡ ಈಗಾಗಲೇ ಉತ್ತರಕಾಶಿ ತಲುಪಿದೆ.
ಮತ್ತೂಂದೆಡೆ ಕಾರ್ಮಿಕರ ರಕ್ಷಣೆಗಾಗಿ ಹಲವು ಆಯ್ಕೆಗಳನ್ನು ಪರಿಶೀಲಿಸುತ್ತಿದ್ದೇವೆ. ಬೆಟ್ಟದ ಮೇಲಿನಿಂದ ಲಂಬವಾಗಿ ಕೊರೆಯುವ ಕೆಲಸವೂ ನಡೆಯುತ್ತಿದೆ. ರವಿವಾರ ಮಧ್ಯಾಹ್ನ ಈ ಪ್ರಕ್ರಿಯೆ ಆರಂಭವಾಗಿದ್ದು, ರಾತ್ರಿ ವೇಳೆಗೆ 19.2 ಮೀ. ಡ್ರಿಲ್ಲಿಂಗ್ ಪೂರ್ಣಗೊಂಡಿದೆ. ಒಟ್ಟು 86 ಮೀ. ಕೊರೆಯಬೇಕಾಗುತ್ತದೆ ಎಂದು ರಾಷ್ಟ್ರೀಯ ವಿಪತ್ತು ನಿರ್ವಹಣ ಪ್ರಾಧಿಕಾರದ ಸದಸ್ಯ ನಿವೃತ್ತ ಲೆ|ಜ| ಸೈಯದ್ ಹಸ್ನೆ„ನ್ ಹೇಳಿದ್ದಾರೆ.