ಕಾರವಾರ: ಉತ್ತರ ಕನ್ನಡ ಜಿಲ್ಲೆಯ ಸರ್ಕಾರಿ ಶಾಲೆಗಳಲ್ಲಿ ಒಂದನೇ ತರಗತಿಗೆ ಮಕ್ಕಳ ಪ್ರವೇಶಾತಿ ಇಳಿಮುಖ ಕಂಡು ಬಂದಿದೆ. ಬಹುತೇಕ ಕಾರ್ಮಿಕರ ಹಾಗೂ ಬಡವರ ಮಕ್ಕಳು ಸರ್ಕಾರಿ ಶಾಲೆಗೆ ಬರುತ್ತಿದ್ದು, ಸ್ಥಿತಿವಂತರ, ಮಧ್ಯಮ ವರ್ಗದವರ ಹಾಗೂ ಸರ್ಕಾರಿ ನೌಕರರ ಮಕ್ಕಳು ಖಾಸಗಿ ಶಾಲೆಗಳಿಗೆ, ಅದರಲ್ಲೂ ನಗರ, ಪಟ್ಟಣದ ಶಾಲೆಗಳಲ್ಲಿ ಪ್ರವೇಶ ಪಡೆಯುತ್ತಿದ್ದಾರೆ. ಇದು ಶಿಕ್ಷಕರ ವಲಯದಲ್ಲಿ ಆತಂಕ ಸೃಷ್ಟಿಸಿದೆ.
Advertisement
ಶಿಕ್ಷಣ ಇಲಾಖೆ ಸಹ ಧೃತಿಗೆಡದೆ ಮಕ್ಕಳನ್ನು ಸರ್ಕಾರಿ ಶಾಲೆಗೆ ಕರೆ ತರಲು, ಸರ್ಕಾರಿ ಶಾಲೆಯ ಉಪಯೋಗವನ್ನು ಮಜಿರೆ, ಹೊಬಳಿ ಮಟ್ಟದಲ್ಲಿ ಸಾರ್ವಜನಿಕರಿಗೆ ತಿಳಿಸಲು ಪ್ರಯತ್ನಿಸುತ್ತಿದೆ. ಉಚಿತ ಪುಸ್ತಕ, ಉಚಿತ ಸಮವಸ್ತ್ರ, ಸೈಕಲ್, ಮಧ್ಯಾಹ್ನದ ಬಿಸಿಯೂಟದ ಬಗ್ಗೆ ತಿಳಿಸಿ ಹೇಳುತ್ತಿದೆ.
Related Articles
Advertisement
ಕರ್ನಾಟಕ ಪಬ್ಲಿಕ್ ಶಾಲೆಗಳ ನಿರೀಕ್ಷೆ: ಸರ್ಕಾರ ಹೆಚ್ಚು ವಿದ್ಯಾರ್ಥಿಗಳು ಇರುವಲ್ಲಿ ಎಲ್ಲಾ ಸೌಕರ್ಯಗಳಿರುವ ಕರ್ನಾಟಕ ಪಬ್ಲಿಕ್ ಶಾಲೆ ತೆರೆಯಲು 2018 ರಿಂದ ಆರಂಭಿಸಿತು. ಶಿರಸಿ ಜಿಲ್ಲೆಗೆ 6, ಕಾರವಾರ ಜಿಲ್ಲೆಗೆ 6 ಶಾಲೆಗಳನ್ನು ನೀಡಿತ್ತು. ಈ ಶಾಲೆಗಳು ಸರ್ಕಾರಿ ಪಿಯು ಕಾಲೇಜು ಇರುವಲ್ಲಿ ಆರಂಭಿಸಿತ್ತು. ಈ ಶಾಲೆಗಳು ಹೆಚ್ಚು ಮೂಲ ಸೌಕರ್ಯ, ಹೆಚ್ಚು ಶಿಕ್ಷಕರನ್ನು ಹೊಂದಿದ ಕಾರಣ ಪೋಷಕರು ತಮ್ಮ ಮಕ್ಕಳನ್ನು ಕರ್ನಾಟಕ ಪಬ್ಲಿಕ್ ಶಾಲೆಗೆ ಕಳಿಸಲು ಆಸಕ್ತರಾಗುತ್ತಿದ್ದರು.
ಇದನ್ನು ಮನಗಂಡ ಸರ್ಕಾರ ಹೋಬಳಿಗೆ ಒಂದು ಕರ್ನಾಟಕ ಪಬ್ಲಿಕ್ ಶಾಲೆ ತೆರೆಯಲು ಮುಂದಾಗಿದೆ. ಶಿರಸಿ ಜಿಲ್ಲೆಗೆ 9, ಕಾರವಾರ ಶೈಕ್ಷಣಿಕ ಜಿಲ್ಲೆಗೆ 9 ಕರ್ನಾಟಕ ಪಬ್ಲಿಕ್ ಶಾಲೆ ತೆರೆಯಲು ಪ್ರಸ್ತಾವನೆ ಸರ್ಕಾರಕ್ಕೆ ಹೋಗಿದೆ. ಸರ್ಕಾರ ಇದಕ್ಕೆ ಕೆಲ ನಿಯಮ ಹಾಕಿದೆ. ಕರ್ನಾಟಕ ಪಬ್ಲಿಕ್ ಶಾಲೆ ತೆರೆಯುವ ಸ್ಥಳ, ಹೊಬಳಿಯಲ್ಲಿ ಸರ್ಕಾರಿ ಪಿಯು ಕಾಲೇಜು ಇರಬೇಕು ಅಥವಾ ಕರ್ನಾಟಕ ಪಬ್ಲಿಕ್ ಶಾಲೆಯಿಂದ ನೂರು ಮೀ. ದೂರದಲ್ಲಿ ಪಿಯು ಕಾಲೇಜು ಇರಬೇಕು. ಪ್ರಾಥಮಿಕ, ಪ್ರೌಢಶಾಲೆ ಇರಬೇಕು. ಸಾಕಷ್ಟು ಕೊಠಡಿ ಸೌಲಭ್ಯ ಹಾಗೂ ಮೈದಾನ ಇರಬೇಕು. ಅಂಥ ಶಾಲೆಗಳನ್ನು ಕರ್ನಾಟಕ ಪಬ್ಲಿಕ್ ಶಾಲೆಯಾಗಿಪರಿವರ್ತಿಸಿ, ಹೆಚ್ಚಿನ ಸೌಕರ್ಯ ನೀಡಲು ಪ್ರಾಥಮಿಕ, ಪ್ರೌಢ ಶಿಕ್ಷಣ ಇಲಾಖೆ ಮುಂದೆ ಬಂದಿದೆ. ಇಂತಹ ಶಾಲೆ ಹೊಬಳಿ ಮಟ್ಟದಲ್ಲಿ ಬಂದರೆ, ಹಳ್ಳಿಗಳ ಮಕ್ಕಳು ಪಬ್ಲಿಕ್ ಶಾಲೆಗೆ ಬರುವ ಸಾಧ್ಯತೆ ಹೆಚ್ಚು. ಪರಿಣಾಮ ಸರ್ಕಾರ ಶಾಲೆ ಸಂಖ್ಯೆ ಕೊಂಚ ಕಡಿಮೆಯಾದರೂ ಎಲ್ಲಾ ಸೌಕರ್ಯ ಇರುವ ಶಾಲೆಗಳು ಸದೃಢವಾಗುವ ಲಕ್ಷಣಗಳಿವೆ. ಸಮವಸ್ತ್ರ ಪೂರೈಕೆ ಪೂರ್ಣ: ಕಾರವಾರ ಶೈಕ್ಷಣಿಕ ಜಿಲ್ಲೆಯ 53690 ಮಕ್ಕಳ ಪೈಕಿ 53544 ವಿದ್ಯಾರ್ಥಿಗಳಿಗೆ ಎರಡು ಜತೆ ಸಮವಸ್ತ್ರ ವಿತರಣೆಯಾಗಿದೆ. ಇದರಲ್ಲಿ 26,689 ಹುಡುಗರು, 26,855 ಹುಡುಗಿಯರು ಸಮವಸ್ತ್ರ ಪಡೆದಿದ್ದಾರೆ. ಒಂದನೇ ತರಗತಿ ಪ್ರವೇಶ ಪಡೆದ ಮಕ್ಕಳಿಗೆ ಜುಲೈನಲ್ಲಿ ಸಮವಸ್ತ್ರ ವಿತರಣೆಯಾಗಲಿದೆ. ಸಮವಸ್ತ್ರ ಬಹುತೇಕ ಎಲ್ಲಾ ಶಾಲೆಗಳಿಗೆ ತಲುಪಿದೆ. ಶಿರಸಿ ಶೈಕ್ಷಣಿಕ ಜಿಲ್ಲೆಯಲ್ಲಿ 70346 ವಿದ್ಯಾರ್ಥಿಗಳು ಸಮವಸ್ತ್ರ ಪಡೆದಿದ್ದಾರೆ. ಶೇ.99 ಮಕ್ಕಳಿಗೆ ಈಗಾಗಲೇ ಸಮವಸ್ತ್ರ ತಲುಪಿದೆ. ಒಂದನೇ ತರಗತಿ ಮಕ್ಕಳಿಗೆ ಪ್ರವೇಶಾತಿ ಮುಗಿದ ತಕ್ಷಣ ಸಮವಸ್ತ್ರ ನೀಡಲು ಶಿಕ್ಷಣ ಇಲಾಖೆ ಅಧಿಕಾರಿಗಳು, ಮುಖ್ಯೋಪಾಧ್ಯಾಯರಿಗೆ ಸೂಚಿಸಿದ್ದಾರೆ. ಸರ್ಕಾರಿ ಶಾಲೆಗಳಿಗೆ ನಗರ ಇರಲಿ, ಗ್ರಾಮಾಂತರ ಇರಲಿ ಕೃಷಿ, ಕಟ್ಟಡ ಕಾರ್ಮಿಕರ ಮಕ್ಕಳೇ ಬರುವುದು. ಜುಲೈ ತನಕ ಪ್ರವೇಶಕ್ಕೆ ಸಮಯವಿದೆ. ಪ್ರತಿ ಶಾಲೆಗೆ 5 ರಿಂದ 10 ಮಕ್ಕಳು ಬಂದರೂ ಆಶಾದಾಯಕ ಬೆಳೆವಣಿಗೆ. ಇನ್ನೂ ಕರ್ನಾಟಕ ಪಬ್ಲಿಕ್ ಶಾಲೆಗಳನ್ನು ಪ್ರಾರಂಭಿಸಲು ಸರ್ಕಾರಕ್ಕೆ ಪ್ರಸ್ತಾವನೆ ಹೋಗಿದೆ. ಇಲಾಖೆ ನಿಯಮಗಳನ್ನು ಅನುಸರಿಸಿ ಜಿಲ್ಲೆಯ 9 ಕಡೆ ಕರ್ನಾಟಕ ಪಬ್ಲಿಕ್ ಶಾಲೆ ಕೇಳಿದ್ದೇವೆ.
ಪಿ.ಬಸವರಾಜ್, ಡಿಡಿಪಿಐ, ಶಿರಸಿ ಶೈಕ್ಷಣಿಕ ಜಿಲ್ಲೆ *ನಾಗರಾಜ್ ಹರಪನಹಳ್ಳಿ