ಅಂಕೋಲಾ : ಎಲ್ಲೆಡೆ ಕಳೆದೆರಡು ದಿನದಿಂದ ಭಾರಿ ಮಳೆ ಉಂಟಾಗುತ್ತಿದ್ದು ತಾಲೂಕಿನ ಜೀವ ನದಿ ಗಂಗಾವಳಿ ನದಿಗೆ ನೀರಿನ ಹರಿವು ಹೆಚ್ಚಾಗುತ್ತಿದ್ದಂತೆ ರಾಮನಗುಳಿ ಭಾಗದ ಮೂರು ತಾತ್ಕಾಲಿಕ ಸೇತುವೆ ಸಂಪೂರ್ಣ ಮುಳುಗಡೆಯಾಗಿ ಆ ಭಾಗದ ಸಂಪರ್ಕವು ಕಡಿತಗೊಂಡಿದೆ.
ರಾಮನಗುಳಿಯಿಂದ ಕಲ್ಲೇಶ್ವರ, ಶೇವಕಾರದಿಂದ ಗುಳ್ಳಾಪುರ ಹಾಗೂ ಕೈಗಡಿಯಿಂದ ಅರಬೈಲ್ ಸಂಕರ್ಪ ಕೊಂಡಿಯಾದ ತಾತ್ಕಾಲಿಕವಾದ ಸೇತುವೆ ಗಂಗಾವಳಿಗೆ ಹರಿದು ಬರುತ್ತಿರುವ ನೀರಿನಲ್ಲಿ ಮುಳುಗಡೆಯಾಗಿದೆ. ಇದರ ಪರಿಣಾಮ ಕಲ್ಲೇಶ್ವರ, ಶೇವಕಾರ ಮತ್ತು ಕೈಗಡಿ ಗ್ರಾಮಗಳ ಸಂಪರ್ಕ ಸಂಪೂರ್ಣವಾಗಿ ಕಡಿತಗೊಂಡಿದೆ.
ಕಳೆದ ವರ್ಷ ಗಂಗಾವಳಿ ನದಿಯ ಪ್ರವಾಹದಿಂದ ಇಲ್ಲಿಯ ಸೇತುವೆ ತೂಗು ಸೇತುವೆಗಳು ನೀರಿನ ಹರಿವಿಗೆ ಕೊಚ್ಚಿ ಹೋಗಿದ್ದವು. ಬಳಿಕ ಇಲ್ಲಿ ಸಂಕರ್ಪ ಮಾಡಲು ಸರಕಾರ ಸೇತುವೆ ನಿರ್ಮಾಣ ಮಾಡಲು ಅನೂಮೊದನೆ ನೀಡಿದೆ. ಆದರು ಜನರು ಒಡಾಡಲು ತಾತ್ಕಾಲಿಕವಾಗಿ ಸೇತುವೆ ನಿರ್ಮಾಣ ಮಾಡಲಾಗಿದ್ದು ಅದು ಈಗ ನೀರಿನಲ್ಲಿ ಮುಳುಗಡೆಯಾಗಿದೆ.
ಹುಬ್ಬಳ್ಳಿ ದಾರವಾಡದಲ್ಲಿ ಭಾರಿ ಮಳೆ ಆಗುತ್ತಿರುವ ಹಿನ್ನೆಲೆ ಬೆಡ್ತಿ ಮುಇಲಕ ಗಂಗಾವಳಿ ನದಿಗೆ ಭಾರಿ ಪ್ರಮಾಣದಲ್ಲಿ ನೀರು ಬರುತ್ತಿದ್ದು ಗಂಗಾವಳಿ ನೀರಿನ ಮಟ್ಟ ನಿದಾನವಾಗಿ ಏರಿಕೆ ಅಗುತ್ತಿದ್ದು ಜನರು ಮತ್ತೆ ನೆರೆಯ ಬಿತಿಯಲ್ಲಿ ಕಾಲ ಕಳೆಯುತ್ತಿದ್ದಾರೆ.
Related Articles
ಇದನ್ನೂ ಓದಿ : ಮೈಸೂರು ಅಭಿವೃದ್ಧಿಗೆ ಸಿದ್ದು ಕೊಡುಗೆ ಏನು?; ನಳೀನ್ ಕುಮಾರ್ ಕಟೀಲ್
ನೂಡಲ್ ಅಧಿಕಾರಿಗಳ ತಂಡ ರಚನೆ
ತಾಲೂಕಿನಾದ್ಯಂತ ಮಳೆ ಆಗುತ್ತಿರುವ ಹಿನ್ನೆಲೆ ಮತ್ತು ಗಂಗಾವಳಿ ನೀರಿನ ಮಟ್ಟ ಎರುತ್ತಿರುವ ಕಾರಣ ನೊಡಲ ಅಧಿಕಾರಿಗಳನ್ನೊಳಗೊಂಡ ತಂಡ ರಚನೆ ಮಾಡಿ ಆಯಾ ಭಾಗದಲ್ಲಿ ಗಮನ ನೀಡಲು ಸೂಚಿಸಲಾಗಿದೆ. ಜೊತೆಗೆ ಈಗಾಗಲೇ 10 ಮೀನುಗಾರಿಕಾ ದೋಣಿಗಳನ್ನು ನೆರೆ ಬರುವ ಸ್ಥಳವಾದ ಕೊಡ್ಸಣಿ, ಸುಂಕಸಾಳ, ಶಿರೂರು, ಡೊಂಗ್ರಿ, ಕಲ್ಲೇಶ್ವರ, ಶೆವಕಾರ ಬಾಗದಲ್ಲಿ ಇಡಲು ಯೊಚಿಸಲಾಗಿದೆ. ಈಗಾಗಲೇ ದೊಣಿ ಮಾಲಕರ ಜೊತೆ ಮಾತುಕತೆ ನಡೆಸಲಾಗಿದ್ದು ಒಂದೆರಡು ದಿದಲ್ಲಿಯೇ ನೆರೆ ಸ್ಥಳದಲ್ಲಿ ದೋಣಿ ವ್ಯವಸ್ಥೆ ಮಾಡಲಾಗುವುದು ಎಂದು ತಹಶಿಲ್ದಾರ ಉದಯ ಕುಂಬಾರ ತಿಳಿಸಿದ್ದಾರೆ.