Advertisement

ರಾಜ್ಯದ 15 ಹಾಟ್ ಸ್ಪಾಟ್ ಏ.30ರವರೆಗೆ ಸಂಪೂರ್ಣ ಲಾಕ್ ಡೌನ್: ಉತ್ತರಪ್ರದೇಶ ಸರ್ಕಾರ

09:10 AM Apr 09, 2020 | Nagendra Trasi |

ಲಕ್ನೋ: ಕೋವಿಡ್ 19 ವೈರಸ್ ನ ಹಾಟ್ ಸ್ಪಾಟ್ ಎಂದು ಗುರುತಿಸಲ್ಪಟ್ಟಿರುವ ಉತ್ತರಪ್ರದೇಶದ 15 ಜಿಲ್ಲೆಗಳನ್ನು ಸಂಪೂರ್ಣವಾಗಿ
ಏಪ್ರಿಲ್ 30ರವರೆಗೆ ಬಂದ್ ಮಾಡಲು ನಿರ್ಧರಿಸಿರುವುದಾಗಿ ಮುಖ್ಯಮಂತ್ರಿ ಯೋಗಿ ಆದಿತ್ಯನಾಐ್ ಬುಧವಾರ ತಿಳಿಸಿದ್ದಾರೆ.

Advertisement

ರಾಜ್ಯದ ಜಿಲ್ಲೆಗಳಾದ ಆಗ್ರಾ, ಲಕ್ನೋ, ಗಾಜಿಯಾಬಾದ್, ನೋಯ್ಡಾ, ಕಾನ್ಪುರ್, ವಾರಣಾಸಿ, ಶಾಮ್ಲಿ, ಮೀರತ್, ಬರೇಲಿ, ಬುಲಂದ್
ಶಹರ್, ಬಸ್ತಿ, ಫಿರೋಜಾಬಾದ್, ಸಹರಾನ್ ಪುರ್, ಮಹಾರಾಜ್ ಗಂಜ್ ಮತ್ತು ಸೀತಾಪುರ್ ಅನ್ನು ಸಂಪೂರ್ಣವಾಗಿ ಸೀಲ್
ಮಾಡಲಾಗಿದೆ ಎಂದು ವಿವರಿಸಿದೆ.

ಈ ಜಿಲ್ಲೆಗಳಲ್ಲಿ ಕೋವಿಡ್ 19 ವೈರಸ್ ಗೆ ಸಂಬಂಧಿಸಿದ ಪ್ರಕರಣಗಳು ಅತೀ ಹೆಚ್ಚು ಪತ್ತೆಯಾಗಿರುವುದರಿಂದ ಸಂಪೂರ್ಣ ಲಾಕ್
ಡೌನ್ ಮುಂದುವರಿಸಲು ನಿರ್ಧಾರ ತೆಗೆದುಕೊಳ್ಳಲಾಗಿದೆ. ಅಲ್ಲದೇ ಜನರು ಲಾಕ್ ಡೌನ್ ಆದೇಶ ಸಮರ್ಪಕವಾಗಿ ಪಾಲಿಸುತ್ತಿಲ್ಲ.
ರಾಜ್ಯದಲ್ಲಿ ಕೋವಿಡ್ 19 ಸೋಂಕು ಇನ್ನೂ ಹೆಚ್ಚು ಹರಡದಂತೆ ಇರಲು ಮುಂಜಾಗ್ರತಾ ಕ್ರಮವಾಗಿ ಈ ನಿರ್ಧಾರ
ತೆಗೆದುಕೊಂಡಿರುವುದಾಗಿ ಸರ್ಕಾರ ತಿಳಿಸಿದೆ.

Advertisement

Udayavani is now on Telegram. Click here to join our channel and stay updated with the latest news.

Next