Advertisement

ಅಯೋಧ್ಯೆಯಲ್ಲಿ 500 ಡ್ರೋನ್‌ಗಳ ಮೂಲಕ ರಾಮಾಯಣ ದರ್ಶನ

10:05 PM Sep 23, 2021 | Team Udayavani |

ಅಯೋಧ್ಯಾ: ಈ ಬಾರಿ ಉತ್ತರಪ್ರದೇಶದ ಅಯೋಧ್ಯೆಯಲ್ಲಿ ಅದ್ಧೂರಿಯಾಗಿ ರಾಮೋತ್ಸವ ನಡೆಸಲು ಯೋಗಿ ಆದಿತ್ಯನಾಥ್‌ ಸರ್ಕಾರ ಸಿದ್ಧತೆ ನಡೆಸಿದೆ.

Advertisement

ಹಾಗೆಯೇ ದೀಪಾವಳಿಯನ್ನು ವಿಶಿಷ್ಟ, ಸ್ಮರಣೀಯವಾಗಿಸಲು ತೀರ್ಮಾನಿಸಲಾಗಿದೆ. ಅದಕ್ಕಾಗಿ 500 ಡ್ರೋನ್‌ಗಳ ಪ್ರದರ್ಶನವೊಂದು; ದೀಪಾವಳಿಯ ಹಿಂದಿನ ದಿನವಾದ ನ.3ರಂದು, ಅಯೋಧ್ಯೆಯ ಬಾನಿನಲ್ಲಿ ನಡೆಯಲಿದೆ.

ಅದರ ಮೂಲಕ ಶ್ರೀರಾಮ ಅಯೋಧ್ಯೆಗೆ ಹಿಂತಿರುಗಿದ್ದು ಹಾಗೂ ರಾಮಾಯಣದ ವಿವಿಧ ಘಟನೆಗಳನ್ನು ಕೂಡಿಸಿ 12 ನಿಮಿಷದ ಪ್ರದರ್ಶನ ನಡೆಯಲಿದೆ. ಇದನ್ನು ನಡೆಸಿಕೊಡಲಿರುವುದು ಇಂಟೆಲ್‌. ಈ ಸಂಸ್ಥೆ ಟೋಕಿಯೋ ಒಲಿಂಪಿಕ್ಸ್‌ನಲ್ಲಿ 1,824 ಡ್ರೋನ್‌ಗಳ ಮೂಲಕ ಆಗಸದಲ್ಲಿ ಕಬುಕಿ ಲಾಂಛನವನ್ನೇ ಸೃಷ್ಟಿಸಿತ್ತು. ಅದು ವಿಶ್ವವಿಖ್ಯಾತವಾಗಿತ್ತು. ಈ ಹಿನ್ನೆಲೆಯಲ್ಲಿ ಅದೇ ಸಂಸ್ಥೆಗೆ ಯೋಗಿ ಸರ್ಕಾರ ಅಯೋಧ್ಯೆಯ ಹೊಣೆಯನ್ನು ಹೊರಿಸಿದೆ.

ಇದನ್ನೂ ಓದಿ:ಟಿ20 ವಿಶ್ವಕಪ್‌: ಧ್ಯೇಯಗೀತೆ ಬಿಡುಗಡೆ

ಈ ಪ್ರದರ್ಶನಕ್ಕೆ ಕ್ವಾಡ್‌ಕಾಪ್ಟರ್‌ ಅಥವಾ ಮಲ್ಟಿರೊಟಾರ್‌ಗಳಿರುವ ಡ್ರೋನ್‌ಗಳನ್ನು ಬಳಸಿಕೊಳ್ಳಲಾಗುತ್ತದೆ. ಇವುಗಳು ಎಲ್‌ಇಡಿ ದೀಪಗಳನ್ನು ಹೊಂದಿರುತ್ತವೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next