Advertisement

ಉತ್ತರ ಪ್ರದೇಶ: ನಕಲಿ ಎನ್‌ಕೌಂಟರ್ ಪ್ರಕರಣದಲ್ಲಿ 9 ಮಂದಿ ಪೊಲೀಸರಿಗೆ ಜೀವಾವಧಿ

10:36 PM Dec 21, 2022 | Team Udayavani |

ಇಟಾಹ್ : ಉತ್ತರ ಪ್ರದೇಶದಲ್ಲಿ ಸುಮಾರು 16 ವರ್ಷಗಳ ಹಿಂದೆ ವರದಿಯಾದ ನಕಲಿ ಎನ್‌ಕೌಂಟರ್ ಪ್ರಕರಣಕ್ಕೆ ಸಂಬಂಧಿಸಿದಂತೆ ಗಾಜಿಯಾಬಾದ್‌ನ ವಿಶೇಷ ಸಿಬಿಐ ನ್ಯಾಯಾಲಯವು ಅಂದಿನ ಪೊಲೀಸ್ ಠಾಣಾಧಿಕಾರಿ (ಎಸ್‌ಎಚ್‌ಒ) ಸೇರಿದಂತೆ 9 ಮಂದಿ ಪೊಲೀಸರನ್ನು ದೋಷಿ ಎಂದು ಮಂಗಳವಾರ ತೀರ್ಪು ನೀಡಿದೆ.

Advertisement

ಮಾಜಿ ಎಸ್‌ಎಚ್‌ಒ ಪವನ್ ಸಿಂಗ್, ಪಾಲ್ ಸಿಂಗ್ ತೇನ್ವಾ, ರಾಜೇಂದ್ರ ಪ್ರಸಾದ್, ಸರ್ನಾಮ್ ಸಿಂಗ್ ಮತ್ತು ಮೊಹ್ಕಮ್ ಸಿಂಗ್ ಸೇರಿದಂತೆ ಎಲ್ಲಾ ಅಪರಾಧಿಗಳಿಗೆ ಜೀವಾವಧಿ ಶಿಕ್ಷೆ ವಿಧಿಸಲಾಗಿದೆ. ನ್ಯಾಯಾಲಯವು ಪ್ರತಿಯೊಬ್ಬರಿಗೂ ತಲಾ 30,000 ರೂಪಾಯಿ ದಂಡ ವಿಧಿಸಿದೆ.

ಇತರ ಆರೋಪಿಗಳಾದ ಬಲದೇವ್ ಪ್ರಸಾದ್, ಸುಮೇರ್ ಸಿಂಗ್, ಅಜಯ್ ಕುಮಾರ್ ಮತ್ತು ಅವಧೇಶ್ ರಾವತ್ ಅವರಿಗೆ ಐಪಿಸಿ ಸೆಕ್ಷನ್ 34 ರ ಅಡಿಯಲ್ಲಿ ಉದ್ದೇಶಪೂರ್ವಕವಾಗಿ ಸಾಕ್ಷ್ಯ ನಾಶಪಡಿಸಿದ ಆರೋಪದಲ್ಲಿ 5 ವರ್ಷಗಳ ಜೈಲು ಶಿಕ್ಷೆ ಮತ್ತು ತಲಾ 11,000 ರೂ. ದಂಡ ವಿಧಿಸಲಾಗಿದೆ.

2006ರ ಆಗಸ್ಟ್ 18ರಂದು ಸುನೆಹ್ರಾ ಗ್ರಾಮದ ನಿವಾಸಿ ರಾಜಾರಾಂ ಎಂಬ ಬಡಗಿ ಎನ್‌ಕೌಂಟರ್‌ ಮಾಡಲಾಗಿತ್ತು. ಸಿಧ್‌ಪುರ ಪೊಲೀಸ್ ಠಾಣೆಯಲ್ಲಿ ನಿಯೋಜಿಸಲಾದ ಆರೋಪಿ ಪೊಲೀಸರು ಆತನನ್ನು ಡಕಾಯಿತನಂತೆ ಚಿತ್ರಿಸಿ ನಕಲಿ ಎನ್‌ಕೌಂಟರ್‌ ಮಾಡಿದ್ದರು.

ರಾಜಾರಾಮ್ ಅವರ ಪತ್ನಿ ಸಂತೋಷ್ ಕುಮಾರಿ ನಂತರ ಅಲಹಾಬಾದ್ ಹೈಕೋರ್ಟ್‌ಗೆ ತೆರಳಿ ತನ್ನ ಪತಿ ಎನ್‌ಕೌಂಟರ್ ಬಗ್ಗೆ ತನಿಖೆ ನಡೆಸಬೇಕೆಂದು ಒತ್ತಾಯಿಸಿದ್ದರು.ಜೂನ್ 1, 2007 ರಂದು ಹೈಕೋರ್ಟ್ ಈ ವಿಷಯದ ಬಗ್ಗೆ ಸಿಬಿಐ ತನಿಖೆಗೆ ಆದೇಶಿಸಿತು. ಸಿಬಿಐ ಎಲ್ಲಾ ಸಾಕ್ಷ್ಯಗಳನ್ನು ಸಂಗ್ರಹಿಸಿ ಎಲ್ಲಾ ಆರೋಪಿ ಪೊಲೀಸರ ವಿರುದ್ಧ ಚಾರ್ಜ್ ಶೀಟ್ ಸಲ್ಲಿಸಿದೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next