Advertisement

ಉ.ಪ್ರ. ಸಚಿವರ ಕಾರು ಢಿಕ್ಕಿಯಾಗಿ ಓರ್ವನ ಸಾವು; ಮದ್ಯದ ಬಾಟಲಿ ಪತ್ತೆ

11:13 AM Jan 03, 2017 | udayavani editorial |

ಲಕ್ನೋ : ಉತ್ತರ ಪ್ರದೇಶದ ಪ್ರವಾಸೋದ್ಯಮ ಸಚಿವ ಓಂ ಪ್ರಕಾಶ್‌ ಸಿಂಗ್‌ ಅವರ ಕಾರು ನಿನ್ನೆ ರಾತ್ರಿ ಮಂಗಳವಾರ ರಾತ್ರಿ ಹರದೋಯಿ ಎಂಬಲ್ಲಿ ಕೈಗಾಡಿಯೊಂದಕ್ಕೆ ಢಿಕ್ಕಿ ಹೊಡೆದು ಓರ್ವನನ್ನು ಬಲಿ ಪಡೆದಿದೆ.

Advertisement

ಢಿಕ್ಕಿ ಹೊಡೆದ ಕಾರಿನಲ್ಲಿ ಮದ್ಯದ ಬಾಟಲಿಗಳು ಪತ್ತೆಯಾಗಿದ್ದು ಅವುಗಳನ್ನು ವಶಪಡಿಸಿಕೊಳ್ಳಲಾಗಿದೆ ಎಂದು ಪೊಲೀಸ್‌ ಸುಪರಿಂಟೆಂಡೆಂಟ್‌ ರಾಜೀವ್‌ ಮಲ್ಹೋತ್ರಾ ತಿಳಿಸಿದ್ದಾರೆ.

ಕಾರು ಚಾಲಕನನ್ನು ಬಂಧಿಸಲಾಗಿದ್ದು ಪ್ರಕರಣದ ತನಿಖೆ ನಡೆಯುತ್ತಿದೆ ಎಂದವರು ಹೇಳಿದ್ದಾರೆ. 

ಸಚಿವ ಪ್ರಕಾಶ್‌ ಸಿಂಗ್‌ ಅವರು ಗಾಜಿಯಾಪುರದ ಜಮಾನಿಯಾ ಕ್ಷೇತ್ರದ ಸಮಾಜವಾದಿ ಪಕ್ಷದ ಶಾಸಕರಾಗಿದ್ದಾರೆ. ಕಾರು ಅಪಘಾತಕ್ಕೆ ಸ್ವಲ್ಪ ಮೊದಲು ಸಿಂಗ್‌ ಅವರು ಮಾಧ್ಯಮದೊಂದಿಗೆ ಮಾತನಾಡುತ್ತಾ “ಬಿಜೆಪಿ ನಾಯಕರು ಪ್ರಧಾನಿ ನರೇಂದ್ರ ಮೋದಿ ಅವರ ಅನೈತಿಕ ಸಂತಾನದವರಾಗಿದ್ದಾರೆ; ಮೋದಿ ಒಬ್ಬ ದೊಡ್ಡ ಸುಳ್ಳುಗಾರ. ಅವರು ಅಭಿವೃದ್ಧಿ ಸಾಧನೆಯ ದೊಡ್ಡ ದೊಡ್ಡ ಮಾತುಗಳನ್ನು ಆಡುತ್ತಿದ್ದಾರೆ; ಆದರೆ ವಾಸ್ತವದಲ್ಲಿ ಅವರು ಯಾವ ಅಭಿವೃದ್ಧಿಯನ್ನೂ ಸಾಧಿಸಿಲ್ಲ’ ಎಂದು ಜರೆದಿದ್ದರು. 

Advertisement

Udayavani is now on Telegram. Click here to join our channel and stay updated with the latest news.

Next