Advertisement

ಹೆರಿಗೆ ರಜೆ ಮೊಟಕುಗೊಳಿಸಿ ಕರ್ತವ್ಯಕ್ಕೆ ಹಾಜರ್‌!

12:49 AM Oct 14, 2020 | mahesh |

ಗಾಜಿಯಾಬಾದ್‌: ಉತ್ತರಪ್ರದೇಶದ ಗಾಜಿಯಾಬಾದ್‌ನ ಉಪವಿಭಾಗಾಧಿಕಾರಿ ಸೌಮ್ಯಾ ಪಾಂಡೆ ಬೇಗನೆ ಕೆಲಸಕ್ಕೆ ಹಾಜರಾಗುತ್ತಾರೆ ಎಂದು ನಿರೀಕ್ಷಿಸಿರಲೇ ಇಲ್ಲ. ಏಕೆಂದರೆ, 3 ವಾರಗಳ ಹಿಂದಷ್ಟೇ ಐಎಎಸ್‌ ಅಧಿಕಾರಿ ಸೌಮ್ಯಾ ಅವರಿಗೆ ಹೆರಿಗೆಯಾಗಿತ್ತು. ಹೆರಿಗೆ ರಜೆಯ ಮೇಲಿದ್ದ ಸೌಮ್ಯಾ, ನವಜಾತ ಶಿಶುವಿನೊಂದಿಗೆ ಕೆಲಸಕ್ಕೆ ಹಿಂದಿರುಗಿದ್ದಾರೆ. ಮಗುವನ್ನು ತೊಳಲ್ಲಿ ಎತ್ತಿಕೊಂಡೇ ಕಾಗದಪತ್ರಗಳಿಗೆ ಸಹಿ ಹಾಕುತ್ತಿರುವ ಅವರ ವೀಡಿಯೋ ಈಗ ವೈರಲ್‌ ಆಗಿದ್ದು, ಜನರು ಅವರ ಕರ್ತವ್ಯ ನಿಷ್ಠೆಯನ್ನು ಶ್ಲಾ ಸುತ್ತಿದ್ದಾರೆ. ಆದರೆ, ಇದೇ ವೇಳೆಯಲ್ಲೇ ನವಜಾತ ಶಿಶುವನ್ನು ಕಚೇರಿಗೆ ತಂದು ತಪ್ಪು ಮಾಡುತ್ತಿದ್ದಾರೆ ಎನ್ನುವ ಟೀಕೆಯೂ ವ್ಯಕ್ತವಾಗುತ್ತಿದೆ.

Advertisement

“3 ವಾರದ ಮಗುವಿಗೆ ಹೆಚ್ಚಿನ ಆರೈಕೆಯ ಅಗತ್ಯವಿರುತ್ತದೆ. ಈಗ ಕೋವಿಡ್‌-19 ಅಪಾಯವೂ ಅಧಿಕವಿರುವುದರಿಂದ ಮಗುವನ್ನು ಕಚೇರಿಗೆ ಕರೆ ತರುವುದು ಸರಿಯಲ್ಲ. ಸರಕಾರ ಹೆರಿಗೆ ರಜೆ ಕೊಟ್ಟಿರುವಾಗ ಅದನ್ನು ಏಕೆ ಬಳಸಬಾರದು? ಒಂದು ವೇಳೆ ಮನೆಯಲ್ಲಿ ಮಗುವನ್ನು ನೋಡಿಕೊಳ್ಳಲು ಯಾರೂ ಇಲ್ಲವೆಂದರೆ, ಮನೆಯಲ್ಲಿದ್ದುಕೊಂಡೇ ರಜೆ ಮುಂದುವರಿಸುವುದು ಒಳಿತಲ್ಲವೇ? ಮಗುವಿಗಿಂತ ಕೆಲಸ ಮುಖ್ಯವೇನು?’ ಎಂದೂ ಕೆಲವರು ಅಸಮಾಧಾನ ವ್ಯಕ್ತಪಡಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next