Advertisement

ಲವ್‌ ಜೆಹಾದ್‌ ನಿಗ್ರಹಿಸುವ ಉ.ಪ್ರ. ಅಧ್ಯಾದೇಶಕ್ಕೆ ರಾಜ್ಯಪಾಲರ ಅಂಕಿತ

11:52 PM Nov 28, 2020 | mahesh |

ಲಕ್ನೋ: ಮದುವೆಯಾಗುವುದಕ್ಕಾಗಿ ಬಲ ವಂತದ ಮತಾಂತರ ತಡೆಯಲು ಉತ್ತರಪ್ರದೇಶ ಸರಕಾರ, ಅಕ್ರಮ ಮತಾಂತರ ತಡೆ ಅಧ್ಯಾದೇಶವನ್ನು ಇತ್ತೀಚೆಗೆ ಜಾರಿ ಮಾಡಿದೆ. ಅದಕ್ಕೆ ರಾಜ್ಯಪಾಲೆ ಆನಂದಿಬೆನ್‌ ಪಟೇಲ್‌ ಒಪ್ಪಿಗೆ ನೀಡಿದ್ದಾರೆ.

Advertisement

ಮದುವೆ­ಯಾಗುವ ಒಂದೇ ಉದ್ದೇಶದಿಂದ ಯಾರನ್ನೂ ಮತಾಂತರ ಮಾಡು­ವಂತಿಲ್ಲ. ಮದುವೆಯಾದ ಅನಂತರ ಧರ್ಮವನ್ನು ಬದಲಿಸಿಕೊಳ್ಳಬೇಕು ಎಂಬ ಆಸಕ್ತಿಯಿದ್ದರೆ, ಜಿಲ್ಲಾ ದಂಡಾಧಿಕಾರಿಗಳಿಗೆ ಅರ್ಜಿ ಸಲ್ಲಿಸಬಹುದು. ಒಂದು ವೇಳೆ ಆದೇಶದ ಉಲ್ಲಂಘನೆಯಾದರೆ 10 ವರ್ಷ ಜೈಲುಶಿಕ್ಷೆಯೂ ಆಗಬಹುದು. ಅಧ್ಯಾದೇಶಕ್ಕೆ ಪ್ರಬಲ ಆಕ್ಷೇಪ ಮಾಡಿರುವ ಸಮಾಜವಾದಿ ಪಕ್ಷದ ಅಧ್ಯಕ್ಷ ಅಖೀಲೇಶ್‌ ಯಾದವ್‌, ಉದ್ಯೋಗವಿಲ್ಲದವರಿಗೆ ಉದ್ಯೋಗ ನೀಡುವ ಬಗ್ಗೆ ಅಧ್ಯಾದೇಶ ಜಾರಿ ಏಕಿಲ್ಲ ಎಂದು ಪ್ರಶ್ನೆ ಮಾಡಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next