ಉತ್ತರಪ್ರದೇಶ: ಶಾಲಾ ಬಸ್ ನಲ್ಲಿ ದೈತ್ಯ ಗಾತ್ರದ ಹೆಬ್ಬಾವೊಂದು ಪ್ರತ್ಯಕ್ಷವಾಗಿ ಆತಂಕ ಸೃಷ್ಟಿಸಿದ ಘಟನೆ ಭಾನುವಾರ ( ಅ.16 ರಂದು) ಉತ್ತರ ಪ್ರದೇಶ ರಾಯ್ ಬರೇಲಿಯಲ್ಲಿ ನಡೆದಿದೆ.
ರಾಯನ್ ಪಬ್ಲಿಕ್ ಸ್ಕೂಲ್ ಬಸ್ಸಿನ ಸೀಟಿನಡಿಯಲ್ಲಿ ಹೆಬ್ಬಾವು ಅಡಗಿಕೊಂಡು ಕೂತಿದ್ದು, ವಿಷಯ ತಿಳಿದ ಪಾಲಿಕೆ ಅಧಿಕಾರಿಗಳು ಸ್ಥಳಕ್ಕೆ ಧಾವಿಸಿ, ಅರಣ್ಯಾಧಿಕಾರಿಗಳ ಮೂಲಕ ಹೆಬ್ಬಾವನ್ನು ರಕ್ಷಿಸಿದ್ದಾರೆ.
ವರದಿಯ ಪ್ರಕಾರ ಶಾಲಾ ಬಸ್ ಚಾಲಕನ ಗ್ರಾಮದಲ್ಲಿ ಪಾರ್ಕ್ ಮಾಡಲಾಗಿತ್ತು. ಅಲ್ಲೇ ಪಕ್ಕದಲ್ಲಿ ಆಡುಗಳು ಸುತ್ತಿದ್ದವು. ಆಹಾರ ಅರಿಸಿಕೊಂಡು ಬಂದ ಹೆಬ್ಬಾವು ಜನರ ಶಬ್ಬ ಕೇಳಿ ಬಸ್ಸಿನ ಒಳಗೆ ಅವಿತಿಕೊಂಡಿದೆ. ಗ್ರಾಮಸ್ಥರು ವಿಷಯವನ್ನು ಸಂಬಂಧಪಟ್ಟ ಅಧಿಕಾರಿಗಳಿಗೆ ತಿಳಿಸಿದ್ದಾರೆ ಎಂದು ವರದಿ ತಿಳಿಸಿದೆ.
ಅದೃಷ್ಟವಶಾತ್ ಶಾಲೆಗೆ ರಜೆ ಇದ್ದ ಕಾರಣ ಯಾವುದೇ ಪ್ರಾಣಾಪಾಯವಾಗಿಲ್ಲ. ಸತತ ಒಂದು ಗಂಟೆ ಕಾರ್ಯಚರಣೆಯ ಬಳಿಕ ಹೆಬ್ಬಾವನ್ನು ಬಸ್ಸಿನಿಂದ ಹೊರ ತೆಗೆದು ರಕ್ಷಿಸಲಾಗಿದೆ. ಕಾರ್ಯಚರಣೆಯ ವಿಡಿಯೋ ವೈರಲ್ ಆಗಿದೆ.