Advertisement

ಅಯೋಧ್ಯೆಯಲ್ಲಿ ಕರ್ನಾಟಕ ಬೀಟೆ ಮರದ 7 ಅಡಿ ರಾಮನ ಮೂರ್ತಿ ಅನಾವರಣ!

11:39 AM Jun 08, 2019 | Nagendra Trasi |

ಲಕ್ನೋ:ಅಯೋಧ್ಯೆಯ ಶೋಧ್ ಸಂಸ್ಥಾನ ಮ್ಯೂಸಿಯಂನಲ್ಲಿ ಏಳು ಅಡಿ ಎತ್ತರದ ರಾಮನ ಮೂರ್ತಿಯನ್ನು ಶುಕ್ರವಾರ ಉತ್ತರಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅನಾವರಣಗೊಳಿಸಿದ್ದಾರೆ. ವಿಶೇಷವೆಂದರೆ ರಾಮನ ಮೂರ್ತಿ ತಯಾರಾಗಿದ್ದು ಕರ್ನಾಟಕದ ಬೀಟೆ ಮರದಲ್ಲಿ. ಇದಕ್ಕೆ ತಗಲಿರುವ ವೆಚ್ಚ 35 ಲಕ್ಷ ರೂಪಾಯಿ ಎಂದು ವರದಿ ತಿಳಿಸಿದೆ.

Advertisement

ಕರ್ನಾಟಕ ಸ್ಟೇಟ್ ಆರ್ಟ್ ಆ್ಯಂಡ್ ಕ್ರಾಫ್ಟ್ ಎಂಪೋರಿಯಂನಿಂದ ಈ ಮೂರ್ತಿಯನ್ನು ಖರೀದಿಸಲಾಗಿದೆ. ಬೀಟೆ ಅಪರೂಪದ ಮರವಾಗಿದ್ದು, ಇದರಲ್ಲಿ ರಾಮನ ಮೂರ್ತಿಯನ್ನು ಕೆತ್ತಲಾಗಿದೆ ಎಂದು ಹೇಳಿದೆ.

ಅಯೋಧ್ಯೆ ರಿಸರ್ಚ್ ಸೆಂಟರ್ ನಲ್ಲಿ ಈ ರಾಮನ ಪ್ರತಿಮೆ ಎಲ್ಲರ ಗಮನ ಸೆಳೆಯಲಿದೆ. ಇದೊಂದು ಅತೀ ಎತ್ತರದ ಹಾಗೂ ಅತ್ಯಂತ ಸುಂದರ ಕಲೆಗಳಿಂದ ಕೂಡಿದೆ ಎಂದು ವರದಿ ವಿವರಿಸಿದೆ.

ಯೋಗಿ ಆದಿತ್ಯನಾಥ್ ಶುಕ್ರವಾರ ಮಧ್ಯಾಹ್ನ  ಶ್ರೀರಾಮನ ಮೂರ್ತಿಯನ್ನು ಅನಾವರಣಗೊಳಿಸಿದ್ದಾರೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next