Advertisement

ಪ್ರಕೃತಿ ವಿಕೋಪ ಎದುರಿಸಲು ಅತ್ಯಾಧುನಿಕ ತಂತ್ರಜ್ಞಾನ ಬಳಕೆ: ವಾಡೆಟ್ಟಿವಾರ್‌

01:47 PM Aug 03, 2021 | Team Udayavani |

ನಾಗಪುರ, ಆ. 2: ಪ್ರವಾಹ, ಚಂಡಮಾರುತ ಮತ್ತು ಇತರ ನೈಸರ್ಗಿಕ ವಿಕೋಪಗಳನ್ನು ಸತತವಾಗಿ ಎದುರಿಸಲಾಗುತ್ತಿದೆ. ಪ್ರಾಣ ಹಾನಿ ಮತ್ತು ಆಸ್ತಿಪಾಸ್ತಿ ನಷ್ಟವನ್ನು ತಡೆಯಲು ರಾಜ್ಯ ವಿಪತ್ತು ನಿರ್ವಹಣ ಪಡೆಗೆ ಅತ್ಯಾಧುನಿಕ ಉಪಕರಣಗಳನ್ನು ಒದಗಿಸಲಾಗುತ್ತಿದ್ದು, ಪ್ರತೀ ಜಿಲ್ಲೆಯಲ್ಲಿ ಈ ವ್ಯವಸ್ಥೆಗೆ ಒತ್ತು ನೀಡಲಾಗುವುದು ಎಂದು ವಿಪತ್ತು ನಿರ್ವಹಣೆ, ಪರಿಹಾರ ಮತ್ತು ಪುನರ್ವಸತಿ ಸಚಿವ ವಿಜಯ್‌ ವಾಡೆಟ್ಟಿವಾರ್‌ ಹೇಳಿದ್ದಾರೆ.

Advertisement

ಹಿಂಗಾನದಲ್ಲಿರುವ ರಾಜ್ಯ ಮೀಸಲು ಪೊಲೀಸ್‌ ಪಡೆ ಪ್ರದೇಶದಲ್ಲಿ ರಾಜ್ಯ ವಿಪತ್ತು ನಿರ್ವಹಣ ಪಡೆಯ ಕಚೇರಿಗೆ ಭೇಟಿ ನೀಡಿದ ಸಚಿವರು ಪ್ರಕೃತಿ ವಿಕೋಪದ ಸಮಯದಲ್ಲಿ ಕೈಗೊಳ್ಳ ಬೇಕಾದ ಕ್ರಮಗಳ ಬಗ್ಗೆ ಪರಿಶೀಲನೆ ನಡೆಸಿದರು.

ಯಾವುದೇ ಜೀವಹಾನಿ ಇಲ್ಲದೆ ನೈಸರ್ಗಿಕ ವಿಕೋಪಗಳನ್ನು ಎದುರಿಸುವುದು ನಮ್ಮ ಮೊದಲ ಗುರಿ. ಈ ಉದ್ದೇಶಕ್ಕಾಗಿ ವ್ಯವಸ್ಥೆಯನ್ನು ಸಜ್ಜುಗೊಳಿಸಲಾಗಿದೆ. ರಾಜ್ಯ ವಿಪತ್ತು ನಿರ್ವಹಣ ಪಡೆಯ ಎರಡು ಘಟಕಗಳನ್ನು ನಾಗಪುರ ಮತ್ತು ಧುಲೆಗಳಲ್ಲಿ 2016ರಲ್ಲಿ ಆರಂಭಿಸಲಾಯಿತು ಎಂದರು.

ರಾಜ್ಯ ವಿಪತ್ತು ನಿರ್ವಹಣೆ ಪಡೆಯ ಸಿಬಂದಿಗೆ ರಾಷ್ಟ್ರೀಯ ವಿಪತ್ತು ನಿರ್ವಹಣೆ ಪಡೆ ಯಿಂದ ತರಬೇತಿ ನೀಡಲಾಗುತ್ತದೆ. ಆದ್ದ ರಿಂದ ಈ ಇಲಾಖೆಯನ್ನು ನವೀಕರಿ ಸಲಾಗುತ್ತದೆ. ಅತ್ಯಾಧುನಿಕ ತಂತ್ರಜ್ಞಾನವನ್ನು ಹೊಂದಿದ್ದರೆ ಪ್ರಬಲ ತಂಡವು ನೈಸರ್ಗಿಕ ವಿಕೋಪವನ್ನೂ ಯಶಸ್ವಿಯಾಗಿ ನಿಭಾಯಿಸಬಹುದು.

ಈ ಹಿನ್ನೆಲೆಯಲ್ಲಿ ನಾಗಪುರ ಜಿಲ್ಲೆಯು ಆರು ದೋಣಿಗಳನ್ನು ಪಡೆದುಕೊಂಡಿದೆ. ಕೇಂದ್ರ ಮತ್ತು ರಾಜ್ಯ ಸರಕಾರದ ಪಡೆಗಳ ಸಹಾಯದಿಂದ ರಾಜ್ಯ  ದಲ್ಲಿ ನೈಸರ್ಗಿಕ ವಿಪತ್ತುಗಳನ್ನು ಎದುರಿಸುವುದು ಸುಲಭವಾಗುತ್ತದೆ ಎಂದು ವಾಡೆಟ್ಟಿವಾರ್‌ ತಿಳಿಸಿದರು. ವಿಭಾಗೀಯ ಆಯುಕ್ತೆ ಪ್ರಾಜಕ್ತಾ ಲವಂಗರೆ-ವರ್ಮಾ, ಕಲೆಕ್ಟರ್‌ ವಿಮಲಾ ಆರ್‌., ರಾಜ್ಯ ಮೀಸಲು ಪೊಲೀಸ್‌ ಉಪ ನಿರೀಕ್ಷಕ ಮಹೇಶ್‌ ಘುರ್ಯೆ, ಕಮಾಂಡರ್‌ ಪಂಕಜ್‌ ದಹಾನೆ, ಉಪವಿಭಾಗಾಧಿಕಾರಿ ಇಂದಿರಾ ಮತ್ತಿತರರಿದ್ದರು.

Advertisement
Advertisement

Udayavani is now on Telegram. Click here to join our channel and stay updated with the latest news.

Next