ಕೆ.ಆರ್.ಪೇಟೆ: ರೈತರಿಗಾಗಿಯೇ ಸೇವೆ ಸಲ್ಲಿಸುತ್ತಿರುವ ಪಿಕಾರ್ಡ್ ಬ್ಯಾಂಕ್‌ನ ಸೇವೆ ತಾಲೂಕಿನ ಸರ್ವ ರೈತರು ಬಳಸಿಕೊಳ್ಳಬೇಕು ಎಂದು ಪೀಕಾರ್ಡ್ ಬ್ಯಾಂಕ್ ಅಧ್ಯಕ್ಷ ಪುಟ್ಟಸ್ವಾಮಿಗೌಡ ಮನವಿ ಮಾಡಿದರು.
ಪಟ್ಟಣದ ಪಿಕಾರ್ಡ್ ಬ್ಯಾಂಕಿನಲ್ಲಿ ಆರಂಭಿಸಿರುವ ಆರ್‌ಟಿಸಿ ಮತ್ತು ಛಾಪಾ ಕಾಗದ ವಿತರಣಾ ಕೇಂದ್ರದ ಉದ್ಘಾಟನಾ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು,
ನಮ್ಮ ಬ್ಯಾಂಕ್‌ನಲ್ಲಿ ಮೇಕೆ, ಕುರಿ, ಕೋಳಿ ಫಾರಂ, ಹಂದಿ ಸಾಕಾಣಿಕೆ ಸೇರಿದಂತೆ ವಿವಿಧ ಉದ್ಯಮಗಳಿಗೆ ಸಾಲ ಸೌಲಭ್ಯ ನೀಡಲಾಗುವುದು. ಅಲ್ಪಾವಧಿ ಧೀರ್ಘಾವಧಿ ಬೆಳೆ ಸಾಲ, ಆರ್‌ಟಿಸಿ ಹೊಂದಿದ ಎಲ್ಲಾ ರೈತರಿಗೂ ನೀಡಲಾ ಗುವುದು. ಹೈನುಗಾರಿಕೆ, ದ್ವಿಚಕ್ರ ವಾಹನ, ಟ್ರ್ಯಾಕ್ಟರ್ ಸಾಲ, ಭತ್ತ ಕಟಾವು ಯಂತ್ರದ ಸಾಲ, ಹಲ್ಲರ್ ಮಿಲ್ ಸಾಲ, ನಿರು ದ್ಯೋಗಿ ಸ್ವಉದ್ಯೋಗ ಕೈಗೊಳ್ಳಲು ಸಾಲ ನೀಡಲಾಗುತ್ತಿದೆ. ಗ್ರಾಹಕರು ಸಕಾಲದಲ್ಲಿ ಸಾಲ ಮರು ಪಾವತಿ ಮಾಡಿ ಬ್ಯಾಂಕಿನ ಅಭಿವೃದ್ಧಿಗೆ ಸಹಕರಿಸಬೇಕೆಂದು ಮನವಿ ಮಾಡಿದರು. ಶಾಖಾ ವ್ಯವಸ್ಥಾಪಕ ಗಂಗಾಧರ್ ಮಾತನಾಡಿ, ಈಗ ಬ್ಯಾಂಕಿ ನಲ್ಲಿ ರೈತರ ಅನುಕೂಲಕ್ಕಾಗಿ ಪಹಣಿ (ಆರ್‌ಟಿಸಿ) ಮತ್ತು ಛಾಪಾ ಕಾಗದ ನೀಡುವ ಕೌಂಟರ್ ತೆರೆಯಲಾಗಿದೆ. ರೈತರು ಸದುಪಯೋಗ ಪಡಿಸಿ ಕೊಳ್ಳಬೇಕು ಎಂದು ತಿಳಿಸಿದರು.
ಈ ಸಂದರ್ಭದಲ್ಲಿ ಬ್ಯಾಂಕ್ ಮಾಜಿ ಅಧ್ಯಕ್ಷರಾದ ರವಿಕುಮಾರ್, ನಾಗ ರಾಜು, ನಿರ್ದೇಶಕರಾದ ನಂಜಪ್ಪ, ಅಣ್ಣೆ ಚಾಕನಹಳ್ಳಿ ನಾಗರಾಜು, ಬಣ್ಣೇನಹಳ್ಳಿ ಧನಂಜಯ, ಶಾಂತಮ್ಮ, ತಿಮ್ಮೇಗೌಡ, ಮುಬಿನ್ ತಾಜ್, ಶಿವರಾಜು ಮೊದಲಾದವರು ಹಾಜರಿದ್ದರು.