ಮಾಲೂರು: ರೈತರು ಮತ್ತು ಮಹಿಳಾ ಸ್ವಸಹಾಯ, ಸ್ತ್ರೀಶಕ್ತಿ ಸಂಘಗಳಿಗೆ ಡಿಸಿಸಿ ಬ್ಯಾಂಕ್ ವತಿಯಿಂದ ಸರ್ಕಾರ ಬಡ್ಡಿ ರಹಿತ ಸಾಲ ವಿತರಣೆ ಮಾಡುತ್ತಿದ್ದು ಸಾಲ ಪಡೆದು ಆರ್ಥಿಕವಾಗಿ, ಶೈಕ್ಷಣಿಕವಾಗಿ ಮುಂದೆ ಬರಬೇಕು ಎಂದು ಶಾಸಕ ಕೆ.ವೈ. ನಂಜೇಗೌಡ ತಿಳಿಸಿದರು.
ತಾಲೂಕಿನ ದೊಡ್ಡಶಿವಾರ ಗ್ರಾಮದ ರೇಷ್ಮೆ ಬೆಳೆಗಾರರ ಹಾಗೂ ರೈತರ ಸೇವಾ ಸಹಕಾರ ಸಂಘದ ವತಿಯಿಂದ ತಾಲೂಕಿನ 60 ಮಹಿಳಾ ಸಂಘಗಳಿಗೆ ಸುಮಾರು 2.40 ಕೋಟಿ ರೂ.ಗಳ ಸಾಲ ವಿತರಿಸಿ ಮಾತನಾಡಿದರು.
ಕಳೆದ ಅವಧಿಯಲ್ಲಿ ಮುಖ್ಯಮಂತ್ರಿಗಳಾಗಿದ್ದಸಿದ್ದ ರಾಮಯ್ಯನವರ ನೇತೃತ್ವದ ಕಾಂಗ್ರೆಸ್ ಸರ್ಕಾರ ಬಡವರಿಗೆ, ರೈತರಿಗೆ, ಮಹಿಳೆಯರಿಗೆ ಹಾಗೂ ಸ್ತ್ರೀಶಕ್ತಿ ಸಂಘಗಳಿಗೆ ಸಹಕಾರಿ ಸಂಘಗಳ ಮೂಲಕ ಬಡ್ಡಿ ರಹಿತ ಸಾಲ ನೀಡುವ ಯೋಜನೆ ತಂದಿತ್ತು. ಸಾಲದ ನಿಯಮಗಳು ಬೇಷರತ್ತಿನಿಂದ ಕೂಡಿದ್ದು, ಎಲ್ಲರೂ ಸಾಲ ಪಡೆದು ಉತ್ತಮ ಜೀವನ ನಡೆಸಲಿಎಂಬ ಉದ್ದೇಶ ಹೊಂದಲಾಗಿತ್ತು ಎಂದರು.
ತೀರ್ಮಾನ:ಕೆಲ ವರ್ಷಗಳ ಹಿಂದೆ ಡಿಸಿಸಿ ಬ್ಯಾಂಕ್ ಮುಚ್ಚುವ ಹಂತದಲ್ಲಿತ್ತು. ಅದನ್ನು ಈ ಸ್ಥಾನಕ್ಕೆ ತರುವಲ್ಲಿ ಡಿಸಿಸಿ ಬ್ಯಾಂಕ್ ಅಧ್ಯಕ್ಷ ಬ್ಯಾಲಹಳ್ಳಿ ಗೋವಿಂದಗೌಡರು ಪ್ರಮುಖ ಪಾತ್ರ ವಹಿಸಿ ದ್ದಾರೆ ಕಳೆದ ಬೆಳಗಾವಿ ಅಧಿವೇಶನದಲ್ಲಿ ಸ್ಪೀಕರ್ ರಮೇಶ್ ಕುಮಾರ್ ಹಾಗೂ ತಾನು ಸದ ನದ ಸಭೆಯಲ್ಲಿ ಸರ್ಕಾರದಿಂದ ಬಿಡುಗಡೆಯಾಗುವ ಅನುದಾನಗಳ ಹಣವನ್ನು ಖಾಸಗಿ ಬ್ಯಾಂಕ್‌ಗಳಿಗೆ ನೀಡದೆ, ಸಹಕಾರಿ ಬ್ಯಾಂಕುಗಳಿಗೆ ನೀಡಿದಾಗ ಸಹ ಕಾರಿಬ್ಯಾಂಕುಗಳ ವ್ಯವಹಾರ ದುಪ್ಪಟ್ಟಾಗಿ ಆರ್ಥಿಕತೆಯಿಂದ ಬೆಳವಣಿಗೆಯಾಗುತ್ತದೆ. ಇನ್ನೂ ಹೆಚ್ಚಿನ ಸಾಲ ವಿತರಣೆ ಮಾಡಬಹುದು ಎಂದು ಪ್ರಸ್ತಾವನೆ ಸಲ್ಲಿಸಿದ್ದೆ. ಇದರ ಬಗ್ಗೆ ಸರ್ಕಾರ ಸೂಕ್ತ ತೀರ್ಮಾನ ಕೈಗೊಳ್ಳುತ್ತದೆ ಎಂದು ತಿಳಿಸಿದರು.
ಶೀಘ್ರ ಕಾಮಗಾರಿ:ತಾಲೂಕಿನ ಅಭಿವೃದ್ಧಿಗೆ ಈಗಾಗಲೇ ಸುಮಾರು 180 ಕೋಟಿ ರೂ.ಗಳಷ್ಟು ಅನುದಾನ ತರಲಾಗಿದೆ. ರಸ್ತೆ ಹಾಗೂ ಪಟ್ಟಣದ ಅಭಿವೃದ್ಧಿಗೆ 18ಕೋಟಿ ಹಾಗೂ ವಿಶ್ವ ಪ್ರಸಿದ್ಧ ಶಿವಾರಪಟ್ಟಣ ಶಿಲ್ಪಿ ಗ್ರಾಮಕ್ಕೆ 13 ಕೋಟಿ ರೂ., ಮಾಸ್ತಿ ಕನ್ನಡದ ಆಸ್ತಿ ಎಂಬ ನಾಣ್ಣುಡಿಯಂತೆ ಮಾಸ್ತಿ ವೆಂಕಟೇಶ್ ಅಯ್ಯಂ ಗಾರ್‌ರ ಹೆಸರಲ್ಲಿ ಸುಮಾರು 25 ಕೋಟಿ ರೂ.,ಗಳ ವಸತಿ ಶಾಲೆ ನಿರ್ಮಿಸಲಾಗುವುದು. ಈ ಕುರಿತು ಜಾಗ ಗುರುತಿಸಿದ್ದು ಶೀಘ್ರದಲ್ಲೇ ಕಾಮಗಾರಿ ಪ್ರಾರಂಭಿಸುವುದಾಗಿ ತಿಳಿಸಿ ದರು. ಈ ವೇಳೆ ಡಿಸಿಸಿ ಬ್ಯಾಂಕ್ ನಿರ್ದೇಶಕ ಚನ್ನ ಯಪ್ಪ, ಕೆಪಿಸಿಸಿ ಕಾರ್ಯದರ್ಶಿ ಎಸ್.ಎನ್. ರಘುನಾಥ್, ದೊಡ್ಡಶಿವಾರ ಗ್ರಾಪಂ ಅಧ್ಯಕ್ಷ ಹನುಮಂತರೆಡ್ಡಿ, ಹುಂಗೇನಹಳ್ಳಿ ಗ್ರಾಪಂ ಅಧ್ಯಕ್ಷ ಕೃಷ್ಣಪ್ಪ, ದೊಡ್ಡ ಶಿವಾರ ರೇಷ್ಮೆ ಬೆಳೆಗಾರರ ಹಾಗೂ ರೈತರ ಸೇವಾ ಸಹಕಾರ ಸಂಘದ ಅಧ್ಯಕ್ಷ ಗೋವರ್ಧನರೆಡ್ಡಿ, ಯೋಜನಾ ಪ್ರಾಧಿಕಾರದ ಅಧ್ಯಕ್ಷ ಸಿ.ಪಿ. ವೆಂಕಟೇಶ್, ಸದಸ್ಯರಾದ ಮಂಜುನಾಥರೆಡ್ಡಿ, ಶಬೀರ್, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಸಿ.ರಾಜಣ್ಣ, ಪುರಸಭಾ ಸದಸ್ಯ ಅಶ್ವತ್ಥರೆಡ್ಡಿ, ಗ್ರಾಪಂ ಸದಸ್ಯ ಶ್ರೀನಾಥ್, ಮುಖಂಡರಾದ ನಾರಾಯಣಸ್ವಾಮಿ ಇದ್ದರು