ಭಟ್ಕಳ: ಚಿತ್ರಾಪುರ ಸಂಸ್ಥಾನದಲ್ಲಿ ರಥೋತ್ಸವದಂಗವಾಗಿ ನಡೆದ ಖ್ಯಾತ ಹಿಂದೂಸ್ಥಾನಿ ಶಾಸ್ತ್ರೀಯ ಸಂಗೀತ ಕಾರ್ಯಕ್ರಮದಲ್ಲಿ ಗಾಯಕ ಪದ್ಮಶ್ರೀ ಉಸ್ತಾದ್ ರಶೀದ್ ಖಾನ್‌ರ ಗಾಯನ ನೆರೆದವರ ಮನ ಸೂರೆಗೊಂಡಿತು.
ಪದ್ಮಶ್ರೀ ಉಸ್ತಾದ್ ರಶೀದ್ ಖಾನ್‌ರ ಜೊತೆಯಲ್ಲಿ ಪದ್ಮಶ್ರೀ ಪಂ|ವಿಜಯ್ ಘಾಟೆ ತಬಲಾದಲ್ಲಿ, ಅಜಯ್ ಜೋಗಳೇಕರ್ ಹಾರ್ಮೋನಿಯಮ್‌ನಲ್ಲಿ, ಮುರಾದ್ ಅಲಿ ಸಾರಂಗಿಯಲ್ಲಿ, ಅಮರ್ ಸಂಗಮ್ ಗಿಟಾರ್‌ನಲ್ಲಿ, ಮಂದಾರ್ ತಿಲವಾಲ್ಕರ್ ಕೀಬೋರ್ಡ್‌ನಲ್ಲಿ ಅರ್ಮಾನ್ ಖಾನ್ ಸಂಗೀತದಲ್ಲಿ, ಶಿವಾನಿ ಕಲ್ಯಾಣಪುರ್ ಹಾಗೂ ಸೌಂಡ್ ಇಂಜಿನಿಯರ್ ತೇಜಸ್ವೀರಾವ್ ಸಹಕರಿಸಿದರು.
ಚಿತ್ರಾಪುರ ಮಠಾಧೀಶ ಸದ್ಯೋಜಾತ ಶಂಕರಾಶ್ರಮ ಸ್ವಾಮೀಜಿ ಹಾಗೂ ಮೌಂಟ್ ಅಬುವಿನಿಂದ ಆಗಮಿಸಿದ್ದ ಭುವನಾನಂದ ಗಿರಿ ಸ್ವಾಮೀಜಿ ಉಪಸ್ಥಿತರಿದ್ದರು.
ನಾರಾಯಣ ಮಲ್ಲಾಪುರ್ ಸ್ವಾಗತಿಸಿ, 11ನೇ ವಯಸ್ಸಿನಲ್ಲಿಯೇ ಸಂಗೀತ ಕಾರ್ಯಕ್ರಮ ನೀಡಿದ ಇವರು, ಸಂಗೀತದ ಅಘಾದ ಅನುಭವ ಹೊಂದಿದ್ದು ಪದ್ಮಶ್ರೀ ಸೇರಿದಂತೆ ಹಲವಾರು ಅತ್ಯುನ್ನತ ಪ್ರಶಸ್ತಿ ಪಡೆದಿದ್ದಾರೆ. ಸಂಗೀತ ಅಕಾಡೆಮಿಯನ್ನು ಸ್ಥಾಪಿಸಿ ಅನೇಕ ಸಂಗೀತಗಾರರನ್ನು ನಾಡಿಗೆ ಪರಿಚಯಿಸುತ್ತಿದ್ದಾರೆ ಎಂದರು.
Advertisement
ಪೂರ್ಯ ಧನಶ್ರೀ ರಾಗದಿಂದ ಸಂಗೀತ ಆರಂಭಿಸಿದ ಅವರು ನಂತರ ವಿವಿಧ ರಾಗಗಳಲ್ಲಿ ತಮ್ಮ ಸಂಗೀತ ಸುಧೆ ಹರಸಿದರು.
Related Articles
Advertisement
ಸ್ಟಾಂಡಿಂಗ್ ಕಮಿಟಿ ಅಧ್ಯಕ್ಷ ಪ್ರವೀಣ್ ಕಡ್ಲೆ ಪ್ರಾಸ್ತಾವಿಕ ಮಾತನಾಡಿದರು. ನಂತರ ಶ್ರೀ ಮಠದ ವತಿಯಿಂದ ಸಂಗೀತಗಾರರನ್ನು ಗೌರವಿಸಲಾಯಿತು.