Advertisement

ರಷ್ಯಾ ಪ್ರಧಾನಿ ಮಿಖಾಯಿಲ್ ಮಿಶುಸ್ಟಿನ್ ಅವರಿಗೆ ಕೋವಿಡ್ -19 ಸೋಂಕು ದೃಢ

08:25 AM May 02, 2020 | Mithun PG |

ಮಾಸ್ಕೋ: ರಷ್ಯಾದ ಪ್ರಧಾನಿ ಮಿಖಾಯಿಲ್ ಮಿಶುಸ್ಟಿನ್ ಅವರಿಗೆ ಕೋವಿಡ್ 19 ಸೋಂಕು ಇರುವುದು ದೃಢಪಟ್ಟಿದೆ.  ಈ ಮೂಲಕ  ಸೋಂಕಿಗೆ ಒಳಗಾದ ರಷ್ಯಾದ ಮೊದಲ ಅತ್ಯುನ್ನತ ಶ್ರೇಣಿಯ ಅಧಿಕಾರಿಯಾಗಿದ್ದಾರೆ ಮಾಧ‍್ಯಮ ವರದಿ ಮಾಡಿದೆ.

Advertisement

ಇದರ ಬೆನ್ನಲ್ಲೇ ಮಿಖಾಯಿಲ್ ಮಿಶಸ್ಟಿನ್,  ಅಧ್ಯಕ್ಷ ವ್ಲಾಡಿಮಿರ್ ಪುಟಿನ್ ಅವರಿಗೆ ವೀಡಿಯೊ ಕರೆ ಮಾಡಿ        ಸ್ವಯಂ-ಪ್ರತ್ಯೇಕವಾಗುವುದಾಗಿ ತಿಳಿಸಿದ್ದಾರೆ. 54 ವರ್ಷದ ಮಿಖಾಯಿಲ್ ಜನವರಿಯಲ್ಲಿ ಪ್ರಧಾನಿ ಹುದ್ದೆ ಅಲಂಕರಿಸಿದ್ದರು. ಇದೀಗ ಉಪ ಪ್ರಧಾನಿ ಮಂತ್ರಿ ಆಂಡ್ರೇ ಬೆಲೌಸೊವ್ ತಾತ್ಕಾಲಿಕವಾಗಿ ಮಿಶುಸ್ಟಿನ್ ಅವರ ಕರ್ತವ್ಯಗಳನ್ನು ನಿರ್ವಹಿಸಲಿದ್ದಾರೆ.

ರಷ್ಯಾಧ ಅಧ್ಯಕ್ಷ ಪುಟಿನ್ , ದೇಶದಲ್ಲಿ ಕೋವಿಡ್ 19 ಸೋಂಕು ಕಾಣಿಸಿಕೊಂಡಾಗಿನಿಂದ ಸಭೆಗಳಲ್ಲಿ ಪಾಲ್ಗೊಂಡಿರಲಿಲ್ಲ. ಹೀಗಾಗಿ ಮಿಖಾಯಿಲ್ ಅವರನ್ನೂ ಕೂಡ ಭೇಟಿಯಾಗಿರಲಿಲ್ಲ.  ರಷ್ಯಾದಲ್ಲಿ ಆರ್ಥಿಕ ವಿಚಾರಗಳನ್ನು ಮೇಲ್ವೀಚಾರಣೆ ನಡೆಸುವುದು ಮತ್ತು ಅಧ್ಯಕ್ಷರಿಗೆ ಮಾಹಿತಿ ನೀಡುವುದು ಪ್ರಧಾನಿಯ ಜವಾಬ್ದಾರಿಯಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next