Advertisement
ದಾವೂದ್ ಕೂರ್ಗ್: ಇದು ಒಂದು ರೀತಿಯ ಪಾಲಾಯನಾವಾದ. ಜನತೆ ಅಭಿವ್ರಿದ್ಧಿಯನ್ನು ಬಯಸುತ್ತಿದ್ದಾರೆ. ಆದರೆ ಉದ್ದೇಶಿತ ರೀತಿಯಲ್ಲಿ ಅದನ್ನು ಸಾದಿಸಲಾಗದೆ ಆರ್ಥಿಕತೆ ಹಿಂದೆಂದೂ ಕಂಡರಿಯದ ರೀತಿಯಲ್ಲಿ ಕುಸಿಯುತ್ತಿರ ಬೇಕಾದರೆ, ಜನರ ಗಮನವನ್ನು ಎಂದೋ ಮುಗಿದುಹೋದ 100 ವರ್ಷ ಹಿಂದಿನ ವಿವಾದಾತ್ಮಕ ವಿಷಯಗಳತ್ತ ಹೊರಳಿಸಿ ದೇಶವನ್ನು ಹಿಂದಕ್ಕೆ ಕೊಂಡುಹೋಗಲಷ್ಟೇ ಇದರಿಂದ ಪ್ರಯೋಜನವಾದೀತು. ನಮ್ಮ ದೇಶ ಮುಂದಿನ 10 ವರ್ಷಗಳಲ್ಲಿ ಹೇಗೆ ಇರಬೇಕು. ನಮ್ಮ ಕಾರ್ಯಯೋಜನೆಗಳೇನು. ಹಸಿವುಮುಕ್ತ, ಬಡತನ ಮುಕ್ತ ಭಾರತಕ್ಕಾಗೆ ನಾವು ಹೇಗೆ ತಯಾರಾಗಬೇಕು ಎಂಬುದರ ಬಗ್ಗೆ ದೇಶ ವ್ಯಾಪಕ ಚರ್ಚೆಗಳು, ವಾದಗಳು ನಡೆಯಲಿ. ಧನಾತ್ಮಕ ಚರ್ಚೆಗಳು ನಡೆಯಲಿ. ಜೈ ಭಾರತ್.
Related Articles
Advertisement
ರಂಗರಾಜು ಅಂಬುಗ: ಎಷ್ಟೋ ಜನಕ್ಕೆ ನಿಜವಾದ ಇತಿಹಾಸ ತಿಳಿದೇ ಇಲ್ಲ . ಅಂಥಹವರೆಲ್ಲರಿಗೂ ಅರ್ಥವಾಗುವತನಕ ಇತಿಹಾಸವನ್ನು ಕೆದಕುತ್ತಲೇ ಇರಬೇಕು .
ದಯಾನಂದ ಕೊಯಿಲ: ನಾವು ಹಿಂದುಳಿದದ್ದು ಇಲ್ಲೇ ಇರ್ಬೇಕು ಎಲ್ಲಿ ಹೋದ್ರೂ ಹಿಂದೆ ಹಾಗಿದ್ದ್ವೀ ಹೀಗಿದ್ವೀ ಅಂತ ಹೇಳ್ತಾ ಇರ್ತಾರೆ ಮುಂದೆ ಹಾಗಾಗ್ಬೇಕು ಹೀಗಾಗ್ಬೇಕು ಅಂತ ಹೇಳೋರು ಕಮ್ಮಿ ಏನ್ಮಾಡೋದು?
ಗೌತಮ್ ಶೆಟ್ಟಿ: ಇತಿಹಾಸದ ತಪ್ಪು ಗಳಿಂದ ಪಾಠ ಕಲಿಯದ ಮನುಷ್ಯನಿಗೆ ಭವಿಷ್ಯ ಅದೇ ತಪ್ಪನ್ನು ಮತ್ತೆ ಮಾಡಿಸುತ್ತದೆ.
ಮುಕೇಶ್ ಕುಮಾರ್ : ಎಷ್ಟೋ ಜನಕ್ಕೆ ನಿಜವಾದ ಇತಿಹಾಸ ತಿಳಿದೇ ಇಲ್ಲ. ಅಂಥಹವರೆಲ್ಲರಿಗೂ ಅರ್ಥವಾಗುವತನಕ ಇತಿಹಾಸವನ್ನು ಕೆದಕುತ್ತಲೇ ಇರಬೇಕು.