Advertisement
ಸದ್ಯಕ್ಕೆ ತಿರುಪತಿಯಲ್ಲಿ ಲಡ್ಡು ಪ್ರಸಾದವನ್ನು ಪಾಲಿಥಿನ್ (ಪ್ಲಾಸ್ಟಿಕ್) ಬ್ಯಾಗ್‌ಗಳಲ್ಲಿ ವಿತರಿಸಲಾಗುತ್ತಿದೆ. ಇದರ ಬದಲಿಗೆ ಬಯೋ-ಡೀಗ್ರೇಡಬಲ್(ಜೈವಿಕ ವಿಘಟ ನೀಯ) ಪ್ಲಾಸ್ಟಿಕ್ ಕವರ್‌ಗಳು, ಬಟ್ಟೆ ಬ್ಯಾಗುಗಳನ್ನು ಉಪಯೋಗಿಸಲು ಟಿಟಿಡಿ ಆಲೋಚಿಸಿತ್ತಾದರೂ, ಫುಡ್ ಗ್ರೇಡ್ ಕಾಗದದ ಬಾಕ್ಸ್‌ಗಳೇ ಉತ್ತಮ ಎಂಬ ನಿರ್ಧಾರಕ್ಕೆ ಟಿಟಿಡಿ ಬಂದಿದೆ. ಈ ಬಾಕ್ಸ್‌ಗಳು ಬೇಕರಿ, ಸಿಹಿ ತಿನಿಸುಗಳ ಅಂಗಡಿಗಳಲ್ಲಿ ನೀಡುವ ಪೇಪರ್ ಬಾಕ್ಸ್ಗಳಂತೆಯೇ ಇರಲಿದ್ದು, ಈಗಾಗಲೇ ಶ್ರೀಶೈಲ ದೇಗುಲದಲ್ಲಿ ಪ್ರಸಾದ ವಿನಿಯೋಗಕ್ಕಾಗಿ ಈ ಮಾದರಿಯ ಬಾಕ್ಸ್‌ಗಳ ಉಪಯೋಗ ಯಶಸ್ವಿಯಾಗಿರುವ ಹಿನ್ನೆಲೆಯಲ್ಲಿ ತಿರುಪತಿಯಲ್ಲೂ ಇದನ್ನೇ ಟಿಟಿಡಿ ಆಯ್ಕೆ ಮಾಡುವುದು ಬಹುತೇಕ ಖಚಿತ ಎಂದು “ದಿ ಹಿಂದೂ’ ವರದಿ ಮಾಡಿದೆ. ಇದು ಜಾರಿಗೊಂಡಲ್ಲಿ ಲಡ್ಡುಗಳ ಸಂಖ್ಯೆಗೆ ಅನುಗುಣವಾಗಿ ಮೂರು ಅಳತೆಯ ಬಾಕ್ಸ್‌ಗಳನ್ನು ತಯಾರಿಸಲಾಗುತ್ತದೆ.
ಅನಿಲ್ ಕುಮಾರ್ ಸಿಂಘಾಲ್, ಟಿಟಿಡಿ ಆಡಳಿತಾಧಿಕಾರಿ