Advertisement

PG ಪೂರೈಸಿದವರಿಗೆ ಉಪಯುಕ್ತ ನಿಯಮ- ವೈದ್ಯ ಪದವಿ ಮುಗಿಸಿದವರಿಗೆ ಫೆಲೋಶಿಪ್‌ ಪಡೆಯುವ ಅವಕಾಶ

12:58 AM Jan 06, 2024 | Team Udayavani |

ಹೊಸದಿಲ್ಲಿ: ಭಾರತೀಯ ವೈದ್ಯಕೀಯ ವ್ಯವಸ್ಥೆಯಲ್ಲಿ ಪರಿಣಾಮಕಾರಿ ಸುಧಾರಣೆಗಳನ್ನು ತರುವ ನಿಯಮವೊಂದನ್ನು, ಇದೇ ಮೊದಲ ಬಾರಿಗೆ ಎನ್‌ಎಂಸಿ (ಭಾರತೀಯ ವೈದ್ಯಕೀಯ ಆಯೋಗ) ಬಿಡುಗಡೆ ಮಾಡಿದೆ. ವೈದ್ಯ ಪದವಿಯನ್ನು ಪೂರೈಸಿದ ವಿದ್ಯಾರ್ಥಿ­ಗಳು ಇನ್ನು ಫೆಲೋಶಿಪ್‌ ಕೋರ್ಸ್‌ ಗಳ ನ್ನು ಮಾಡಬಹುದು. ವೈದ್ಯಕೀಯ ಕಾಲೇಜುಗಳೂ ಅಧಿಕೃತವಾಗಿ ಫೆಲೋ ಶಿಪ್‌ ಕೋರ್ಸ್‌ಗಳನ್ನು ಆರಂಭಿಸ­­ಬಹುದು, ಅದಕ್ಕೆ ಸರಕಾರದ ಮಾನ್ಯತೆ ಸಿಗಲಿದೆ. ಇದರಿಂದ ಸಂಶೋಧನೆಗಳಿಗೆ ಉತ್ತೇ ಜನ ಸಿಗಲಿದೆ. ನೂತನ ವೈದ್ಯರ ವೈದ್ಯಕೀಯ ಕೌಶಲವೂ ವೃದ್ಧಿಸಲಿದೆ. ಈ ಹಿಂದೆ ವೈದ್ಯಕೀಯ ಸಂಸ್ಥೆಗಳು ನೂತನ ವೈದ್ಯರ ಕೌಶಲ ವೃದ್ಧಿಸಲು ತಾವೇ ಇಂತಹ ಕೋರ್ಸ್‌ಗಳನ್ನು ಮಾಡುತ್ತಿದ್ದವು.

Advertisement

ಲಾಭಗಳೇನು?: ವೈದ್ಯ ಪದವಿಯನ್ನು ಪೂರೈಸಿರುವ ವಿದ್ಯಾರ್ಥಿಗಳು, ಇನ್ನು ಪೂರ್ಣ ಪ್ರಮಾಣದಲ್ಲಿ ನಿವಾಸಿ ವೈದ್ಯರಾಗಿ ಕರ್ತವ್ಯ ನಿರ್ವಹಿಸ ಬಹುದು. ಹಾಗೆಯೇ ಅವರು ದಿನವೊಂದಕ್ಕೆ ಎಷ್ಟು ಕೆಲಸ ಮಾಡಬೇಕು ಎಂದು ವಾಸ್ತವಿಕ ಆಧಾರದಲ್ಲಿ ನಿರ್ಧರಿಸಲಾಗುತ್ತದೆ. ಅವರಿಗೆ ಅಗತ್ಯ ವಿಶ್ರಾಂತಿಯನ್ನೂ ನೀಡಲಾಗುತ್ತದೆ. ವರ್ಷಕ್ಕೆ 20 ಕ್ಯಾಶುಯಲ್‌ ಲೀವ್‌ಗಳು, 5 ಶೈಕ್ಷಣಿಕ ರಜೆ. ವಾರಕ್ಕೊಮ್ಮೆ ರಜೆಯೂ ಸಿಗಲಿದೆ.

Advertisement

Udayavani is now on Telegram. Click here to join our channel and stay updated with the latest news.

Next