Advertisement

ಕೃಷಿ ಮೇಳ ರೈತರಿಗೆ ಉಪಯುಕ್ತ: ಡೀಸಿ

01:28 PM Dec 07, 2019 | Suhan S |

ಮಂಡ್ಯ: ರೈತರು ಹಾಗೂ ಯುವ ಸಮುದಾಯ ಕೃಷಿಯನ್ನು ಅವಲಂಬಿಸಲು ಹಾಗೂ ಬೇಸಾಯವನ್ನು ಲಾಭದಾ ಯಕ ಮಾಡಿಕೊಳ್ಳುವುದಕ್ಕೆ ಕೃಷಿ ಮೇಳ ಹೆಚ್ಚು ಸಹಕಾರಿಯಾಗಿದೆ ಎಂದು ಜಿಲ್ಲಾಧಿಕಾರಿ ಡಾ. ವೆಂಕಟೇಶ್‌ ಅಭಿಪ್ರಾಯಪಟ್ಟರು.

Advertisement

ತಾಲೂಕಿನ ವಿ.ಸಿ.ಫಾರಂನಲ್ಲಿ ಎರಡು ದಿನಗಳ ಕೃಷಿ ಮೇಳಕ್ಕೆ ಚಾಲನೆ ನೀಡಿ ಮಾತನಾಡಿ, ರೈತರು ಉತ್ತಮ ಬದುಕನ್ನು ಕಟ್ಟಿಕೊಳ್ಳಲು ಅವಶ್ಯಕವಾದ ಬೆಳೆ ಪದ್ಧತಿ, ಹೈಬ್ರಿಡ್‌ ಬೆಳೆಗಳಿಂದ ಹೆಚ್ಚಿನ ಇಳುವರಿ ಪಡೆಯುವ ವಿಧಾನವನ್ನು ಇಲ್ಲಿ ಪ್ರದರ್ಶಿಸಲಾಗುತ್ತಿದೆ. ಮುಸುಕಿನ ಜೋಳ, ಭತ್ತ, ತರಕಾರಿಗಳು ಬೆಳೆ ಬೆಳೆಯುವ ಹಲವಾರು ಮಾದರಿಗಳು ಹಾಗೂ ಕಡಿಮೆ ಜಮೀನಿನಲ್ಲಿ ಹೆಚ್ಚು ಬೆಳೆ ಬೆಳೆಯುವ ವಿಧಾನವನ್ನು ತೋರಿಸಿ ಕೊಡಲಾಗುತ್ತಿದೆ. ಇದು ರೈತರಿಗೆ ಹೆಚ್ಚು ಅನುಕೂಲವಾಗಿದೆ ಎಂದು ಹೇಳಿದರು.

ಗ್ರಾಮೀಣ ಪ್ರದೇಶದ ರೈತರು ಮಾತ್ರವಲ್ಲದೆ ನಗರ ಪ್ರದೇಶದ ಜನರು ಸಹ ಕೃಷಿ ಮೇಳದ ಪ್ರಯೋಜನ ಪಡೆಯಬಹುದು. ಮನೆಯ ಟೆರೆಸ್‌ನಲ್ಲಿ ಗಾರ್ಡನ್‌ ನಿರ್ಮಿಸಿಕೊಂಡು ಅಲ್ಲಿ ಸಾವಯವ ಹಾಗೂ ರಾಸಾಯನಿಕಮುಕ್ತ ತರಕಾರಿ ಬೆಳೆಯನ್ನು ಬೆಳೆಯುವುದಕ್ಕೆ ಅವಕಾಶವಿದೆ. ಅವರೂ ಕೃಷಿ ಮೇಳದಲ್ಲಿ ಪಾಲ್ಗೊಂಡು ಬೆಳೆ ಪದ್ಧತಿ ರೂಢಿಸಿಕೊಳ್ಳುವಂತೆ ಸಲಹೆ ನೀಡಿದರು.

ಕೃಷಿಯಲ್ಲಿ ಮುಖ್ಯವಾಗಿ ರೈತರನ್ನು ಕೂಲಿಯಾಳುಗಳ ಸಮಸ್ಯೆ ಬಹಳವಾಗಿ ಕಾಡುತ್ತಿದೆ. ಭತ್ತದ ನಾಟಿಯಿಂದ ಕಟಾವಿನವರೆಗೆ ವಿವಿಧ ಯಂತ್ರೋ ಪಕರಣಗಳ ಬಳಕೆಯನ್ನು ಪ್ರಾತ್ಯಕ್ಷಿಕೆ ಮೂಲಕ ತೋರಿಸಲಾಗುತ್ತಿದೆ. ಅಲ್ಲದೆ, ಹೊಸದಾಗಿ ಕಬ್ಬು ಕಟಾವು ಮಾಡುವ, ತರಗನ್ನು ಕತ್ತರಿಸುವ ಯಂತ್ರವನ್ನೂ ಪರಿಚಯಿಸಲಾಗಿದೆ. ಇದೆಲ್ಲ ವನ್ನೂ ಸದುಪಯೋಗಪಡಿಸಿಕೊಳ್ಳುವಂತೆ ಕಿವಿಮಾತು ಹೇಳಿದರು.

ಬೆಂಗಳೂರು ಕೃಷಿ ವಿಶ್ವವಿದ್ಯಾನಿಲಯದ ಸಂಶೋಧನಾ ನಿರ್ದೇಶಕ ಡಾ.ವೈ.ಜೆ.ಷಡಕ್ಷರಿ ಮಾತನಾಡಿ, ಎರಡು ದಿನಗಳ ಕೃಷಿ ಮೇಳದ ಪ್ರಮುಖ ಆಕರ್ಷಣೆಯಾಗಿ ಭತ್ತದ ಬೆಳೆಯಲ್ಲಿ ನೀರನ್ನು ಸದ್ಭಳಕೆ ಮಾಡಿಕೊಳ್ಳುವ ಪ್ರಾತ್ಯಕ್ಷಿಕೆ, ಡ್ರಮ್‌ ಸೀಡರ್‌, ಹನಿ ನೀರಾವರಿ, ತುಂತುರು ನೀರಾವರಿ ಸೇರಿದಂತೆ ಬಹಳಷ್ಟು ತಾಂತ್ರಿಕತೆಯನ್ನು ಪ್ರದರ್ಶಿಸಲಾಗಿದೆ ಎಂದು ವಿವರಿಸಿದರು.

Advertisement

ಕಬ್ಬು ಹಾಗೂ ತೋಟಗಾರಿಕೆ ಬೆಳೆಗಳಲ್ಲೂ ವಿವಿಧ ಮಾದರಿಗಳನ್ನು ತೋರಿಸಿಕೊಡಲಾಗುತ್ತಿದೆ. ರೈತರು ಹೊಸ ಬೆಳೆ ಪದ್ಧತಿಯನ್ನು ಅಳವಡಿಸಿಕೊಂಡು ಆರ್ಥಿಕ ಮಟ್ಟವನ್ನು ಉತ್ತಮ ಪಡಿಸಿಕೊಳ್ಳುವಂತೆ ಸಲಹೆ ನೀಡಿದರು.ಜಿಪಂ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಯಾಲಕ್ಕೀಗೌಡ, ಕೃಷಿ ವಿಜ್ಞಾನಿಗಳು ಪಾಲ್ಗೊಂಡಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next