ಚನ್ನಗಿರಿ: ಸೂಳೆಕೆರೆ-ಹಿರೇಮಳ್ಳಲಿ ಪಂಪ್‌ಹೌಸ್‌ನಲ್ಲಿ ನೀರಿನ ತೀವ್ರತೆ ಹೆಚ್ಚಾಗಿದ್ದು, ಸಾರ್ವಜನಿಕರು ಮಳೆಯಾಗುವರೆಗೂ ನೀರನ್ನು ಮಿತವಾಗಿ ಬಳಸಬೇಕು ಎಂದು ಶಾಸಕ ವಡ್ನಾಳ್ ರಾಜಣ್ಣ ಮನವಿ ಮಾಡಿದ್ದಾರೆ. ಪಟ್ಟಣದಲ್ಲಿ ನೀರಿನ ತೀವ್ರತೆ ಹೆಚ್ಚಿದ ಹಿನ್ನೆಲೆ ಶುಕ್ರವಾರ ಶಾಸಕರು 6 ವಾಡ್‌ಗಳಲ್ಲಿ ಸಂಚರಿಸಿ ಸಾರ್ವಜನಿಕರ ಕುಂದುಕೊರತೆಗಳನ್ನು ಆಲಿಸಿ ಸುದ್ದಿಗಾರರೊಂದಿಗೆ ಮಾತನಾಡಿದರು.
ಕಳೆದ ದಿವಸಗಳಿಂದ ಪಟ್ಟಣದಲ್ಲಿ ಕುಡಿಯೋ ನೀರಿಗೆ ತೊಂದರೆಯಾಗುತ್ತಿದೆ. ಸೂಳೆಕೆರೆ- ಹಿರೇಮಳ್ಳಲಿ ನೀರು ಖಾಲಿಯಾಗುವಂತಹ ಸ್ಥಿತಿಗೆ ತಲುಪಿದೆ. ಆದ್ದರಿಂದ ಸಾರ್ವಜನಿಕರು ಸಹಕರಿಸಬೇಕು. ನೀರನ್ನು ಮೀತವಾಗಿ ಬಳಸಬೇಕು ಎಂದರು. ಪುರಸಭೆ ವ್ಯಾಪ್ತಿಯಲ್ಲಿ 64 ಬೋರ್‌ವೆಲ್‌ಗಳಿದ್ದು.
ಅವುಗಳನ್ನು 120 ಮಿನಿ ವಾಟರ್ ಸಿಸ್ಟಮ್‌ಳಿಗೆ ನೀರು ಹರಿಸಿ ಜನತೆಗೆ ನೀರನ್ನು ಸದ್ಯಕ್ಕೆ ನೀಡಲಾಗುತ್ತಿದೆ. ನೀರಿನ ಸಮಸ್ಯೆಯ ಬಗ್ಗೆ ಪಟ್ಟಣದಲ್ಲಿರುವ ಜನತೆ ಹೆಚ್ಚೆತ್ತುಕೊಂಡಿದ್ದು, ನಮ್ಮಗೆ ಸಹಕಾರವನ್ನು ನೀಡುತ್ತಿದ್ದಾರೆ. ಅದೇ ರೀತಿಯಲ್ಲಿ ಪುರಸಭೆ ಅ ಧಿಕಾರಿಗಳು ಜಾಗೃತಿ ವಹಿಸಿ ಕೆಲಸ ನಿರ್ವಹಿಸಬೇಕು.
ಸಾರ್ವಜನಿಕರೊಂದಿಗೆ ಸಹಮತದಿಂದ ಒಟ್ಟುಗೂಡಿ ಕುಡಿಯೋ ನೀರಿಗೆ ಸಮಸ್ಯೆ ನಿವಾರಣೆಗೆ ಕ್ರಮವನ್ನು ವಹಿಸಬೇಕು. ಪ್ರತಿ ನಿತ್ಯವು ನೀರಿನ ಸಮಸ್ಯೆಯ ಬಗ್ಗೆ ನನಗೆ ವರದಿಯನ್ನು ನೀಡಬೇಕು ಎಂದರು. ಶಾಸಕರು ವಾರ್ಡ್‌ಗಳ ಭೇಟಿಯಾದ ನೀಡಿದ ಸಂದರ್ಭದಲ್ಲಿ ಸಾರ್ವಜನಿಕರು ಕುಡಿಯೋ ನೀರು 15 ದಿವಸವಾದರೂ ಬಿಟ್ಟಿಲ್ಲ. ಸೂಳೆಕೆರೆಯಿಂದ ಕೆಂಪು ಬಣದ ನೀರನ್ನು ನೀಡಲಾಗುತ್ತಿದೆ.
ಚರಂಡಿಗಳನ್ನು ಸ್ವತ್ಛಗೊಳಿಸುತ್ತಿಲ್ಲ ಎಂಬ ದೂರುಗಳನ್ನು ಶಾಸಕರ ಮುಂದಿಟ್ಟರು. ಮೊದಲು ಕುಡಿಯೋ ನೀರನ್ನು ಒದಗಿಸುವಂತೆ ಸಾರ್ವಜನಿಕರು ಅಳಲು ತೋಡಿಕೊಂಡರು. ಪುರಸಭೆ ಅಧ್ಯಕ್ಷ ಬಿ.ಆರ್. ಹಾಲೇಶ್, ಸ್ಥಾಯಿ ಸಮಿತಿ ಅಧ್ಯಕ್ಷ ಸಿ.ವೈ. ರವಿಕುಮಾರ್, ಪುರಸಭೆ ಮುಖ್ಯಾ ಧಿಕಾರಿ ನಾಗೇಂದ್ರ, ಆರೋಗ್ಯ ಶಿರಸ್ತೆದಾರ ಶಿವರುದ್ರಪ್ಪ, ಪುರಸಭೆ ಸದಸ್ಯೆ ಶಿವರತ್ನಮ್ಮ ಇತರರಿದ್ದರು.