Advertisement
ನಗರದ ಗುರುಭವನದಲ್ಲಿ ಕೆರೆಯಲಾಗಿದ್ದ ವಿವಿಧ ಶಾಲೆಗಳಿಗೆ ಆರ್‌ಟಿಇ ಮೂಲಕ ಆಯ್ಕೆಯಾದ ವಿದ್ಯಾರ್ಥಿಗಳ ಪೋಷಕರ ಕುಂದು-ಕೊರತೆ ಸಭೆಯಲ್ಲಿ ಮಾತನಾಡಿ, ವಿದ್ಯಾರ್ಥಿಗಳಿಗೆ ಯಾವುದೇ ತರಹದ ತೊಂದರೆಗಳು ಎದುರಾಗದಂತೆ ನಿಗಾವಹಿಸಲು ಅಧಿಕಾರಿಗಳಿಗೆ ಸೂಚಿಸಲಾಗುವುದು ಎಂದರು.
Related Articles
Advertisement
ಮಕ್ಕಳಿಗೆ ಸಲಹೆ ನೀಡಿ: ಶಾಲೆಗಳಲ್ಲಿ ಎಲ್ಲಾ ವಿದ್ಯಾರ್ಥಿಗಳಿಗೆ ಹೇಳಿಕೊಡುವ ಮಾದರಿಯಲ್ಲೇ ಪಾಠ ಪ್ರವಚನಗಳು ನಡೆಯುತ್ತದೆ. ಪೋಷಕರು ತಮ್ಮ ಮಕ್ಕಳಿಗೆ ಮನೆಯಲ್ಲಿ ಹೆಚ್ಚು ಕಲಿಕೆಗೆ ಪ್ರೋತ್ಸಾಹ ನೀಡಬೇಕು. ಆಗ ಮಾತ್ರ ಮಕ್ಕಳಲ್ಲಿ ಮತ್ತಷ್ಟು ಶಿಕ್ಷಣದ ಬಗ್ಗೆ ಒಲವು ಹೆಚ್ಚಾಗುತ್ತದೆ ಎಂದು ಸಲಹೆ ನೀಡಿದರು.
ತೊಂದರೆಯಾಗದಂತೆ ನಿಗಾ: ಕ್ಷೇತ್ರ ಶಿಕ್ಷಣಾಧಿಕಾರಿ ಚಂದ್ರಪಾಟೀಲ್ ಮಾತನಾಡಿ, ಶಾಲೆಗಳಲ್ಲಿ ಆರ್‌ಟಿಇ ವಿದ್ಯಾರ್ಥಿಗಳಿಗೆ ನೀಡಲಾಗುತ್ತಿದೆ ಎನ್ನಲಾದ ದೂರುಗಳ ಬಗ್ಗೆ ಜಿಲ್ಲಾ ಶಿಕ್ಷಣಾಧಿಕಾರಿಗಳ ಗಮನಕ್ಕೂ ತರಲಾಗಿದೆ. ಈ ಬಾರಿಯಿಂದ ಆರ್‌ಟಿಇ ಆಯ್ಕೆಗೆ ಸರ್ಕಾರಿ ಶಾಲೆಯ ಮೂರು ಶಾಲೆಗಳನ್ನು ಮಾತ್ರ ತೆಗೆದುಕೊಳ್ಳಲಾಗಿದ್ದು, ಎಲ್ಲಾ ವಿದ್ಯಾರ್ಥಿಗಳು ಸರ್ಕಾರಿ ಶಾಲೆಯಲ್ಲೇ ವ್ಯಾಸಂಗ ಮಾಡುವಂತೆ ಸುತ್ತೋಲೆ ಹೊರಡಿಸಲಾಗಿದೆ. ಮುಂದಿನ ದಿನಗಳಲ್ಲಿ ಆರ್‌ಟಿಇ ವಿದ್ಯಾರ್ಥಿಗಳಿಗೆ ಯಾವುದೇ ತೊಂದರೆಯಾಗದಂತೆ ನಿಗಾವಹಿಸಲಾಗುವುದೆಂದು ಭರವಸೆ ನೀಡಿದರು.
ಗೊಂದಲ: ಆರ್‌ಟಿಇ ವಿದ್ಯಾರ್ಥಿಗಳಿಗೆ ವಿವಿಧ ಶಾಲೆಯಲ್ಲಿ ಉಂಟಾಗುತ್ತಿರುವ ನ್ಯೂನತೆಗಳನ್ನು ಸರಿಪಡಿಸಲು ಪೋಷಕರ ಸಭೆಯನ್ನು ಕ್ಷೇತ್ರ ಶಿಕ್ಷಣಾಧಿಕಾರಿಗಳು ಆಹ್ವಾನ ಮಾಡಿದ್ದು, ಬೃಹತ್ ಸಂಖ್ಯೆಯಲ್ಲಿ ಸೇರಿರುವ ಪೋಷಕರ ಅಳಲನ್ನು ತೊಡಿಕೊಳ್ಳಲು ಬಂದಿರುವ ಸಭೆಗೆ ಪತ್ರಿಕಾ ಮಾಧ್ಯಮದವರನ್ನು ಏಕೆ ಆಹ್ವಾನ ಮಾಡಿಲ್ಲ ಎಂದು ಪ್ರಶ್ನಿಸಿದ ಪೋಷಕರು, ಇದೊಂದು ಸಮಸ್ಯೆಗಳನ್ನು ಮುಚ್ಚುಹಾಕುವ ಕುತಂತ್ರವೇ ಎಂದು ಕೇಳಿದ ಪ್ರಶ್ನೆಗೆ ಸಭೆಯಲ್ಲಿ ಗೊಂದಲ ಉಂಟಾಯಿತು.
ಬಿಆರ್‌ಸಿ ಮಂಜುಳಾ, ಸಿಬ್ಬಂದಿ ಅಮಿತ್, ವರದರಾಜು, ಜಯರಾಜು ಹಾಗೂ ಪೋಷಕರು ಇದ್ದರು.