ಬಂಟ್ವಾಳ : ಕಡಿಮೆ ತೂಕದ ಮಕ್ಕಳಿಗೆ ಅಂಗನವಾಡಿ ಕೇಂದ್ರಗಳಲ್ಲಿ ಪೌಷ್ಟಿಕ ಆಹಾರವಾಗಿ ಮೊಟ್ಟೆ, ಹಾಲು ಪೌಷ್ಟಿಕ ಪೌಡರ್ ಸಹಿತ ವೈದ್ಯಕೀಯ ತಪಾಸಣೆ, ಔಷಧೋಪಚಾರ ನೀಡ ಲಾಗುತ್ತದೆ. ಇದನ್ನು ಹೆತ್ತವರು ಸಕಾಲಿಕ ವಾಗಿ ಮಕ್ಕಳಿಗೆ ನೀಡುವ ಕ್ರಮ ಅನುಸರಿಸಬೇಕು ಎಂದು ಪ್ರಭಾರ ಶಿಶು ಅಭಿವೃದ್ಧಿ ಯೋಜನಾಧಿಕಾರಿ ಗಾಯತ್ರಿ ಬಾಯಿ ಎಚ್. ಹೇಳಿದರು.
ರೋಟರಿ ಹಿರಿಯ ಸದಸ್ಯೆ ಪ್ರತಿಭಾ ಎ. ರೈ ಅಧ್ಯಕ್ಷತೆ ವಹಿಸಿದ್ದರು. ಬಂಟ್ವಾಳ ರೋಟರಿ ಕ್ಲಬ್‌ಕಾರ್ಯ ದರ್ಶಿ ಶಿವಾಣಿ ಬಾಳಿಗಾ ಮಾತನಾಡಿ, ಮಕ್ಕಳ ಬಗ್ಗೆ ಕಾಳಜಿ ಇರಲಿ. ಸಮಯಕ್ಕೆ ಸರಿಯಾಗಿ ಆಹಾರ ನೀಡುವ ಕ್ರಮವನ್ನು ಮರೆಯಬೇಡಿ. ನಿಗದಿತ ತೂಕದ ಆಹಾರವನ್ನು ನಿರ್ದಿಷ್ಟ ಪ್ರಾಯಕ್ಕೆ ಸೂಕ್ತ ರೀತಿಯಲ್ಲಿ ನೀಡುವುದು ಕೂಡಾ ಆರೋಗ್ಯದ ದೃಷ್ಟಿಯಲ್ಲಿ ಮುಖ್ಯವಾಗಿದೆ. ಮಗುವಿನ ಆರೋಗ್ಯ ಸರಿ ಇರಬೇಕಾದರೆ ತಾಯಿಯ ಆರೋಗ್ಯವೂ ಮುಖ್ಯ. ಮಕ್ಕಳನ್ನು ನೋಡಿಕೊಳ್ಳುವ ನಾವು ಅವರ ಪಾಲನೆಯಲ್ಲಿ ಹೆಚ್ಚು ಗಮನ ನೀಡಬೇಕು. ಕಡಿಮೆ ತೂಕದ ಮಕ್ಕಳ ಬಗ್ಗೆ ನಿರಂತರ ಕಾಳಜಿ ವಹಿಸಿ ಎಂದರು.
ಮಕ್ಕಳು ಕೆಲವೊಮ್ಮೆ ಆಹಾರವನ್ನು ತಿರಸ್ಕರಿಸಬಹುದು. ಕೆಲವೊಮ್ಮೆ ಹೆಚ್ಚು ತಿನ್ನುವ ಕ್ರಮವು ಇರಬಹುದು. ಇದನ್ನು ತಾಯಿ ಗಮನಿಸಿ ಮಗುವಿನ ಅಪೇಕ್ಷೆಯನ್ನು ತಿಳಿದು ಅರ್ಹ ಆಹಾರ ನೀಡಬೇಕು ಎಂದರು.
ಕ್ಲಬ್ ಉಪಕಾರ್ಯದರ್ಶಿ ಸ್ಮಿತಾ, ಸದಸ್ಯೆ ವಾಣಿ ಕಾರಂತ್ ಮುಖ್ಯ ಅತಿಥಿಗಳಾಗಿ ಭಾಗವಹಿಸಿದ್ದರು. ಬಂಟ್ವಾಳ ನಗರ ಪ್ರಾಥಮಿಕ ಆರೋಗ್ಯ ಕೇಂದ್ರ ವೈದ್ಯಾಧಿಕಾರಿ ಡಾ| ವಾಣಿಶ್ರೀ, ತುಂಬೆ ಫಾದರ್ ಮುಲ್ಲರ್ ವೈದ್ಯಾಧಿಕಾರಿ ಡಾ| ಅಮಲ್, ಡಾ| ಜಿಯೊ, ಡಾ| ಮೆರಿಸ್ಸಾ, ಡಾ| ಶಿಲ್ಪಾ ಉಪಸ್ಥಿತರಿದ್ದರು.
Advertisement
ಅವರು ಮೇ 6ರಂದು ಬಿ.ಸಿ. ರೋಡ್ ಸ್ತ್ರೀಶಕ್ತಿ ಭವನದಲ್ಲಿ ನಡೆದ ಸಾಧಾರಣ ಕಡಿಮೆ ತೂಕದ ಮತ್ತು ವಿಪರೀತ ಕಡಿಮೆ ತೂಕದ ಮಕ್ಕಳ ಆರೋಗ್ಯ ತಪಾಸಣೆ ಕಾರ್ಯಕ್ರಮದಲ್ಲಿ ಮಾಹಿತಿ ನೀಡಿದರು.
Related Articles
Advertisement
ಶಿಶು ಅಭಿವೃದ್ದಿ ಯೋಜನೆ, ಬಂಟ್ವಾಳ ರೋಟರಿ ಕ್ಲಬ್ ಸಂಯುಕ್ತ ಆಶ್ರಯದಲ್ಲಿ ಕಾರ್ಯಕ್ರಮ ನಡೆಯಿತು. ಭಾಗವಹಿಸಿದ ಎಲ್ಲ ಮಕ್ಕಳಿಗೂ ರೋಟರಿ ವತಿಯಿಂದ ಔಷಧೋಪಚಾರ ನೀಡಲಾಯಿತು. ಹಿರಿಯ ಮೇಲ್ವಿಚಾರಕಿ ಬಿ. ಭಾರತಿ ಸ್ವಾಗತಿಸಿ, ಕಾರ್ಯಕ್ರಮ ನಿರೂಪಿಸಿದರು. ಹಿರಿಯ ಮೇಲ್ವಿಚಾರಕಿ ಉಷಾ ವಂದಿಸಿದರು.
ಅಂಗನವಾಡಿ ಕೇಂದ್ರದಲ್ಲಿ ಮಕ್ಕಳಿಗೆ ನೆಲಕಡಲೆ-ಬೆಲ್ಲ ಚಿಕ್ಕಿರೂಪದಲ್ಲಿ ತಿನ್ನಲು ನೀಡುವುದು, ಅನ್ನ, ಬೇಳೆ ಸಾಂಬಾರು, ಗಂಜಿ, ಹುರುಳಿ ಚಟ್ನಿಯನ್ನು ನೀಡುವ ಮೂಲಕ ಆರೋಗ್ಯ ವರ್ಧನೆ ಮಾಡಲು ಪ್ರಯತ್ನ ನಡೆಸಲಾಗುತ್ತದೆ. ಮಕ್ಕಳ ಆರೋಗ್ಯದ ಬಗ್ಗೆ ಹೆತ್ತವರು ಹೆಚ್ಚು ಗಮನ ಹರಿಸಬೇಕು. ಕೇವಲ ಆಹಾರ ಸೇವನೆ ಮಾತ್ರವಲ್ಲದೆ ವಿವಿಧ ಆಟೋಟ ಸ್ಪರ್ಧೆಗಳಲ್ಲಿ ಅವರನ್ನು ತೊಡಗಿಸಬೇಕು.
-ಗಾಯತ್ರಿ ಬಾಯಿ ಎಚ್., ಪ್ರಭಾರ ಶಿಶು ಅಭಿವೃದ್ಧಿ ಯೋಜನಾಧಿಕಾರಿ