Advertisement
ನಗರದ ಬಸವೇಶ್ವರ ವೀರಶೈವ ವಿದ್ಯಾವರ್ಧಕ ಸಂಘದ ಆಶ್ರಯದಲ್ಲಿ ರಾಷ್ಟ್ರಪಿತ ಮಹಾತ್ಮ ಗಾಂಧೀಜಿಯವರ 151ನೇ ಮತ್ತು ವಿಶ್ವಕಂಡ ಅಪ್ರತಿಮ ದೇಶಭಕ್ತ ಲಾಲ್‌ಬಹದ್ದೂರ ಶಾಸ್ತ್ರೀಜಿಯವರ 116ನೇ ಜಯಂತ್ಯೋತ್ಸವದ ಅಂಗವಾಗಿ ಗಾಂಧಿ ಭಜನ್ ಹಾಗೂ ಬಿವಿವಿ ಸಂಘದ ನರ್ಸಿಂಗ್ ಕಾಲೇಜಿನ ನವೀಕೃತಗೊಂಡ ನೂತನ ಕಟ್ಟಡದ ಉದ್ಘಾಟನೆ ಇಂದು ಜರುಗಿತು.
ಸೌಹಾರ್ದಯುತವಾಗಿ ಬದುಕು ನಡೆಸುವುದು ಇಂದಿನ ದಿನಗಳಲ್ಲಿ ಅಗತ್ಯವಾಗಿದೆ ಎಂದರು. ಗೌರವ ಕಾರ್ಯದರ್ಶಿ ಮಹೇಶ ಎನ್. ಅಥಣಿ, ವೈದ್ಯಕೀಯ ಕಾಲೇಜುಗಳ ಆಡಳಿತ ಮಂಡಳಿಯ ಕಾರ್ಯಾಧ್ಯಕ್ಷ ಸಿದ್ದಣ್ಣ ಶೆಟ್ಟರ ಹಾಗೂ ಕಾಲೇಜುಗಳ ಆಡಳಿತ ಮಂಡಳಿಯ ಕಾರ್ಯಾಧ್ಯಕ್ಷರಾದ ಅಶೋಕ ಎಂ. ಸಜ್ಜನ (ಬೇವೂರ) ಉಪಸ್ಥಿತರಿದ್ದು, ಈರ್ವರು ಮಹಾತ್ಮರ ಭಾವಚಿತ್ರಕ್ಕೆ ನಮನ ಸಲ್ಲಿಸಿದರು. ಬಿವಿವಿ ಸಂಘದ ಗೌರವಾನ್ವಿತ ಸದಸ್ಯರಾದ ಸಿ.ಎಂ. ಅಥಣಿ, ಮಲ್ಲಪ್ಪಣ್ಣ ಆರಬ್ಬಿ, ಶಾಲಾ ಆಡಳಿತ ಮಂಡಳಿಯ ಕಾರ್ಯಾಧ್ಯಕ್ಷ ಗುರುಬಸವ ಸೂಳಿಬಾವಿ, ವಸತಿನಿಲಯದ ಕಾರ್ಯಾಧ್ಯಕ್ಷ ಶಿವಕುಮಾರ ಹಿರೇಮಠ, ಬಿವಿವಿ ಸಂಘದ ಕಾಲೇಜುಗಳ ಆಡಳಿತ ಮಂಡಳಿಯ ಸದಸ್ಯರಾದ ನಿಂಬೆಣ್ಣ ಎಸ್. ದೇವಣಗಾವಿ, ಚಂದ್ರಶೇಖರ ಜಿಗಜಿನ್ನಿ, ರಾಜು ಎಂ. ಪಾಟೀಲ, ಬಸವರಾಜ ಇಂಡಿ, ಬಸವರಾಜ ಎಸ್. ಹಿರೇಗೌಡರ, ಶರಣ ನಾವಲಗಿ ಉಪಸ್ಥಿತರಿದ್ದರು.
Related Articles
Advertisement
ನಗರದ ಬಿವಿವಿ ಸಂಘದ ಬಸವೇಶ್ವರ ವಾಣಿಜ್ಯ ಕಾಲೇಜನಲ್ಲಿ ಮಹಾತ್ಮ ಗಾಂಧಿ ಮತ್ತು ಲಾಲ್ ಬಹದ್ದೂರ ಶಾಸ್ತ್ರಿ ಜಯಂತಿಆಚರಿಸಲಾಯಿತು. ಪ್ರಾಚಾರ್ಯೆ ಎಸ್.ಎಚ್. ಶೆಟ್ಟರ, ಐಕ್ಯೂಎಸಿ ಸಂಯೋಜಕ ಡಾ|ಜೆ.ವಿ. ಚವ್ಹಾಣ್, ವಾಣಿಜ್ಯ ವಿಭಾಗದ ಮುಖ್ಯಸ್ಥ ಪ್ರೊ| ಎಂ.ವಿ. ಜಿಗಬಡ್ಡಿ, ಪ್ರೊ| ಪಿ.ಬಿ. ತಿಪ್ಪಣ್ಣವರ, ಬಿಬಿಎ ವಿಭಾಗದ ಸಂಯೋಜಕ ಪ್ರೊ| ವಿದ್ಯಾ ವಸ್ತ್ರದ ಮುಂತಾದವರು ಉಪಸ್ಥಿತರಿದ್ದರು. ವಿದ್ಯಾಗಿರಿಯ ಬಿವಿವಿ ಸಂಘದ ಬಸವೇಶ್ವರ ಕಲಾ, ವಿಜ್ಞಾನ ಹಾಗೂ ವಾಣಿಜ್ಯ ಕಾಲೇಜಿನ ರಾಷ್ಟ್ರೀಯ ಸೇವಾ ಯೋಜನೆಯ ಘಟಕಗಳ ಸಹಯೋಗದಲ್ಲಿ ಮಹಾತ್ಮ ಗಾಂಧಿ ಹಾಗೂ ಲಾಲ್ ಬಹದ್ದೂರ ಜಯಂತಿ ಆಚರಿಸಲಾಯಿತು. ಪ್ರಾಚಾರ್ಯ ಟಿ.ಬಿ. ಕೋರಿಶೆಟ್ಟಿ, ಪ್ರಾಧ್ಯಾಪಕರಾದ ಲಕ್ಷ್ಮಣ ಕಾಂಬಳೆ, ಮಲ್ಲಪ್ಪ ನಾಡಗೌಡರ ಮುಂತಾದವರು ಉಪಸ್ಥಿತರಿದ್ದರು.