Advertisement

ತ್ಯಾಜ್ಯ ಪ್ಲಾಸ್ಟಿಕ್‌ ಪುಡಿ ಬಳಸಿ ರಸ್ತೆ ನಿರ್ಮಾಣಕ್ಕೆ ಬಳಕೆ

01:00 AM Jan 31, 2019 | Team Udayavani |

ಕಾಸರಗೋಡು: ತ್ಯಾಜ್ಯ ಮೂಲಕ ಸಂಗ್ರಹಿಸಲಾದ ಪ್ಲಾಸ್ಟಿಕ್‌ ಪುಡಿಯ ರೂಪಕ್ಕೆ ತಂದು ರಸ್ತೆ ನಿರ್ಮಾಣಕ್ಕೆ ಬಳಸುವ ಮೂಲಕ ನೀಲೇಶ್ವರ ನಗರಸಭೆ ನಾಡಿಗೆ ಹೊಸದಿಶೆ ತೋರುತ್ತಿದೆ.

Advertisement

ಇದರ ಅಂಗವಾಗಿ ತ್ಯಾಜ್ಯ ಸಂಗ್ರಹ ನಡೆಸಿ ಸಂಗ್ರಹಿಸಲಾದ 11 ಕ್ವಿಂಟಾಲ್‌ ಪ್ಲಾಸ್ಟಿಕ್‌ ಉತ್ಪನ್ನಗಳನ್ನು ಪುಡಿ ಮಾಡಿ ಕ್ಲಿನ್‌ ಕೇರಳ ಕಂಪೆನಿಗೆ ನಗರಸಭೆ ಹಸ್ತಾಂತರಿಸಿದೆ.

ನಗರಸಭೆ ವ್ಯಾಪ್ತಿಯ 32 ವಾರ್ಡ್‌ ಗಳಲ್ಲಿರುವ ಮನೆಗಳಿಂದ, ವ್ಯಾಪಾರ ಸಂಸ್ಥೆಗಳಿಂದ ಹಸುರು ಕ್ರಿಯಾ ಸೇನಾ ಸದಸ್ಯರು ತ್ಯಾಜ್ಯ ಸಂಗ್ರಹಿಸಿ, ಆ ಮೂಲಕ ಪಡೆದ ಪ್ಲಾಸ್ಟಿಕ್‌ ಉತ್ಪನ್ನಗಳನ್ನು ಶುಚೀಕರಿಸಿ ಶ್ರೆಡ್ಡಿಂಗ್‌ ಘಟಕಗಳಲ್ಲಿ ಪುಡಿ ಮಾಡಿಸಿದ್ದಾರೆ.

ಈ ಪುಡಿಯನ್ನು ಈಗ ಕ್ಲಿನ್‌ ಕಂಪೆನಿಗೆ ಹಸ್ತಾಂತರಿಸಲಾಗಿದೆ. ಈ ಪುಡಿಯನ್ನು ವಿವಿಧ ಸ್ಥಳೀಯಾಡಳಿತ ಸಂಸ್ಥೆಗಳ ವ್ಯಾಪ್ತಿಯ ರಸ್ತೆ ನಿರ್ಮಾಣಕ್ಕೆ ಬಳಸಲಾಗುವುದು ಎಂದು ಸಂಬಂಧಪಟ್ಟ ಅಧಿಕಾರಿಗಳು ತಿಳಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next