Advertisement

ರೈಲ್ವೇ ತಾಂತ್ರಿಕ ದೋಷ ಪತ್ತೆಗೆ ರೋಬೋ ಬಳಕೆ

06:00 AM Dec 28, 2018 | Team Udayavani |

ಹೊಸದಿಲ್ಲಿ: ರೈಲಿನಲ್ಲಿರುವ ತಾಂತ್ರಿಕ ಮತ್ತು ಇತರ ದೋಷಗಳನ್ನು ಪತ್ತೆ ಮಾಡಿ ದುರಸ್ತಿ ಕೆಲಸಕ್ಕೆ ಅನುವಾಗುವ ನಿಟ್ಟಿನಲ್ಲಿ ಕೇಂದ್ರೀಯ ರೈಲ್ವೇಯ ನಾಗ್ಪುರ ವಿಭಾಗ ಆರ್ಟಿಫಿಶಿಯಲ್‌ ಇಂಟಲಿಜೆನ್ಸ್‌ ಹೊಂದಿರುವ ರೋಬೋಗಳನ್ನು ಅಭಿವೃದ್ಧಿಪಡಿಸಿದೆ.

Advertisement

ಉಸ್ತಾದ್‌ ಎಂಬ ಹೆಸರಿನ ಈ ರೋಬೋಗಳು ರೈಲಿನ ಸಲಕರಣೆಗಳು, ಯಂತ್ರಗಳ ಫೋಟೋ ಹಾಗೂ ವಿಡಿಯೋಗಳನ್ನು ಅತ್ಯಾಧುನಿಕ ಕೆಮರಾಗಳಲ್ಲಿ ಚಿತ್ರಿಸಿ ಎಂಜಿನಿಯರ್‌ಗಳಿಗೆ ರವಾನಿಸುತ್ತವೆ. ಎಂಜಿನಿಯರ್‌ಗಳ ಸೂಚನೆ ಆಧರಿಸಿ ರೋಬೋ ನಿರ್ದಿಷ್ಟ ದಿಕ್ಕಿಗೆ ತಿರುಗಬಲ್ಲದು.ರೋಬೊಗಳು ರವಾನಿಸುವ ಸ್ಥಿರ ಚಿತ್ರಗಳು ಮತ್ತು ವಿಡಿಯೊಧೀಗಳನ್ನು ದೊಡ್ಡ ಪರದೆ ಮೂಲಕ ಎಂಜಿನಿಯರುಗಳು ನೋಡಬಹುದು. ಅಲ್ಲದೆ, ಅತ್ಯಂತ ಸಣ್ಣದಾದ ಭಾಗಗಳನ್ನು ಹಾಗೂ ಸಂಕೀರ್ಣ ಸ್ಥಳದಲ್ಲಿರುವ ಭಾಗಗಳನ್ನೂ ಈ ರೋಬೋ ಮೂಲಕ ಎಂಜಿನಿಯರುಗಳು ಸುಲಭವಾಗಿ ನೋಡಬಹುದಾಗಿದೆ. ಅಷ್ಟೇ ಅಲ್ಲ, ಅತ್ಯಂತ ಸೂಕ್ಷ್ಮ ವಾಗಿಯೂ ದೋಷಗಳನ್ನು ಪರಿಶೀಲಿ ಸಬಹುದಾಗಿದೆ. ಸದ್ಯ ಉಸ್ತಾದ್‌ನ ಪರೀಕ್ಷಾರ್ಥ ಪ್ರಯೋಗ ನಡೆಯುತ್ತಿದೆ. ಇದರ ಪರೀಕ್ಷೆ ಯಶಸ್ವಿಯಾದ ಅನಂತರದಲ್ಲಿ  ಎಲ್ಲ ವಿಭಾಗಗಳಿಗೂ ಇದನ್ನು ಅಳವಡಿಸಲಾಗುತ್ತದೆ ಎಂದು ರೈಲ್ವೇ ಅಧಿಕಾರಿಗಳು ಹೇಳಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next