ಉತ್ತರಾಖಂಡ: ಕೇದಾರನಾಥ ದೇಗುಲದ ಒಳಗೆ ಹಾಗೂ ದೇವಳದ ಸುತ್ತಮುತ್ತ ಆವರಣದಲ್ಲಿ ಭಕ್ತರು ಛಾಯಾಚಿತ್ರ ತೆಗೆಯುವುದು ಮತ್ತು ವಿಡಿಯೋ ಮಾಡುವುದನ್ನು ನಿಷೇಧಿಸಲಾಗಿದೆ. ಅದಕ್ಕಾಗಿ ದೇಗುಲದ ಸುತ್ತಮುತ್ತ ಪ್ರದೇಶದಲ್ಲಿ ಮೊಬೈಲ್ ನಿಷೇಧಿಸಿ ಸೂಚನೆ ಹೊರಡಿಸಿದೆ.
ಕೇದಾರನಾಥ ದೇವಾಲಯ ಸಮಿತಿಯು ಕೇದಾರನಾಥ ದೇವಾಲಯದ ಒಳಗೆ ಛಾಯಾಗ್ರಹಣ ಮತ್ತು ವೀಡಿಯೊಗ್ರಫಿಗಳನ್ನು ನಿಷೇಧಿಸಿದ್ದು. ಕೇದಾರನಾಥ ದೇಗುಲದ ಆವರಣದಲ್ಲಿ ಫೋಟೊ ತೆಗೆಯುವುದು, ವಿಡಿಯೋ ಮಾಡುವುದು ಕಂಡುಬಂದಲ್ಲಿ ಅಂಥವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಲಾಗುವುದು ಎಂದು ದೇವಸ್ಥಾನ ಸಮಿತಿ ಎಚ್ಚರಿಕೆಯ ಫಲಕಗಳನ್ನು ಹಾಕಿದೆ.
ಈ ಕುರಿತು ಬದರಿನಾಥ್-ಕೇದಾರನಾಥ ದೇವಾಲಯ ಸಮಿತಿ ಅಧ್ಯಕ್ಷ ಅಜೇಂದ್ರ ಅಜಯ್ ಮಾತನಾಡಿ, ಧಾರ್ಮಿಕ ಸ್ಥಳವು ನಂಬಿಕೆಯ ವ್ಯವಸ್ಥೆಯನ್ನು ಅನುಸರಿಸುತ್ತದೆ ಮತ್ತು ಭಕ್ತರು ಅದನ್ನು ಗೌರವಿಸಬೇಕು. ಕೇದಾರನಾಥ ದೇವಸ್ಥಾನದ ಆವರಣದಲ್ಲಿ ಇತ್ತೀಚಿಗೆ ಯುವಕ ಯುವತಿ ಪ್ರೇಮ ನಿವೇಧನೆ ಮಾಡಿರುವ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದು ಈ ಹಿನ್ನೆಲೆಯಲ್ಲಿ ದೇಗುಲದ ಪಾವಿತ್ರ್ಯತೆ ಹಾಳಾಗಬಾರದು ಎಂಬ ದೃಷ್ಟಿಯಲ್ಲಿ ಇನ್ನು ಮುಂದಿನ ದಿನಗಳಲ್ಲಿ ಭಕ್ತರು ದೇವಳದ ಆವರಣ ಹಾಗೂ ದೇವಳದ ಒಳಗೆ ಮೊಬೈಲ್ ಚಿತ್ರೀಕರಣ, ಫೋಟೋಗ್ರಫಿ, ರೀಲ್ಸ್ ಮುಂತಾದವುಗಳನ್ನು ಮಾಡದಂತೆ ತಡೆಗಟ್ಟಲು ಮೊಬೈಲ್ ನಿಷೇಧ ಹೇರಿದೆ.
ಅಷ್ಟು ಮಾತ್ರವಲ್ಲದೆ ದೇವಸ್ಥಾನಕ್ಕೆ ಬರುವ ಭಕ್ತರು ದೇವಳದ ವಸ್ತ್ರ ಸಂಹಿತೆಯನ್ನು ಅನುಸರಿಕೊಂಡು ಬರಬೇಕು ಎಂದು ಹೇಳಿದೆ ದೇವಳದ ಸೂಚೆನೆಗೆ ವಿರುದ್ಧವಾಗಿ ನಡೆದುಕೊಂಡವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಲಾಗುವುದು ಎಂದು ಹೇಳಿದ್ದಾರೆ.
ಅದರಂತೆ ದೇವಳದ ಸುತ್ತಮುತ್ತ ಮೊಬೈಲ್ ನಿಷೇಧದ ಕುರಿತು ಬೋರ್ಡ್ ಹಾಕಲಾಗಿದ್ದು ಭಕ್ತರು ಅನುಸರಿಸುವಂತೆ ಆಗ್ರಹಿಸಿದ್ದಾರೆ.