Advertisement

ನಂದಿನಿ ಉತ್ಪನ್ನ ಬಳಸಿ: ರವಿರಾಜ್‌ ಹೆಗ್ಡೆ

12:30 AM Mar 02, 2019 | Team Udayavani |

ಬ್ರಹ್ಮಾವರ: ದ.ಕ. ಹಾಲು ಒಕ್ಕೂಟವು ಮೊದಲು ಹಾಲು ಸಂಗ್ರಹಣೆಯ ಸವಾಲು, ಅನಂತರ ಗುಣಮಟ್ಟ, ಇದೀಗ ಮಾರುಕಟ್ಟೆ ಸವಾಲುಗಳನ್ನು ಎದುರಿಸು ತ್ತಿದ್ದು, ಸಮರ್ಥವಾಗಿ ನಿರ್ವಹಿಸುತ್ತಿದೆ ಎಂದು ಒಕ್ಕೂಟದ ಅಧ್ಯಕ್ಷ ರವಿರಾಜ್‌ ಹೆಗ್ಡೆ ಕೊಡವೂರು ಹೇಳಿದರು.

Advertisement

ಅವರು  ಚಾಂತಾರು ಹಾಲು ಉತ್ಪಾದಕರ ಸ. ಸಂಘದ ನೂತನ ಕಟ್ಟಡ “ಸಹನ’ ಉದ್ಘಾಟಿಸಿ ಮಾತನಾಡಿದರು.
ಒಕ್ಕೂಟವು ಹಾಲಿನ ಜತೆ ನಂದಿನಿ ಬ್ರಾÂಂಡ್‌ನಲ್ಲಿ ವಿವಿಧ ಉತ್ಪನ್ನಗಳನ್ನು ಮಾರುಕಟ್ಟೆಗೆ ಬಿಡುಗಡೆಗೊಳಿಸಿದೆ. ಇವುಗಳನ್ನೇ ಖರೀದಿಸಿ ಸಹಕಾರಿ ವ್ಯವಸ್ಥೆಯನ್ನು ಪ್ರೋತ್ಸಾಹಿಸಿ ಎಂದವರು ತಿಳಿಸಿದರು. 

ಸ್ವಂತ ಕಟ್ಟಡ
ಒಕ್ಕೂಟದ 721 ಹಾಲು ಉ. ಸಂಘಗಳಲ್ಲಿ 431 ಸಂಘಗಳು ಸ್ವಂತ ಕಟ್ಟಡ ಹೊಂದಿವೆ. ಒಕ್ಕೂಟ ದಿನಂಪ್ರತಿ ಸರಾಸರಿ 4.5 ಲೀ. ಹಾಲು ಸಂಗ್ರಹಿಸುತ್ತಿದೆ ಎಂದರು. ಸಂಘದ ಅಧ್ಯಕ್ಷ ತಮ್ಮಯ್ಯ ಪೂಜಾರಿ ಅಧ್ಯಕ್ಷತೆ ವಹಿಸಿದ್ದರು.ಅತಿಥಿಗಳಾಗಿ ಜಿ.ಪಂ. ಉಪಾಧ್ಯಕ್ಷೆ ಶೀಲಾ ಕೆ. ಶೆಟ್ಟಿ, ಒಕ್ಕೂಟದ ಮಾಜಿ ಅಧ್ಯಕ್ಷ ಶೇಡಿಕೊಡ್ಲು ವಿಟuಲ್‌ ಶೆಟ್ಟಿ, ಒಕ್ಕೂಟದ ನಿರ್ದೇಶಕರಾದ ಹದ್ದೂರು ರಾಜೀವ ಶೆಟ್ಟಿ, ಜಾನಕಿ ಹಂದೆ, ಟಿ. ಸೂರ್ಯ ಶೆಟ್ಟಿ ಅಶೋಕ್‌ ಕುಮಾರ್‌ ಶೆಟ್ಟಿ, ವ್ಯವಸ್ಥಾಪಕ ಡಾ| ನಿತ್ಯಾನಂದ ಭಕ್ತ, ಉಪವ್ಯವಸ್ಥಾಪಕ ಡಾ| ಅನಿಲ್‌ ಕುಮಾರ್‌ ಶೆಟ್ಟಿ, ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ದಿ ಯೋಜನೆಯ ಜಿಲ್ಲಾ ಯೋಜನಾಧಿಕಾರಿ ರೋಹಿತ್‌ ಎಚ್‌., ತಾ.ಪಂ. ಸದಸ್ಯ ಸುಧೀರ್‌ ಕುಮಾರ್‌ ಶೆಟ್ಟಿ, ಗ್ರಾ.ಪಂ. ಅಧ್ಯಕ್ಷೆ ಸರಸ್ವತಿ ನಾಯ್ಕ ಮೊದಲಾದವರು ಉಪಸ್ಥಿತರಿದ್ದರು.ಕಟ್ಟಡಕ್ಕೆ ಸ್ಥಳಾವಕಾಶ,  ನಿರ್ಮಾಣಕ್ಕೆ ಸಹಕರಿಸಿದವರನ್ನು ಗೌರವಿಸಲಾಯಿತು.

ಪ್ರಶಾಂತ್‌ ಕುಲಾಲ್‌ ಸ್ವಾಗತಿಸಿ, ಕಾರ್ಯನಿರ್ವಹಣಾಧಿಕಾರಿ ಉದಯ ಶೆಟ್ಟಿ ವರದಿ ವಾಚಿಸಿದರು. ಸಹಾಯಕ ವ್ಯವಸ್ಥಾಪಕ ಸುಧಾಕರ್‌ ಕಾರ್ಯಕ್ರಮ ನಿರೂಪಿಸಿದರು.
 

Advertisement

Udayavani is now on Telegram. Click here to join our channel and stay updated with the latest news.

Next