Advertisement
ತೋಟಗಾರಿಕೆ ಇಲಾಖೆಯು ನಬಾರ್ಡ್ ಸಹಯೋಗದಲ್ಲಿ ನಗರದ ಐಐಎಸ್ಸಿಯ ಜೆ.ಎನ್.ಟಾಟಾ ಸಭಾಂಗಣದಲ್ಲಿ ಬುಧವಾರ ಹಮ್ಮಿಕೊಂಡಿದ್ದ ರೈತ ಉತ್ಪಾದಕರ ಸಂಸ್ಥೆಯ (ಎಫ್ಪಿಒ) ಗ್ರಾಹಕರ ಮತ್ತು ಮಾರಾಟಗಾರರ ಸಮ್ಮೇಳನ ಉದ್ಘಾಟಿಸಿ ಮಾತನಾಡಿ, ಸಾಲ ಮಾಡಿದ ಉದ್ದೇಶ ಮರೆತು ಬೇರೆ ಅವಶ್ಯಕತೆಗಳಿಗೆ ಖರ್ಚು ಮಾಡಿದರೆ ಸಮಸ್ಯೆ ಹೆಚ್ಚಾಗುತ್ತದೆ ಎಂದರು.
Related Articles
Advertisement
ತೋಟಗಾರಿಕೆ ಇಲಾಖೆ ನಿರ್ದೇಶಕ ಡಾ.ಎಂ.ವಿ.ವೆಂಕಟೇಶ್ ಮಾತನಾಡಿ, ರೈತರ ಉತ್ಪಾದನಾ ಸಾಮರ್ಥ್ಯ ಹೆಚ್ಚಿಸಲು ಆಧುನಿಕ ಉಪಕರಣಗಳ ಬಳಕೆಗೆ ಆದ್ಯತೆ ನೀಡುತ್ತಿದ್ದೇವೆ. ಇದಕ್ಕಾಗಿ ಎಫ್ಪಿಒಗಳನ್ನು ಆರಂಭಿಸಿದ್ದೇವೆ. 99 ಎಫ್ಪಿಒಗಳು ಸೇವೆ ಸಲ್ಲಿಸುತ್ತಿದ್ದು, 22 ಲಕ್ಷ ರೂ.ಗಳಂತೆ 19 ಕೋಟಿ ರೂ.ಗಳನ್ನು ಎಫ್ಪಿಒಗಳ ಅಭಿವೃದ್ಧಿಗೆ ನೀಡಿದ್ದೇವೆ. ಮಾರ್ಕೆಟ್ ಲಿಂಕಿಂಗ್ ವ್ಯವಸ್ಥೆಗೂ ಚಿಂತನೆ ನಡೆಸುತ್ತಿದ್ದೇವೆ ಎಂದು ಹೇಳಿದರು.
ನಬಾರ್ಡ್ ಡಿಜಿಎಂ ಸಿ.ವಿ.ರೆಡ್ಡಿ ಮಾತನಾಡಿ, ನಬಾರ್ಡ್ ಸಹಾಯಧನದಡಿ 230 ಎಫ್ಪಿಒಗಳು ಸೇವೆ ಸಲ್ಲಿಸುತ್ತಿದ್ದೇವೆ. ಎಫ್ಪಿಒಗಳ ಅವಧಿಯನ್ನು ಮೂರು ವರ್ಷದಿಂದ ಐದು ವರ್ಷಕ್ಕೆ ಏರಿಸಲು ಬೇಕಾದ ಚಿಂತನೆಯೂ ನಡೆಯುತ್ತಿದೆ ಎಂದರು.
ರಸಾಯನಿಕ ಗೊಬ್ಬರ ಬಳಸುವ ಜತೆಗೆ ಮಣ್ಣಿನ ಫಲವತ್ತತೆ ಕಾಯ್ದುಕೊಳ್ಳುವ ನಿಟ್ಟಿನಲ್ಲಿ ಪ್ರತಿ ಮೂರು ವರ್ಷಗಳಿಗೊಮ್ಮೆ ಕೊಟ್ಟಿಗೆ ಗೊಬ್ಬರವನ್ನು ಭೂಮಿಗೆ ಹಾಕಬೇಕು. ಇದಕ್ಕಾಗಿ ಹಸು, ಮೇಕೆ ಸಾಕಬೇಕು. ಭೂಮಿ ಫಲವತ್ತಾಗಿದ್ದಾರೆ ಮಾತ್ರ ಉತ್ತಮ ಬೆಳೆ ಸಾಧ್ಯ.-ಎಂ.ಸಿ.ಮನಗೋಳಿ, ತೋಟಗಾರಿಕೆ ಸಚಿವ