Advertisement

ತರಬೇತಿಯಲ್ಲಿ ಜ್ಞಾನ ವೃತ್ತಿಯಲ್ಲಿ ಉಪಯೋಗಿಸಿ: ದಂಡಗಿಮಠ

03:57 PM Dec 20, 2018 | Team Udayavani |

ಸೈದಾಪುರ: ಜ್ಞಾನ, ಕೌಶಲ ಒಲವುಗಳನ್ನು ಒಳಗೊಂಡ ಬಹುಮುಖೀ ಸಾಮರ್ಥ್ಯವುಳ್ಳ ಶಿಕ್ಷಕರು ನಾವಾಗಬೇಕು. ಇದಕ್ಕಾಗಿ ತರಬೇತಿಯಲ್ಲಿ ಪಡೆದ ಜ್ಞಾನವನ್ನು ವೃತ್ತಿಯಲ್ಲಿ ಅಳವಡಿಸಿಕೊಳ್ಳಬೇಕು ಎಂದು ಪ್ರಾಂಶುಪಾಲ ಕರಬಸಯ್ಯ
ದಂಡಗಿಮಠ ಹೇಳಿದರು.

Advertisement

ಕೂಡಲೂರ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ವಿದ್ಯಾವರ್ಧಕ ಕಾಲೇಜು ವತಿಯಿಂದ ಹಮ್ಮಿಕೊಂಡ ಬೋಧನಾ ಅಭ್ಯಾಸ ಪ್ರಾಯೋಗಿಕ ಪಾಠಗಳ ಮುಕ್ತಾಯ ಸಮಾರಂಭದ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ಬೋಧನಾ ಅಭ್ಯಾಸ ಮಕ್ಕಳಿಗೆ ಶಿಕ್ಷಣ ನೀಡುವ ಕಲೆಯನ್ನು ನಮ್ಮದಾಗಿಸಿಕೊಳ್ಳಲು ನೆರವು ನೀಡುತ್ತದೆ. ಗುಣಮಟ್ಟದ ಶಿಕ್ಷಣ ನೀಡುವಲ್ಲಿ ಈ ವಿವಿಧ ಪ್ರಾಯೋಗಿಕ ಪಾಠಗಳನ್ನು ಬಹುಮುಖ್ಯವಾಗಿವೆ ಎಂದು ಕಿವಿ ಮಾತು ಹೇಳಿದರು.

ಮುಖ್ಯಗುರು ಸುಲೇಮಾನ ಮಾತನಾಡಿ, ತರಬೇತಿ ಅವಧಿಯಲ್ಲಿ ಸಮಯ ಪಾಲನೆ, ಶಿಸ್ತಿನೊಂದಿಗೆ ಭಾಗವಹಿಸಿ ಉತ್ತಮ ಬೋಧನೆಯನ್ನು ಪ್ರಶಿಕ್ಷಣಾರ್ಥಿಗಳು ಮಾಡಿದ್ದಾರೆ. ಇಲ್ಲಿನ ಯಶಸ್ವಿಯಂತೆ ಸ್ಪರ್ಧಾತ್ಮಕ ಪರೀಕ್ಷೆಗಳಲ್ಲಿ ಉತ್ತಮ ಸಾಧನೆಯನ್ನು ಮಾಡಿ ಎಂದು ಹಾರೈಸಿದರು.

ಶಿಕ್ಷಕರಾದ ಸಾಬರಡ್ಡಿ, ಬಸವಲಿಂಗಪ್ಪ ಮಾತನಾಡಿದರು. ಪ್ರಶಿಕ್ಷಣಾರ್ಥಿಗಳಾದ ರಾಜೇಶ್ವರಿ, ಮಹಾಲಕ್ಷ್ಮೀ ತಮ್ಮ ಅನಿಸಿಕೆ ಹಂಚಿಕೊಂಡರು. ಎಸ್‌ಡಿಎಂಸಿ ಅಧ್ಯಕ್ಷ ಗೋಪಾಲ ಕೃಷ್ಣ, ಶಿಕ್ಷಕರಾದ ಸುಮಲತಾ, ಪ್ರೀತಿ, ಬಸವಲಿಂಗಪ್ಪ,
ಸಾಬರಡ್ಡಿ, ಸೀತರಾಮ, ಸುನೀತಾ ಸೇರಿದಂತೆ ಪ್ರಥಮ ಹಾಗೂ ದ್ವಿತೀಯ ವರ್ಷದ ಪ್ರಶಿಕ್ಷಣಾರ್ಥಿಗಳು ಇದ್ದರು. ಪವಿತ್ರ ಸ್ವಾಗತ ಗೀತೆ ಪ್ರಸುತ್ತ ಪಡಿಸಿದರು. ರೇಣುಕಾ ಸ್ವಾಗತಿಸಿದರು. ಮಾಳಮ್ಮ ನಿರೂಪಿಸಿದರು. ಮಮತಾ ವಂದಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next