Advertisement

ಅನುದಾನ ಸಕಾಲದಲ್ಲಿ ಬಳಸಿ

10:34 AM Nov 23, 2018 | Team Udayavani |

ಶಹಾಪುರ: ಸರ್ಕಾರದ ವಿವಿಧ ಯೋಜನೆಗಳ ಅನುದಾನ ಸಕಾಲದಲ್ಲಿ ಬಳಸಿಕೊಂಡು ಅಗತ್ಯ ಕಾಮಗಾರಿಗಳನ್ನು ಕೈಗೊಳ್ಳುವ ಮೂಲಕ ಸಾರ್ವಜನಿಕರಿಗೆ ಅನುಕೂಲ ಕಲ್ಪಿಸಬೇಕು. ತಾಲೂಕು ಅಭಿವೃದ್ಧಿಗೆ ಸಹಕರಿಸಬೇಕು ಎಂದು ತಾಪಂ ಅಧ್ಯಕ್ಷ ಬಸವಂತರಡ್ಡಿ ಸಾಹು ಅಧಿಕಾರಿಗಳಿಗೆ ಸೂಚಿಸಿದರು.

Advertisement

ನಗರದ ತಾಪಂ ಸಭಾಂಗಣದಲ್ಲಿ ತಾಪಂ ನೂತನ ಅಧ್ಯಕ್ಷರ ಅಧ್ಯಕ್ಷತೆಯಲ್ಲಿ ನಡೆದ ಪ್ರಥಮ ಸಾಮಾನ್ಯ ಸಭೆಯಲ್ಲಿ ಅಧಿಕಾರಿಗಳೊಂದಿಗೆ ವಿವಿಧ ಕಾಮಗಾರಿಗಳ ಕುರಿತ ಮಾತನಾಡಿದರು.

ಆದಷ್ಟು ಮೇ. ಅಂತ್ಯದೊಳಗೆ ಪ್ರಸ್ತುತ ಲಭ್ಯವಿರುವ ಅನುದಾನವನ್ನು ಸಂಪೂರ್ಣವಾಗಿ ಖರ್ಚು ಮಾಡಬೇಕು. ತಾಲೂಕಿನ ಗ್ರಾಮೀಣ ಭಾಗ ಅಭಿವೃದ್ಧಿಗೆ ಶ್ರಮಿಸಬೇಕು. ಗ್ರಾಮಗಳ ಮೂಲ ಸೌಕರ್ಯ ಕಲ್ಪಿಸುವಲ್ಲಿ ಅಧಿಕಾರಿಗಳು ಮುಂದಾಗಬೇಕು. ಅನುದಾನ ಸದ್ಬಳಿಕೆಯಾಗಬೇಕು ಎಂದು ತಿಳಿಸಿದರು.

ವಿವಿಧ ಇಲಾಖೆ ಕಾರ್ಯ ವೈಖರಿ ಕಾಮಗಾರಿಗಳ ವಿವಿಧ ಯೋಜನೆಗಳ ಅನುಷ್ಠಾನ ಕುರಿತು ಪರಿಶೀಲನೆ ನಡೆಸಿದರು.
ಸಮಗ್ರ ಅಭಿವೃದ್ಧಿಗೆ ಪೂರಕ ಸಹಕಾರ ಅಗತ್ಯ. ಅಧಿಕಾರಿಗಳು ಕೂಡಲೇ ಅನುದಾನ ಬಳಸಿಕೊಂಡು ಅಗತ್ಯ ಇರುವ ಕಡೆ ಜನರ ಬೇಡಿಕೆಗೆ ಅನುಗುಣವಾಗಿ ಸೌಲಭ್ಯ ಕಲ್ಪಿಸಲು ಕ್ರಮ ಕೈಗೊಳ್ಳಬೇಕು ಎಂದು ಸೂಚಿಸಿದರು.

ಈ ಸಂದರ್ಭದಲ್ಲಿ ಕ್ಷೇತ್ರ ಶಿಕ್ಷಣಾಧಿಕಾರಿ ಹಣಮಂತಪ್ಪ ನಾಟೇಕಾರ ಮಾತನಾಡಿ, ಶೈಕ್ಷಣಿಕ ವರದಿ ಪ್ರಸ್ತಾಪ ಮಾಡಿ ಈಗಾಗಲೇ ಶಿಕ್ಷಕರ ಕೌನ್ಸಲಿಂಗ್‌ ನಡೆದಿದ್ದು, ಮುಂದೆ ಅವಶ್ಯಕ ಶಾಲೆಗಳಿಗೆ ಶಿಕ್ಷಕರನ್ನು ನಿಯೋಜನೆ ಮಾಡಲಾಗುತ್ತದೆ ಎಂದರು.

Advertisement

ತುಮಕೂರ ತಾಪಂ ಸದಸ್ಯೆ ಲಕ್ಷ್ಮೀ ನಾಗರಾಜ ಮಾತನಾಡಿ, ಶಾಲಾ ಮಕ್ಕಳಿಗಾಗಿ ಸ್ಕೂಲ್‌ ಬ್ಯಾಗ್‌, ಬಟ್ಟೆ ಶೂಗಳಲ್ಲಿ ಅವ್ಯವಹಾರ ನಡೆದಿದ್ದು, ಅನಧಿಕೃತ ಏಜನ್ಸಿಯವರು ಈ ಸಲಕರಣೆಗಳನ್ನು ಖರೀದಿಸಿದ್ದಾರೆ ಎಂದು ಆರೋಪಿಸಿದರು. ಸದಸ್ಯರ ಆರೋಪ ಕುರಿತ ತಾಪಂ ಅಧ್ಯಕ್ಷ ಬಸವಂತರಡ್ಡಿ ಅವರು, ಅಕ್ರಮ ಅವ್ಯವಹಾರ ಕುರಿತು ಆರೋಪ ಮಾಡುತ್ತಿದ್ದಾರೆ. ಸಾಕಷ್ಟು ದೂರುಗಳು ಬಂದಿವೆ. ಹೀಗಾಗಿ ಶಾಲಾ ಬಟ್ಟೆ, ಬ್ಯಾಗ್‌, ಶೂ ವಿತರಣೆ ಕುರಿತ ಕೂಡಲೇ ಸಮಗ್ರ ತನಿಖೆ ನಡೆಸುವ ಮೂಲಕ ಸೂಕ್ತ ಕ್ರಮ ಕೈಗೊಳ್ಳಿ ಎಂದು ತಾಪಂ ಅಧಿಕಾಗಳಿಗೆ ಸೂಚಿಸಿದರು.

ಈ ಸಂದರ್ಭದಲ್ಲಿ ಖಾನಾಪುರ ತಾಪಂ ಸದಸ್ಯ ಪರಶುರಾಮ ಕುರಕುಂದಿ ಶಿಕ್ಷಣ ಇಲಾಖೆ ಕೈಗೊಂಡ ಶಾಲಾ ಕಟ್ಟಡಗಳ
ಕುರಿತು ಮಾಹಿತಿ ಪಡೆದುಕೊಂಡು ಕಾಮಗಾರಿ ಮುಗಿದ ಶಾಲಾ ಕಟ್ಟಡಗಳನ್ನು ವಶಕ್ಕೆ ಪಡೆದುಕೊಂಡು ಸದುಪಯೋಗ ಪಡಿಸಿಕೊಳ್ಳಬೇಕು. ಕೆಲವಡೆ ಖಾಸಗಿ ಜಾಗದಲ್ಲಿ ಶಾಲಾ ಕಟ್ಟಡ ನಿರ್ಮಿಸಲಾಗಿದೆ ಕೂಡಲೇ ಶಿಕ್ಷಣ ಇಲಾಖೆ ಅವುಗಳನ್ನು ಸ್ವಾಧೀನಪಡಿಸಿಕೊಳ್ಳಬೇಕು. ಮತ್ತು ವಿವಿಧ ಇಲಾಖೆ ಅಧಿಕಾರಿಗಳು ಗೈರು ಹಾಜರಿಯಾಗಿದ್ದು, ಪ್ರತಿ ಸಭೆಯಲ್ಲಿ ಸಂಬಂಧಿಸಿದ ಅಧಿಕಾರಿಗಳು ಸಮರ್ಪಕ ಮಾಹಿತಿಯೊಂದಿಗೆ ಹಾಜರಿರಬೇಕೆಂದು ಒತ್ತಾಯಿಸಿದರು. ಬಿಸಿಎಂ ಅಧಿಕಾರಿ ಸೋಮಶೇಖರ ಮಾತನಾಡಿ, ತಾಲೂಕಿಗೆ ಇನ್ನೂ 4 ವಸತಿ ನಿಲಯಗಳು ಮಂಜೂರಿಯಾಗಿದ್ದು, ಸೂಕ್ತ ಸ್ಥಳಕ್ಕಾಗಿ ಪ್ರಸ್ತಾವನೆ ಸಲ್ಲಿಸಲಾಗಿದೆ ಎಂದು ತಿಳಿಸಿದರು. 

Advertisement

Udayavani is now on Telegram. Click here to join our channel and stay updated with the latest news.

Next