Advertisement

ಸಿಕ್ಕಿದ ಅವಕಾಶ ಸೇವೆಗೆ ಬಳಸಿಕೊಳ್ಳಿ ಡಾ|ಶಾಂತಾರಾಮ್‌ ಕರೆ

08:00 AM Aug 14, 2017 | Team Udayavani |

ಉಡುಪಿ: ಪ್ರತಿಯೊಬ್ಬರಿಗೂ ಅವಕಾಶಗಳು ಲಭಿಸುತ್ತವೆ. ಇವುಗಳನ್ನು ಸೇವೆಯಾಗಿ ಬಳಸಿಕೊಳ್ಳಬೇಕು ಸಮಾಜಕೊಟ್ಟ ಅವಕಾಶವನ್ನು ಸೇವೆಯಾಗಿ ಬಳಸಿಕೊಳ್ಳುವ ಮನೋಭೂಮಿಕೆಯನ್ನು ಬೆಳೆಸಿಕೊಂಡರೆ ಮುಪ್ಪು ಬರುವುದಿಲ್ಲ. ಹಲವು ಕಾಲ ಬಾಳಬಹುದು…

Advertisement

ಇದು ಮಣಿಪಾಲ ಅಕಾಡೆಮಿ ಆಫ್ ಜನರಲ್‌ ಎಜುಕೇಶನ್‌ ಆಡಳಿತಾಧಿಕಾರಿ, ಕಾರ್ಯದರ್ಶಿ ಡಾ| ಎಚ್‌. ಶಾಂತಾರಾಮ್‌ ಸಂದೇಶ. ಎಂಜಿಎಂ ಕಾಲೇಜಿನ ನೂತನ ರವೀಂದ್ರ ಮಂಟಪದಲ್ಲಿ 90ರ ಹುಟ್ಟು ಹಬ್ಬದ ನಿಮಿತ್ತ ರವಿವಾರ ತನ್ನನ್ನು ಅಭಿನಂದಿಸಿದ ಸಂದರ್ಭ ಮಾತನಾಡಿದ ಡಾ| ಶಾಂತಾರಾಮ್‌ ಅವರು, ಎಂಜಿಎಂ ಕಾಲೇಜಿನ ಪ್ರಥಮ ಪ್ರಾಂಶುಪಾಲರ ಅವಧಿಯಲ್ಲಿ ಹಂಗಾಮಿಯಾಗಿ ಕೆಲವು ತಿಂಗಳು ಪಾಠ ಮಾಡಿರುವ ದಿನಗಳನ್ನು ನೆನಪಿಸಿಕೊಂಡರು. ಕೊನೆ ಕ್ಷಣದವರೆಗೂ ವಿದ್ಯಾ ಕ್ಷೇತ್ರದಲ್ಲಿ ಸೇವೆ ಸಲ್ಲಿಸುವ ಹಂಬಲವಿದೆ ಎಂದರು.

ಅಧ್ಯಕ್ಷತೆ ವಹಿಸಿದ್ದ ಅಕಾಡೆಮಿ ಅಧ್ಯಕ್ಷ ಡಾ| ಎಚ್‌.ಎಸ್‌. ಬಲ್ಲಾಳ್‌ ಅವರು ಮಾತನಾಡಿ, ಡಾ| ಶಾಂತಾರಾಮ್‌ ಅವರು ಜ್ಞಾನಪಿಪಾಸು. ವಿಜ್ಞಾನದ ಜತೆ ಸಾಹಿತ್ಯ, ಕಲೆಗಳನ್ನೂ ಅರಿತ ಅಪರೂಪದ ವ್ಯಕ್ತಿ ಎಂದು ಬಣ್ಣಿಸಿದರು. ಹಣ,
ಬಂಧುಗಳು ಕೊನೆಯವರೆಗೆ ಬರುವುದಿಲ್ಲ. ನಾವು ಮಾಡಿದ ಉತ್ತಮ ಕೆಲಸಗಳೇ ಕೊನೆಯವರೆಗೂ ಬರುತ್ತವೆ ಎಂಬ ವಿವೇಕಾನಂದರ ಮಾತನ್ನು ಪಾಲಿಸಬೇಕಾಗಿದೆ ಎಂದರು.

ಅಕಾಡೆಮಿ ಉಪಾಧ್ಯಕ್ಷ ಟಿ. ಸತೀಶ್‌ ಯು. ಪೈ, “ತರಂಗ’ ವ್ಯವಸ್ಥಾಪಕ ಸಂಪಾದಕಿ ಡಾ| ಸಂಧ್ಯಾ ಎಸ್‌. ಪೈ ಉಪಸ್ಥಿತರಿದ್ದರು. ಪ್ರಾಂಶುಪಾಲೆ ಕುಸುಮಾ ಕಾಮತ್‌, ಪ.ಪೂ. ಕಾಲೇಜು ಪ್ರಾಂಶುಪಾಲೆ ಮಾಲತಿದೇವಿ, ಪ್ರಾಧ್ಯಾ
ಪಕರಾದ ಡಾ| ಸುರೇಶರಮಣ ಮಯ್ಯ, ವಿಶ್ವನಾಥ ಪೈ ಶುಭ ಕೋರಿದರು. 

ವಿಜಯಲಕ್ಷ್ಮೀ ಶಾಂತಾರಾಮ್‌ ಕೃತಜ್ಞತೆ ಸಲ್ಲಿಸಿದರು. ವಿಭಾಗ ಮುಖ್ಯಸ್ಥರಾದ ಡಾ| ಸಂಧ್ಯಾ ಆರ್‌. ನಂಬಿಯಾರ್‌ ಸ್ವಾಗತಿಸಿ ಡಾ| ಎಂ.ಜಿ. ವಿಜಯ ವಂದಿಸಿದರು. ಕೊಕ್ಕರ್ಣೆ ಸುರೇಂದ್ರನಾಥ ಶೆಟ್ಟಿ ಕಾರ್ಯಕ್ರಮ ನಿರ್ವಹಿಸಿದರು. ವಿದ್ಯಾರ್ಥಿಗಳಾದ ವಿಶ್ವತಾ, ಆಶ್ರಯ, ಮೇಘನಾ ಮಂಕು ತಿಮ್ಮನ ಕಗ್ಗಗಳನ್ನು ಹಾಡಿದರು.

Advertisement
Advertisement

Udayavani is now on Telegram. Click here to join our channel and stay updated with the latest news.

Next