Advertisement

Govt; ಎಸ್‌ಸಿಪಿ, ಟಿಎಸ್‌ಪಿ ಹಣ ಗ್ಯಾರಂಟಿಗೆ ಬಳಕೆ: ಗದ್ದಲ

11:23 PM Feb 23, 2024 | Team Udayavani |

ಬೆಂಗಳೂರು: ಪರಿಶಿಷ್ಟ ಜಾತಿ ಮತ್ತು ಪಂಗಡಗಳ ಕಲ್ಯಾಣಕ್ಕಾಗಿ ಎಸ್ಸಿಎಸ್ಪಿ/ ಟಿಎಸ್ಪಿ ಯೋಜನೆ ಅಡಿ ಮೀಸಲಿಟ್ಟ ಹಣವನ್ನು ಸರಕಾರ ತನ್ನ ಗ್ಯಾರಂಟಿ ಯೋಜನೆಗಳಿಗೆ ಬಳಸಿರುವ ವಿಚಾರ ಗುರುವಾರ ಮತ್ತೆ ಮೇಲ್ಮನೆಯಲ್ಲಿ ಪ್ರತಿಧ್ವನಿಸಿ ಗದ್ದಲಕ್ಕೆ ಕಾರಣವಾಯಿತು.

Advertisement

ಪ್ರಶ್ನೋತ್ತರ ವೇಳೆ ಬಿಜೆಪಿಯ ಛಲವಾದಿ ನಾರಾಯಣ ಸ್ವಾಮಿ ವಿಷಯ ಪ್ರಸ್ತಾವಿಸಿ, ಸರಕಾರ ಪರಿಶಿಷ್ಟ ಜಾತಿ ಮತ್ತು ಪಂಗಡಗಳಿಗೆ ಮೀಸಲಿಟ್ಟ 14,282 ಕೋ. ರೂ. ಅನುದಾನವನ್ನು ತನ್ನ ಗ್ಯಾರಂಟಿ ಯೋಜನೆಗಳ ಅನುಷ್ಠಾನಕ್ಕಾಗಿ ಬಳಸಿಕೊಳ್ಳುತ್ತಿದೆ. ಇದರಿಂದ ದಲಿತ ಸಮುದಾಯಗಳಿಗೆ ಮನೆ ಮತ್ತಿತರ ಅಭಿವೃದ್ಧಿ ಯೋಜನೆಗಳಿಗೆ ಹಿನ್ನಡೆ ಆಗುತ್ತಿದೆ. ಕಳೆದ ಬಾರಿಯೂ 11,134 ಕೋ. ರೂ. ಬಳಕೆ ಮಾಡಿಕೊಳ್ಳಲು ಉದ್ದೇಶಿಸಿತ್ತು. ಈ ಪರಂಪರೆ ಹಾಗೇ ಮುಂದುವರಿಯುತ್ತಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಇದಕ್ಕೆ ಪ್ರತಿಕ್ರಿಯಿಸಿದ ಸಮಾಜ ಕಲ್ಯಾಣ ಸಚಿವ ಎಚ್‌.ಸಿ.ಮಹದೇವಪ್ಪ, ಎಸ್ಸಿಎಸ್ಪಿ-ಟಿಎಸ್ಪಿ ಕಾಯ್ದೆಗೆ ಈ ಹಿಂದೆಯೇ ತಿದ್ದುಪಡಿ ಮಾಡಲಾಗಿದೆ. ಅಲ್ಲಿ ಸೆಕ್ಷನ್‌ 7ಡಿ ತೆಗೆದುಹಾಕುವ ಮೂಲಕ ಅನ್ಯ ಉದ್ದೇಶಕ್ಕೆ ಬಳಸಲು ಅವಕಾಶವೇ ಇಲ್ಲದಂತೆ ಮಾಡಲಾಗಿದೆ. ಹಾಗಾಗಿ ಬೇರೆ ಉದ್ದೇಶಕ್ಕೆ ಬಳಕೆ ಎನ್ನುವ ಆರೋಪವೇ ಸರಿ ಅಲ್ಲ ಎಂದು ಸ್ಪಷ್ಟಪಡಿಸಿದರು.

ಇದಕ್ಕೆ ಆಕ್ಷೇಪ ವ್ಯಕ್ತಪಡಿಸಿದ ವಿಪಕ್ಷ ನಾಯಕ ಕೋಟ ಶ್ರೀನಿವಾಸ ಪೂಜಾರಿ, ಬೇಕಾಬಿಟ್ಟಿ ಅನುದಾನ ಬಳಸಿಕೊಂಡು ದಲಿತರಿಗೆ ಅನ್ಯಾಯ ಮಾಡುತ್ತಿದೆ. ಅಲ್ಪಸಂಖ್ಯಾಕ ಅಥವಾ ಹಿಂದುಳಿದ ವರ್ಗಗಳಿಗೆ ಮೀಸಲಿಟ್ಟ ಹಣವನ್ನು ಯಾಕೆ ಹೀಗೆ ಅನ್ಯ ಉದ್ದೇಶಕ್ಕೆ ಬಳಕೆ ಆಗುವುದಿಲ್ಲ ಎಂದು ಕೇಳಿದರು. ಇದಕ್ಕೆ ಛಲವಾದಿ ನಾರಾಯಣ ಸ್ವಾಮಿ ದನಿಗೂಡಿಸಿದರು.

ಎಚ್‌.ಸಿ. ಮಹದೇವಪ್ಪ ಮಾತನಾಡಿ, ದಲಿತ ಸಮುದಾಯಕ್ಕೆ ಯಾವುದೇ ಅನ್ಯಾಯ ಆಗುವುದಿಲ್ಲ. ಅನುದಾನ ಅನ್ಯ ಉದ್ದೇಶಕ್ಕೆ ಬಳಸಿಕೊಳ್ಳಲೂ ಇಲ್ಲಿ ಅವಕಾಶ ಇಲ್ಲ. ದಲಿತರಿಗೆ ಜನಸಂಖ್ಯೆಗೆ ಅನುಗುಣವಾಗಿ ಹಣ ಒದಗಿಸಲಾಗುತ್ತಿದೆ. ಅಲ್ಪಸಂಖ್ಯಾಕ ಅಥವಾ ಹಿಂದುಳಿದ ವರ್ಗದಲ್ಲಿ ಹೀಗಿಲ್ಲ ಎಂದು ಸ್ಪಷ್ಟಪಡಿಸಿದರು.

Advertisement

ಯಾವ ಗ್ಯಾರಂಟಿಗೆ ಎಷ್ಟು ವೆಚ್ಚ?
2023-24ನೇ ಸಾಲಿನ ಎಸ್ಸಿಎಸ್ಪಿ-ಟಿಎಸ್ಪಿ ಯೋಜನೆ ಅಡಿ ಮೀಸಲಾದ ಅನುದಾನದಲ್ಲಿ ಗ್ಯಾರಂಟಿ ಯೋಜನೆಗಳ ಅನುಷ್ಠಾನಕ್ಕಾಗಿ 2024ರ ಫೆ. 12ರ ವರೆಗೆ ವ್ಯಯಿಸಲಾದ ಅನುದಾನ 6,162 ಕೋಟಿ ರೂ. ಯಾವ ಗ್ಯಾರಂಟಿಗೆ ಎಷ್ಟು ಎಂಬುದರ ವಿವರ ಹೀಗಿದೆ (ಕೋಟಿ ರೂ.ಗಳಲ್ಲಿ).

ನಾನೇ ಪರಮಾತ್ಮನನ್ನು ಆಡಿಸುತ್ತೇನೆ!
ಪರಮಾತ್ಮ ನನ್ನನ್ನು ಆಡಿಸುವು ದಿಲ್ಲ. ನಾನೇ ಪರಮಾತ್ಮನನ್ನು ಆಡಿಸುತ್ತೇನೆ! ಇದು ಬಿಜೆಪಿ ಛಲವಾದಿ ನಾರಾಯಣ ಸ್ವಾಮಿಗೆ ಸಚಿವ ಎಚ್‌.ಸಿ. ಮಹದೇವಪ್ಪ ನೀಡಿದ ತಿರುಗೇಟು ಇದು. ಪರಮಾತ್ಮ ಆಡಿಸಿದಂತೆ ನೀವು ಆಡುತ್ತಿದ್ದೀರಷ್ಟೇ ಎಂದು ಛಲವಾದಿ ನಾರಾಯಣ ಸ್ವಾಮಿ ಕಾಲೆಳೆದರು. ಇದಕ್ಕೆ ತಿರುಗೇಟು ನೀಡಿದ ಸಚಿವರು, ಪರಮಾತ್ಮನನ್ನೇ ನಾನು ಆಡಿಸುತ್ತೇನೆ. ಹಾಗೆ ಆಡಿಸಿದ್ದರಿಂದಲೇ ಎಸ್ಸಿಎಸ್ಪಿ- ಟಿಎಸ್ಪಿ ಕಾಯ್ದೆ ಬರಲು ಸಾಧ್ಯವಾಯಿತು ಎಂದರು.

Advertisement

Udayavani is now on Telegram. Click here to join our channel and stay updated with the latest news.

Next