Advertisement

ದೇಶದ ಅಭಿವೃದ್ಧಿಗೆ ಸ್ವದೇಶಿ ವಸ್ತು ಬಳಸಿ

05:19 AM Jun 28, 2020 | Lakshmi GovindaRaj |

ಮಂಡ್ಯ: ಸ್ವದೇಶಿ ವಸ್ತುಗಳ ಬಳಕೆಯಿಂದ ದೇಶದ ಆರ್ಥಿಕತೆ ಬಲಪಡಿಸಬಹುದು ಎಂದು ಆತ್ಮನಿರ್ಭರ ಭಾರತ ಅಭಿಯಾನದ ಪ್ರಮುಖ್‌ ಸಿ.ಟಿ.ಮಂಜುನಾಥ್‌ ತಿಳಿಸಿದರು. ಬಿಜೆಪಿ ನಗರ ಘಟಕ, ಆತ್ಮನಿರ್ಭರ ಭಾರತ ವತಿಯಿಂದ ನಗರದ  ಹಾಲಹಳ್ಳಿ ಬಡಾವಣೆಯಲ್ಲಿ ನಡೆದ ರಾಷ್ಟ್ರೀಯತೆ, ಸ್ವದೇಶಿ ವಸ್ತುಗಳ ಬಳಕೆ ಕುರಿತ ಜನಜಾಗೃತಿ ಕಾರ್ಯಕ್ರಮದಲ್ಲಿ ಮಾತನಾಡಿ, ಚೀನಾ ವಸ್ತುಗಳನ್ನು ಬಹಿಷ್ಕರಿಸಿ ಹಾಗೂ ಸ್ವದೇಶಿ ವಸ್ತುಗಳ ಬಳಸಬೇಕು.

Advertisement

ಜಾಗತೀಕರಣ, ಉದಾರೀಕರಣ, ಖಾಸಗೀಕರಣದಿಂದ ಸರ್ಕಾರ ಸಂಕಷ್ಟಕ್ಕೆ  ಸಿಲುಕಿದೆ. ನಮ್ಮ ದೇಶದ ಜನರು ಖರೀದಿಸುವ ವಿದೇಶಿ ವಸ್ತುಗಳಿಂದ ಆ ದೇಶದ ಆರ್ಥಿಕತೆ ಸಬಲಗೊಳ್ಳುತ್ತದೆ. ಹೀಗೆ ಒಂದು ದೇಶದ ಆರ್ಥಿಕತೆ ಇನ್ನೊಂದು ದೇಶದ  ವ್ಯಾಪಾರ ವ್ಯವಸ್ಥೆ ಮೇಲೆ  ವಲಂಬಿಸಿರುತ್ತದೆ. ಭಾರತದಲ್ಲಿ ನೆರೆ ರಾಷ್ಟ್ರೀಯ ವಸ್ತುಗಳು ಲಗ್ಗೆ ಇಟ್ಟಿದ್ದು, ಚೀನಾದ ವಸ್ತುಗಳ ಹಾವಳಿ ಹೆಚ್ಚಾಗಿದೆ.

ಹೀಗಾಗಿ ನಮ್ಮ ದೇಶದ ವಸ್ತುಗಳಿಗೆ ಬೇಡಿಕೆ ಕಡಿಮೆಯಾಗುತ್ತಿದ್ದು, ಚೀನಾ, ಭಾರತಕ್ಕಿಂತ ಆರ್ಥಿಕವಾಗಿ  ಸಬಲಗೊಳ್ಳುತ್ತಿದೆ ಎಂದು ತಿಳಿಸಿದರು. ಸ್ವದೇಶಿ ವಸ್ತುಗಳ ಬೇಡಿಕೆ ಕಡಿಮೆ ಹಿನ್ನೆಲೆಯಲ್ಲಿ ದೇಶಿ ಕುಶಲ ವಸ್ತುಗಳ ತಯಾರಿಕಾ ಘಟಕಗಳು ಮುಚ್ಚಿವೆ. ಇದನ್ನು ಅವಲಂಬಿಸಿರುವ ಲಕ್ಷಾಂತರ ಜನರು ಉದ್ಯೊಗ ಕಳೆದುಕೊಳ್ಳುತ್ತಿದ್ದು, ಆರ್ಥಿಕ  ಸಂಕಷ್ಟ ಎದುರಿಸುತ್ತಿದ್ದಾರೆ.

ಇದೇ ಪರಿಸ್ಥಿತಿ ಮುಂದುವರಿದರೆ ದೇಶದಲ್ಲಿರುವ ಎಲ್ಲ ಗುಡಿ ಕೈಗಾರಿಕೆಗಳ ನಶಿಸುವಿಕೆ ಅನಿವಾರ್ಯವಾಗಬಹುದು ಎಂದು ಎಚ್ಚರಿಸಿದರು. ಬಿಜೆಪಿ ನಗರಾಧ್ಯಕ್ಷ ಬಿ.ವಿವೇಕ್‌, ಹಿಂದುಳಿದ ವರ್ಗಗಳ ವಿಭಾಗದ ಜಿಲ್ಲಾಧ್ಯಕ್ಷ ರಮೇಶ್‌ ವಿಶ್ವಕರ್ಮ, ಎಸ್‌ಸಿ ಮೋರ್ಚಾ ಅಧ್ಯಕ್ಷ ನಿತ್ಯಾನಂದ, ಮುಖಂಡರಾದ ಸಿದ್ದರಾಜುಗೌಡ, ಮಾದರಾಜ ಅರಸ್‌, ನಾಗಣ್ಣ ಮಲ್ಲಪ್ಪ ಇದ್ದರು.

Advertisement

Udayavani is now on Telegram. Click here to join our channel and stay updated with the latest news.

Next