Advertisement
ದಾಸವಾಳದಾಸವಾಳ ಹೂ ಹಾಗೂ ಇದರ ಎಲೆ ಅತ್ಯುತ್ತಮ ಶ್ಯಾಂಪೂ ಆಗಿ ಕಾರ್ಯ ನಿರ್ವಹಿಸುತ್ತದೆ. ಇದನ್ನು ಜಜ್ಜಿ ತಲೆಗೆ ಹಚ್ಚುವುದರಿಂದ ಕೂದಲಿಗೆ ತಂಪು ಉಂಟಾಗುತ್ತದೆ. ಉದ್ದಕ್ಕೆ ಬೆಳೆಯಲೂ ಇದು ಸಹಕಾರಿ. ದಾಸವಾಳದ ಎಲೆ ಹಾಗೂ ನೀರಿನಲ್ಲಿ ನೆನೆಸಿದ ಮೆಂತೆಯನ್ನು ಪೇಸ್ಟ್ ಮಾಡಿ ಹಚ್ಚಬಹುದು. ಇದು ಕೂದಲಿನಲ್ಲಿರುವ ಜಿಡ್ಡಿನ ಅಂಶವನ್ನು ತೆಗೆಯಲು ಸಹಕಾರಿ. ಮೆಂತೆಯೂ ದೇಹಕ್ಕೆ ತಂಪನ್ನು ನೀಡುತ್ತದೆ. ಜತೆಗೆ ಕೂದಲಿನ ಬೆಳವಣಿಗೆಗೂ ಇದು ಉತ್ತಮ.
ಹೆಚ್ಚಿನ ಎಲ್ಲ ಶ್ಯಾಂಪೂಗಳು ಲೋಳೆಸರ ಜೆಲ್ಲಿಯಿಂದ ತಯಾರಿಸಲಾಗಿದೆ ಎಂದು ಹೇಳಿದರೂ ಅದರಲ್ಲಿರುವ ಪ್ರಮಾಣ ಎಷ್ಟು ಎಂಬುದು ಪ್ರಶ್ನಾತೀತ. ಲೋಳೆಸರ ಜೆಲ್ಲಿಯನ್ನು ತಲೆಗೆ ಹಚ್ಚಿ ಸ್ನಾನ ಮಾಡುವುದರಿಂದ ಕೂದಲು ಹೊಳೆಯುತ್ತದೆ ಹಾಗೂ ಸೊಂಪಾಗಿ ಬೆಳೆಯುತ್ತದೆ. ಸರೋಳಿ ಸೊಪ್ಪಿನ ರಸ (ಗೊಂಪು)ಇದು ಸಣ್ಣ ಮಕ್ಕಳಿಗೆ ತಲೆಗೆ ಹಚ್ಚುವಂತಹ ರಸ. ಈ ಸೊಪ್ಪಿನ ರಸ ತೆಗೆದು ಶ್ಯಾಂಪೂ ಆಗಿ ಬಳಸಬಹುದು. ಕೂದಲು ಬೆಳೆಯಲು ಬೇಕಾಗುವ ಅಂಶಗಳು ಈ ಸೊಪ್ಪಿನಲ್ಲಿವೆ.
Related Articles
ಸೀಗೆ ಕಾಯಿಯಲ್ಲಿರುವ ನೊರೆ ಅಂಶವು ಕೂದಲಿನ ಜಿಡ್ಡು ನಿವಾರಣೆಗೆ ಸಹಕಾರಿ. ಇದನ್ನು ತಲೆಗೆ ಹಚ್ಚುವುದರಿಂದ ಯಾವುದೇ ವಿಧವಾದ ಸೈಡ್ ಎಫೆಕ್ಟ್ ಗಳಿಲ್ಲ. ಕೂದಲಿಗೆ ಯಾವುದೇ ಹಾನಿಯುಂಟಾಗುವುದಿಲ್ಲ.ಜಾಹೀರಾತನ್ನು ನೋಡಿ ಬಳಸುವ ಮುನ್ನ ಮನೆ ಹಿತ್ತಿಲಿನಲ್ಲಿರುವ ಮದ್ದುಗಳನ್ನು ಒಂದು ಸಲ ಪ್ರಯೋಗಿಸುವುದು ಒಳಿತು.
Advertisement
- ಸುಶ್ಮಿತಾ ಶೆಟ್ಟಿ ಸಿರಿಬಾಗಿಲು