Advertisement

ವಿಶ್ವ ಆ್ಯತ್ಲೆಟಿಕ್ಸ್‌: ಬೂಟ್‌ ಬಿಚ್ಚಿದ ಬೋಲ್ಟ್

06:40 AM Aug 07, 2017 | |

ಜಮೈಕಾ: ಆತ ವಿಶ್ವ ಆ್ಯತ್ಲೆಟಿಕ್ಸ್‌ನ ಅನಭಿಷಿಕ್ತ ದೊರೆ. ಟ್ರ್ಯಾಕ್‌ಗೆ ಬಂದು ನಿಂತ ನೆಂದರೆ ಸಾಕು ವಿಶ್ವ ದಾಖಲೆಗಳ ಸರದಾರ. 8 ಬಾರಿ ಒಲಿಂಪಿಕ್ಸ್‌ನ ಚಿನ್ನ ಗೆದ್ದ ಬೇಟೆಗಾರ.

Advertisement

ವಿಶ್ವದ ಶ್ರೀಮಂತರ ಫೋಬ್ಸ್ ಪಟ್ಟಿಯಲ್ಲೂ ಅಗ್ರ ಸಾಧಕ. ಕಿರಿಯ ವಯಸ್ಸಿನಲ್ಲಿ ಮಹೋ ನ್ನತ  ದಾಖಲೆಗಳ ಬರೆದ ವೀರ. ಆತನಿಗೆ ಸರಿ ಸಾಟಿಯಾಗಬಲ್ಲ ಮತ್ತೋರ್ವ ಆ್ಯತ್ಲೀಟ್‌ ಜಗತ್ತಿ ನಲ್ಲೇ ಇಲ್ಲ. ಆತನಿಗೆ ಆತನೇ ಸಾಟಿ. ‘ಬಾರ್ನ್ ಟು ವಿನ್‌’ ಎನ್ನುವ ಸಾಲು ಉಸೇನ್‌ ಬೋಲ್ಟ್ಗಾಗಿಯೆ ಬರೆದಂತಿದೆ.

ಹೌದು, ಜಮೈಕಾದ ಜಿಂಕೆ ಖ್ಯಾತಿಯ ಉಸೇನ್‌ ಬೋಲ್ಟ್ ಎಂದರೇನೇ ಹಾಗೆ. ಒಂದು ಥರ ಬೆಂಕಿ ಬಿರುಗಾಳಿ ಇದ್ದಂತೆ. ಆ ಹೆಸರಲ್ಲೇ ಅಷ್ಟೊಂದು ಪವರ್‌ ಇದೆ. ಇದು ಬೋಲ್ಟ್ ವಿಶ್ವ ಆ್ಯತ್ಲೆಟಿಕ್ಸ್‌ನಲ್ಲಿ ದಾಖಲೆಗಳ ಮೂಲಕ ಕೋಟ್ಯಂತರ ಅಭಿ ಮಾನಿಗಳನ್ನು ಸಂಪಾದಿಸಿ ರುವುದು ಅವರ ಖ್ಯಾತಿಗೆ ಪ್ರತ್ಯಕ್ಷ ಉದಾಹರಣೆ. ಹಣ ಬಂತು, ಹೆಸರು ಬಂತು. ಆದರೆ ಸರಳ ಸಜ್ಜನಿಕೆಯಲ್ಲಿ ಬೋಲ್ಟ್ ಯಾವಾಗಲೂ ಒಂದು ಕೈ ಮೇಲು.

ಕಂಚಿನೊಂದಿಗೆ 
ಬೋಲ್ಟ್ ಯುಗ ಅಂತ್ಯ

ಶನಿವಾರ ನಡೆದ ವಿಶ್ವ ಆ್ಯತ್ಲೆಟಿಕ್‌ ಕೂಟದ ವೈಯಕ್ತಿಕ ವಿಭಾಗದ 100 ಮೀ. ಓಟದಲ್ಲಿ ಅವರು ಚಿನ್ನದ ಪದಕ ಕಳೆದುಕೊಂಡರು. ಅಂತಿಮವಾಗಿ ಕಂಚಿನ ಪದಕ ಗೆದ್ದರು. ಈ ಮೂಲಕ ಸುದೀರ್ಘ‌ ಆ್ಯತ್ಲೆಟಿಕ್ಸ್‌ ಬದುಕಿಗೆ ವಿದಾಯ ಹೇಳಿದರು.

ಟ್ರಾÂಕ್‌ ಇವೆಂಟ್‌ಗಳ ವೈಯಕ್ತಿಕ 100 ಮೀ. ವಿಭಾಗದಲ್ಲಿ ಇನ್ನು ಮುಂದೆ ಬೋಲ್ಟ್ ಕಾಣಿಸುವುದಿಲ್ಲ. ಅದೇನಿದ್ದರೂ ಇನ್ನು ನೆನೆಪು ಮಾತ್ರ. ಒಂದು ವರ್ಷದ ಹಿಂದೆಯೆ ವಿಶ್ವ ಆ್ಯತ್ಲೆ ಟಿಕ್ಸ್‌ ಬಳಿಕ  ನಿವೃತ್ತಿ ಘೋಷಿಸುವುದಾಗಿ ಬೋಲ್ಟ್ ತಿಳಿಸಿದ್ದರು. ಅದರಂತೆ ನಿವೃತ್ತಿ ಪ್ರಕಟಿಸಿ ಆಗಿದೆ. ಸದ್ಯ ಇದು ಅಭಿಮಾನಿಗಳಿಗೆ ಬೋಲ್ಟ್ ಇಲ್ಲದ ಆ್ಯತ್ಲೆಟಿಕ್ಸ್‌ ಟ್ರ್ಯಾಕ್‌ ಅನ್ನು ಜೀರ್ಣಿಸಿಕೊಳ್ಳಲು ಸಾಧ್ಯವಾಗುತ್ತಿಲ್ಲ ಎನ್ನುವುದು ಅಷ್ಟೇ ಸತ್ಯ.

Advertisement

ಸೋಲಲ್ಲೂ ಮುಗುಳು ನಗು
ಶನಿವಾರ ಲಂಡನ್‌ನಲ್ಲಿ ಬೋಲ್ಟ್ ಭಾವ ನಾತ್ಮಕ ಸಂಕಟಕ್ಕೆ ಒಳಗಾಗಿದ್ದರು. ಚಿನ್ನದ ಪದಕ ಗೆಲ್ಲಲು ಇವರಿಗೆ ಸಾಧ್ಯವಾಗಿಲ್ಲ. ಫೈನಲ್‌ನಲ್ಲಿ ಬೋಲ್ಟ್ ಮೇಲೆ ನಿರೀಕ್ಷೆ ಇತ್ತು. ಅಂತಿಮ ಸುತ್ತಿನ ರೇಸ್‌ನಲ್ಲಿ ಅಚ್ಚರಿ ಎನ್ನುವಂತೆ 9.92 ಸೆಕೆಂಡ್ಸ್‌ಗಳಲ್ಲಿ ಗುರಿ ತಲುಪಿದ ಅಮೆರಿಕದ ಖ್ಯಾತ ಓಟಗಾರ ಜಸ್ಟೀನ್‌ ಗ್ಯಾಟಿÉನ್‌ ಚಿನ್ನದ ಪದಕ ಪಡೆದರು. ಇವರಿಗಿಂತ 0.02 ಸೆಕೆಂಡ್ಸ್‌ ಹಿಂದೆ ಗುರಿ ತಲುಪಿದ ಅಮೆರಿಕ ಕ್ರಿಸ್ಟಿಯಾನ್‌ ಕೊಲ್ಮನ್‌ ಬೆಳ್ಳಿ ಪದಕ ಪಡೆದರು. 0.01 ಸೆಕೆಂಡ್ಸ್‌ ಹಿಂದೆ ತಲುಪಿದ ಬೋಲ್ಟ್ ಕಂಚಿನ ಪದಕ ಗೆದ್ದರು. 

ಸೋಲಿನಲ್ಲೂ ಬೋಲ್ಟ್ಗೆ ಬೇಸರವಿರಲಿಲ್ಲ. ರೇಸ್‌ನ ಬಳಿಕ ಅವರು ವಿಜೇತ ಗ್ಯಾಟಿನ್‌ ಅವರನ್ನು ಅಪ್ಪಿ ಹಿಡಿದರು. ಅನಂತರ ಅಭಿಮಾನಿಗಳತ್ತ ಕೈ ಬೀಸಿದರು. ಈ ವೇಳೆ ಕಣ್ಣೀರಿನೊಂದಿಗೆ ಅಭಿಮಾನಿಗಳು ವಿಶ್ವ ವಿಖ್ಯಾತ ಓಟಗಾರನಿಗೆ ಶುಭ ವಿದಾಯ ಕೋರಿದರು. ಜಸ್ಟೀನ್‌ ಗೆದ್ದಿದ್ದು ಇಲ್ಲಿ ಸುದ್ದಿಯ ಆಗಲಿಲ್ಲ. ಇಡೀ ಕ್ರೀಡಾಂಗಣವೇ ಬೋಲ್ಟ್ …. ಬೋಲ್ಟ್… ಎಂದು ಕೂಗಿ ಕರೆಯುತ್ತಿತ್ತು.

ಫ‌ುಟ್‌ಬಾಲ್‌ನತ್ತ ಮುಂದಿನ ಹೆಜ್ಜೆ
ಬೋಲ್ಟ್ ಟ್ರ್ಯಾಕ್‌ ಇವೆಂಟ್‌ಗಳಲ್ಲಿ ಪದಕ  ಗೆದ್ದಿರಬಹುದು. ಆದರೆ ಅವರೊಬ್ಬ ಬಹುಮುಖ ಪ್ರತಿಭೆ. ಟ್ರ್ಯಾಕ್‌ ಇವೆಂಟ್‌ಗೆ ವಿದಾಯ ಹೇಳಿದ ಬಳಿಕ ಅವರು ಏನು ಮಾಡಬಹುದು? ಮುಂದಿನ ಅವರ ಬದುಕು ಹೇಗಿರಲಿದೆ ಎನ್ನುವುದು ಕುತೂಹಲದ ಪ್ರಶ್ನೆ. ಇದಕ್ಕೆ ಬೋಲ್ಟ್ 2011ರಲ್ಲೇ ಉತ್ತರ ಕೊಟ್ಟಿದ್ದಾರೆ. ಲಂಡನ್‌ನಲ್ಲಿ ಯುಇಎಫ್ಎ ಚಾಂಪಿಯನ್ಸ್‌ ಕೂಟಕ್ಕೆ ಮ್ಯಾಂಚೆಸ್ಟರ್‌ ಯುನೈಟೆಡ್‌ ತಂಡದ ಮುಖ್ಯ ಅತಿಥಿಯಾಗಿ ಬೋಲ್ಟ್ ಹೋಗಿದ್ದರು.  ಈ ವೇಳೆ ಅವರು ನಿವೃತ್ತಿ ಬಳಿಕ ಸಕ್ರಿಯ ಫ‌ುಟ್‌ಬಾಲ್‌ ಆಟಗಾರನಾಗುವುದಾಗಿ ಪ್ರಕಟಿಸಿದ್ದರು.

ಕ್ರಿಕೆಟಿಗನಾಗುವ ಕನಸಿತ್ತು…
ಬೋಲ್ಟ್ ಅವರೊಳಗೊಬ್ಬ ಕ್ರಿಕೆಟಿಗ, ಬಾಸ್ಕೆಟ್‌ಬಾಲ್‌, ಫ‌ುಟ್‌ಬಾಲ್‌ ಆಟಗಾರನಿದ್ದ. ಅವರು ಶಾಲಾ ದಿನಗಳಿಂದಲೂ ಕ್ರಿಕೆಟ್‌ ಆಟಗಾರ ನಾಗಬೇಕು ಎನ್ನುವ ಕನಸು ಕಂಡಿದ್ದರು. ಅದಕ್ಕೆ ತಕ್ಕಂತೆ ಬೋಲ್ಟ್ ಒಬ್ಬ ಅದ್ಭುತ ವೇಗದ ಬೌಲರ್‌ ಎನ್ನುವುದನ್ನು ಅಂದೇ ಸಾಬೀತುಪಡಿಸಿದ್ದರು. ಆದರೆ ಬೋಲ್ಟ್ ವೇಗವಾಗಿ ಓಡಿ ಬೌಲಿಂಗ್‌ ನಡೆಸುತ್ತಿದ್ದುದನ್ನು ನೋಡುತ್ತಿದ್ದ ಶಾಲಾ ಕೋಚ್‌ ಇವರಲ್ಲಿ ಒಬ್ಬ ಓಟಗಾರನನ್ನು ಗುರುತಿಸಿದ್ದರು. ನೀನು ಕ್ರಿಕೆಟ್‌ ಬಿಟ್ಟು ಆ್ಯತ್ಲೆಟಿಕ್ಸ್‌ಗೆ ಹೋಗು ಎಂದು ಸಲಹೆ ನೀಡಿದ್ದರು. ಅಂದು ಟ್ರ್ಯಾಕ್‌ಗೆ ಇಳಿದ ಬೋಲ್ಟ್ ತಿರುಗಿ ನೋಡಿದ್ದೇ ಇಲ್ಲ.

ಸತತ 2 ವರ್ಷ ವಿಶ್ವ 
ಕ್ರೀಡಾ ಸಾಧಕ ಪ್ರಶಸ್ತಿ

ವಿಶ್ವ ಕ್ರೀಡಾಕೂಟದಲ್ಲಿ ಮಾಡಿದ ಸರ್ವಶ್ರೇಷ್ಠ ಸಾಧನೆಗಾಗಿ ಲಾರೆಸ್‌ ವಿಶ್ವ ಕ್ರೀಡಾ ಸಾಧಕ ಪ್ರಶಸ್ತಿಯನ್ನು ಸತತ 2 ವರ್ಷ ಪಡೆದರು. ಮೊದಲು ಸಿಕ್ಕಿದ್ದು 2009ರಲ್ಲಿ. ಅನಂತರ 2010ರಲ್ಲಿ ಎನ್ನುವುದು ವಿಶೇಷ.

ಬೋಲ್ಟ್ಗೆ ಬೌಲಿಂಗ್‌ ಮಾಡಿದ್ದ ಗೇಲ್‌!
ಇವರಿಬ್ಬರೂ ಜಮೈಕಾದ ಸ್ಟಾರ್. ಇಂದು ಜಮೈಕಾ ಎನ್ನುವ ಪುಟ್ಟ ರಾಷ್ಟ್ರ ಹೆಸರು ವಿಶ್ವದಾದ್ಯಂತ ಪಸರಿಸಿದೆ ಎಂದರೆ ಇವರಿಬ್ಬರ ಪಾಲು ಅತ್ಯಧಿಕವಾಗಿದೆ. 2016ರಲ್ಲಿ ಬೋಲ್ಟ್ – ಗೇಲ್‌ ಒಟ್ಟಿಗೆ ಕ್ರಿಕೆಟ್‌ ಪಂದ್ಯದಲ್ಲಿ ಮುಖಾಮುಖೀಯಾಗಿದ್ದರು. ಈ ಪಂದ್ಯದಲ್ಲಿ ಗೇಲ್‌ ಎಸೆತವನ್ನು ಬೋಲ್ಟ್ ಬೌಂಡರಿಗೆ ಅಟ್ಟಿ ಸಂಭ್ರಮಿಸಿದ್ದನ್ನು ಸ್ಮರಿಸಬಹುದು. ಉಸೇನ್‌ ಬೋಲ್ಟ್ ಜಗತ್ತಿನಲ್ಲಿ ಅತೀ ಹೆಚ್ಚು  ಇಷ್ಟ ಪಡುವ ಕ್ರಿಕೆಟ್‌ ತಂಡವೆಂದರೆ ಅದು  ಪಾಕಿಸ್ಥಾನ! ಹೌದು, ಬಾಲ್ಯದಲ್ಲಿ ಇವರು ಪಾಕ್‌ ಆಡುತ್ತಿದ್ದ ಪಂದ್ಯವನ್ನು ತಪ್ಪದೆ ವೀಕ್ಷಿಸುತ್ತಿದ್ದರಂತೆ. 

 ಚೀತಾ ದತ್ತು ಪಡೆದ 
ಜಮೈಕಾ ಚೀತಾ

ಉಸೇನ್‌ ಬೋಲ್ಟ್ ಚೀತಾ ದಂತೆ ಓಡುತ್ತಾರೆ. ಸ್ವತಃ ವಿಜ್ಞಾನಿ ಗಳ ಸಂಶೋಧನೆ ಪ್ರಕಾರ ಅವರು ಚೀತಾದಷ್ಟು ವೇಗದಲ್ಲಿ ಓಡಬಲ್ಲರು. ಬೋಲ್ಟ್ ಇದೇ ಸವಿ ನೆನಪಿಗಾಗಿ ಕೀನ್ಯಾದಲ್ಲಿ 2009ರಲ್ಲಿ ಚೀತಾವೊಂದನ್ನು ದತ್ತು ಪಡೆದಿದ್ದಾರೆ. ಅದಕ್ಕೆ ಲೈಟ್‌ನಿಂಗ್‌ ಬೋಲ್ಟ್ ಎಂದು ಹೆಸರಿಟ್ಟಿದ್ದಾರೆ. ಈಗ ಆ ಚೀತಾಗೆ ಎಂಟು ವರ್ಷ.

ಬಾಲ್ಯದಲ್ಲೇ ಕಾಡಿತ್ತು 
ಬೆನ್ನು ಹುರಿ ನೋವು !

ವಿಶ್ವ ಆ್ಯತ್ಲೆಟಿಕ್ಸ್‌ ದೊರೆಯಾಗಿ ಬೋಲ್ಟ್ ಈಗ ಮಿಂಚಿರಬಹುದು. ಸಾಕಷ್ಟು  ಸಾಧನೆ ಮಾಡಿರಬಹುದು. ಆದರೆ ಬೋಲ್ಟ್ ನೋವುಗಳನ್ನೆ ನುಂಗಿ ಗೆದ್ದವರು ಎನ್ನುವುದು ಎಷ್ಟೋ ಜನರಿಗೆ ಗೊತ್ತೇ ಇಲ್ಲ. ಉಸೇನ್‌ ಬೋಲ್ಟ್ ಬಾಲ್ಯದಲ್ಲಿ ಸ್ಕೋಲಿಯೊಸಿಸ್‌ (ಬೆನ್ನುಹುರಿ ನೋವಿಗೆ) ಎನ್ನುವ ಭಯಾನಕ  ಬೆನ್ನು ನೋವಿಗೆ ಒಳಗಾಗಿದ್ದರು. ಇವರ ಬೆನ್ನು ಮೂಳೆ ಒಂದು ರೀತಿಯಲ್ಲಿ “ಎಸ್‌’ ಆಕೃತಿಯಲ್ಲಿ ಬೆಂಡಾಗು ತ್ತಿದ್ದವು. ಭಯಾನಕ ನೋವು ಇವರನ್ನು ಕಾಡುತ್ತಿತ್ತು. ಆದರೆ ಇದರಿಂದ ಬೋಲ್ಟ್ ಚೇತರಿಸಿದರು. 

15ರ ವಯಸ್ಸಿಗೇ  ವಿಶ್ವ ದಾಖಲೆ
ಉಸೇನ್‌ ಬೋಲ್ಟ್ 2002ರಲ್ಲಿ ಜಮೈಕಾದ ಕಿಂಗ್‌ಸ್ಟನ್‌ ನಲ್ಲಿ ನಡೆದ ವಿಶ್ವ ಕಿರಿಯರ ಕೂಟದಲ್ಲಿ 200  ಮೀ.ನಲ್ಲಿ ಚಿನ್ನದ ಪದಕ ಗೆದ್ದರು. ಈ ಮೂಲಕ ಅತೀ ಕಿರಿಯ ವಯಸ್ಸಿನಲ್ಲೇ ಈ ಸಾಧನೆ ಮಾಡಿದರು.

Advertisement

Udayavani is now on Telegram. Click here to join our channel and stay updated with the latest news.

Next