Advertisement

ಅಭಿವೃದ್ಧಿಗೆ ಸಿಎಸ್‌ಆರ್‌ ನಿಧಿ ಬಳಕೆ

01:44 PM Jun 16, 2019 | Suhan S |

ರಾಮನಗರ: ಟೊಯೋಟಾ ಕಿರ್ಲೋಸ್ಕರ್‌ ಮೋಟಾರ್‌ ಕಂಪನಿ ಮತ್ತು ಬಾಷ್‌ ಇಂಡಿಯಾ ಕಂಪೆನಿಯ ಅಧಿಕಾರಿಗಳು ಸಮುದಾಯದ ಬೇಡಿಕೆಗಳಿಗೆ ಅನುಸಾರವಾಗಿ ಸಿಎಸ್‌ಆರ್‌ ನಿಧಿಯನ್ನು ಬಳಕೆ ಮಾಡುವ ಮೂಲಕ ಬಿಡದಿ ಭಾಗದ ಅಭಿವೃದ್ಧಿಗೆ ಕಾರಣವಾಗುತ್ತಿವೆ ಎಂದು ಮಾಗಡಿ ಶಾಸಕ ಎ.ಮಂಜುನಾಥ್‌ ಶ್ಲಾಘಿಸಿದರು.

Advertisement

ತಾಲೂಕಿನ ಬಿಡದಿ ಹೋಬಳಿ ಹೆಜ್ಜಾಲದ ಎಸ್‌ವಿಟಿ ಕಾಲೋನಿಯಲ್ಲಿ ರೆಕ್ಸ್‌ರಾಥ್‌, ಬಾಷ್‌ ಸಮೂಹ ಕಂಪನಿ ಹಾಗೂ ಮೈವಿಂಗ್‌ ಎಂಜಿನಿಯರಿಂಗ್‌ ಟೆಕ್ನಾಲಜೀಸ್‌ ಪ್ರೈ.ಲಿ ಸಹಯೋಗದಲ್ಲಿ ಸುಮಾರು 10 ಲಕ್ಷ ರೂ. ವೆಚ್ಚದಲ್ಲಿ ನಿರ್ಮಿಸಿರುವ ಶುದ್ಧ ನೀರಿನ ಘಟಕವನ್ನು ಉದ್ಘಾಟಿಸಿದ ಅವರು ಮಾತನಾಡಿ, ಸರ್ಕಾರಿ ಶಾಲೆಗಳ ಕಟ್ಟಡ ನಿರ್ಮಾಣ ಮತ್ತು ನವೀಕರಣ, ಸರ್ಕಾರಿ ಆಸ್ಪತ್ರೆ ಕಟ್ಟಡಗಳ ನಿರ್ಮಾಣ, ಕೆರೆಗಳ ಪುನಶ್ಚೇತನ, ಶುದ್ಧ ನೀರಿನ ಘಟಗಳ ಸ್ಥಾಪನೆ, ಶೌಚಾಲಯಗಳ ನಿರ್ಮಾಣ, ಉದ್ಯಾನವನಗಳ ಅಭಿವೃದ್ಧಿ ಹೀಗೆ ಹತ್ತಾರು ಕಾರ್ಯಕ್ರಮಗಳನ್ನು ಹಾಕಿಕೊಂಡು ಸಮಾಜಕ್ಕೆ ಕೊಡುಗೆ ನೀಡುತ್ತಿವೆ ಎಂದರು.

ಮನೆಗಳ ನಿರ್ಮಾಣಕ್ಕೆ ಸರ್ಕಾರ ಅನುಮತಿ: ಹೆಜ್ಜಾಲ ಗ್ರಾಮದ ಸಮೀಪ ಆಶ್ರಯ ಯೋಜನೆಯಡಿ 6 ಎಕರೆ ಜಾಗದಲ್ಲಿ ಜಿ ಪ್ಲಸ್‌ 3 ಮಾದರಿ ಮನೆಗಳ ನಿರ್ಮಾಣಕ್ಕೆ ರಾಜ್ಯ ಸರ್ಕಾರದಿಂದ ಅನುಮೋದನೆ ದೊರೆತಿದೆ. ನಿವೇಶನಗಳಿಗೆ ಬದಲಿಗೆ ಮನೆಗಳನ್ನೇ ನಿರ್ಮಿಸಿ ಕೊಟ್ಟು ಬಹುತೇಕರ ವಾಸ್ತವ್ಯಕ್ಕೆ ಅನುವು ಮಾಡಿಕೊಡುವುದು ಸರ್ಕಾರದ ಉದ್ದೇಶ. ಹೀಗಾಗಿ ಸದರಿ ಸ್ಥಳದಲ್ಲಿ ಜಿ ಪ್ಲಸ್‌ 3 ಮಾದರಿಯ ಮನೆಗಳನ್ನು ನಿರ್ಮಿಸಿ ವಿತರಣೆ ಮಾಡಲು ಸಿಎಂ ಅನಮೋದನೆ ನೀಡಿದ್ದಾರೆ. ಶೀಘ್ರವೇ ಯೋಜನೆಗೆ ಅನುದಾನವನ್ನು ಬಿಡುಗಡೆ ಮಾಡುವ ವಿಶ್ವಾಸವಿದೆ ಎಂದರು.

ಜಿಪಂ ಸದಸ್ಯ ಎಂ.ಎನ್‌.ಮಂಜುನಾಥ, ಶೇಷಗಿರಿಹಳ್ಳಿ ಕೆರೆಯನ್ನು ಅಭಿವೃದ್ಧಿಗೆ ಶಾಸಕರಲ್ಲಿ ಮನವಿ ಮಾಡಿದರು. ಇದಕ್ಕೆ ಪ್ರತಿಕ್ರಿಯಿಸಿದ ಶಾಸಕರು, ರಾಷ್ಟ್ರೀಯ ಹೆದ್ದಾರಿ ಹಾದು ಹೋಗುವ ರಸ್ತೆಯ ಇಕ್ಕಲೆಗಳಲಿರುವ ಕರೆಗೆಗಳನ್ನು ಸಹ ಪುನಶ್ವಚೇತನಗೊಳಿಸಿ, ಅಭಿವೃದ್ಧಿಪಡಿಸುವಂತೆ ಪ್ರಾಧಿಕಾರಿಕ್ಕೆ ತಿಳಿಸಲಾಗಿದೆ ಎಂದರು.

ತಾಪಂ ಅಧ್ಯಕ್ಷ ನಟರಾಜ್‌ ಗಾಣಕಲ್, ಮಂಚನಾಯ್ಕನಹಳ್ಳಿ ಗ್ರಾಪಂ ಅಧ್ಯಕ್ಷೆ ನಂದಪ್ರಭ ಆನಂದ್‌, ಬಾಷ್‌ ಇಂಡಿಯಾ ರೆಕ್ಸ್‌ರಾಥ್‌ ಕಂಪೆನಿಯ ವ್ಯವಸ್ಥಾಪಕ ನಿರ್ದೇಶಕ ಶಾಮ್‌ ಪ್ರಸಾದ್‌, ಬಾಷ್‌ ಇಂಡಿಯಾ ಪ್ರತಿಷ್ಠಾನದ ಆಡಳಿತ ಅಧಿಕಾರಿ ಪುಂಡರೀಕ ಕಾಮತ್‌ ಮಾತನಾಡಿದರು.

Advertisement

ವಿಧಾನ ಪರಿಷತ್‌ ಸದಸ್ಯ ಸಿ.ಎಂ.ಲಿಂಗಪ್ಪ, ಮಂಚನಾಯ್ಕನಹಳ್ಳಿ ಗ್ರಾಮ ಪಂಚಾಯ್ತಿ ಉಪಾಧ್ಯಕ್ಷ ವೆಂಕಟರಮಣ, ತಾಪಂ ಸದಸ್ಯೆ ನೀಲಾ ಮಂಜುನಾಥ್‌, ಕೆಪಿಸಿಸಿ ಸದಸ್ಯ ಚಿಕ್ಕಬ್ಯಾಟಪ್ಪ, ಗ್ರಾಪಂ ಸದಸ್ಯರಾದ ಎಸ್‌ಆರ್‌ಎಸ್‌ ರಾಜಣ್ಣ, ರಂಗಸ್ವಾಮಿ ಸೇರಿದಂತೆ ಗ್ರಾಮ ಪಂಚಾಯ್ತಿ ಸದಸ್ಯರು ಅಧಿಕಾರಿಗಳು ಹಾಗೂ ಪ್ರಮುಖರು ಭಾಗವಹಿಸಿದ್ದರು. ಗ್ರಾಮ ಪಂಚಾಯ್ತಿ ಸದಸ್ಯ ಎಚ್.ಎಸ್‌.ಯೋಗಾನಂದ ನಿರೂಪಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next