Advertisement
ಈ ಮೂವರು ಕೆಲ ತಿಂಗಳುಗಳಹಿಂದೆ ಆಂಧ್ರಪ್ರದೇಶದ ಏಜೆಂಟ್ ಓರ್ವನ ಮೂಲಕ ಕಾಂಬೋ ಡಿಯಾಕ್ಕೆ ತೆರಳಿದ್ದರು. ಅಲ್ಲಿ ಐಟಿ ಕಂಪೆನಿಯ ಉದ್ಯೋಗದ ನೆಪದಲ್ಲಿ ಅವರನ್ನು ಸೈಬರ್ ವಂಚಕರ ಬಳಿ ಉದ್ಯೋಗಕ್ಕೆ ನಿಯೋಜಿಸಲಾಗಿತ್ತು. ಅಲ್ಲಿ ಅವರಿಂದ ಫೇಸ್‌ಬುಕ್, ವಾಟ್ಸಾಪ್, ಇನ್‌ಸ್ಟಾಗ್ರಾಂಗಳಲ್ಲಿ ಹುಡುಗಿಯ ಹೆಸರಿನಲ್ಲಿ ನಕಲಿ ಪ್ರೊಫೈಲ್ ಸೃಷ್ಟಿಸುವುದು, ಷೇರು ಮಾರುಕಟ್ಟೆ, ಕ್ರಿಪ್ಟೋದಲ್ಲಿ ಹೂಡಿಕೆ ನೆಪದಲ್ಲಿ ಭಾರತೀಯರಿಗೆ ಕರೆ ಮಾಡಿ ವಂಚಿಸುವ ಕೆಲಸಗಳನ್ನು ಮಾಡಿಸಲಾಗುತ್ತಿತ್ತು.
ಕಾಂಬೋಡಿಯಾ, ಮಲೇಶ್ಯಾ ಮೊದಲಾದೆಡೆ ಇರುವ ವಂಚಕರು ಭಾರತದ ಯುವಕರನ್ನು ಕರೆಸಿಕೊಂಡು ಅವರನ್ನು ಸೈಬರ್ ವಂಚನೆಗೆ ಬಳಸಿಕೊಳ್ಳುತ್ತಾರೆ. ಯಾವ ರೀತಿಯ ಕೆಲಸದಲ್ಲಿ ಹೆಚ್ಚು ಚುರುಕಾಗಿದ್ದಾರೆ ಎಂಬುದನ್ನು ಗುರುತಿಸಿ ಅದೇ ರೀತಿಯ ಹೊಣೆಗಾರಿಕೆ ನೀಡುತ್ತಾರೆ. ಯಾವ ರಾಜ್ಯದ ಭಾಷೆ ತಿಳಿದಿದೆಯೋ ಅದೇ ರಾಜ್ಯದ ಜನರನ್ನು ವಂಚಿಸಲು ಅವರನ್ನು ಬಳಸಲಾಗುತ್ತದೆ. ಇದೇ ರೀತಿ ಕರ್ನಾಟಕದಿಂದ 5 ಮಂದಿ ಯುವಕರು ವಂಚನೆಯ ಜಾಲದಲ್ಲಿ ಸಿಲುಕಿದ್ದು, ಈಗ ರಕ್ಷಿಸಲಾಗಿದೆ.
Related Articles
ಅಧಿಕಾರಿಯೋರ್ವರು ವಾಟ್ಸಾಪ್‌ನಲ್ಲಿ ಬಂದಿದ್ದ ಸಂದೇಶವನ್ನು ನಂಬಿ ಹೂಡಿಕೆ ಮಾಡಿ 67 ಲ.ರೂ. ಕಳೆದುಕೊಂಡಿದ್ದರು. ಆ ಬಗ್ಗೆ ಒಡಿಶಾದಲ್ಲಿ ಪ್ರಕರಣ ದಾಖಲಾಗಿತ್ತು. ಸೈಬರ್ ಪೊಲೀಸರು ಈ ವಂಚನಾ ಜಾಲದ ಬೆನ್ನು ಹತ್ತಿದಾಗ ಕಾಂಬೋಡಿಯಾದ ವಂಚಕರ ನಂಟು ಬಯಲಿಗೆ ಬಂದಿತು. ತನಿಖೆ ಮುಂದುವರಿಸಿದಾಗ ಇಡೀ ಜಾಲದ ವಿವರ ತಿಳಿಯಿತು. ಈ ಮಾಹಿತಿಯನ್ನು ಪೊಲೀಸರು ಭಾರತೀಯ ವಿದೇಶಾಂಗ ಇಲಾಖೆ ಜತೆ ಹಂಚಿಕೊಂಡರು. ಅಧಿಕಾರಿಗಳು ಕಾರ್ಯಾಚರಣೆ ನಡೆಸಿ ಒಟ್ಟು 250 ಮಂದಿಯನ್ನು ರಕ್ಷಿಸಿದ್ದಾರೆ.
Advertisement