Advertisement

USA: ಟ್ರಿಪ್‌ಗಳನ್ನು ಕ್ಯಾನ್ಸಲ್‌ ಮಾಡಿ 23 ಲಕ್ಷ ರೂ. ಗಳಿಸಿದ ಊಬರ್‌ ಚಾಲಕ!

09:46 PM Nov 06, 2023 | Team Udayavani |

ವಾಷಿಂಗ್ಟನ್‌: ಅಮೆರಿಕದ ಉತ್ತರ ಕೊರೊಲಿನಾದಲ್ಲಿ 70 ವರ್ಷದ ಊಬರ್‌ ಚಾಲಕನೊಬ್ಬ ತನಗೆ ಬರುವ ಟ್ರಿಪ್‌ಗ್ಳನ್ನು ಕ್ಯಾನ್ಸಲ್‌ ಮಾಡಿಕೊಂಡು ವರ್ಷದಲ್ಲಿ 23.3 ಲಕ್ಷ ರೂ. (28,000 ಡಾಲರ್‌) ಗಳಿಸಿದ್ದಾನೆ.

Advertisement

2022ರಲ್ಲಿ ಶೇ.30ಕ್ಕೂ ಹೆಚ್ಚಿನ ಟ್ರಿಪ್‌ಗ್ಳನ್ನು ಆತ ಕ್ಯಾನ್ಸಲ್‌ ಮಾಡಿದ್ದಾನೆ. ಸುಮಾರು 1,500 ಟ್ರಿಪ್‌ಗ್ಳಿಗೆ ಮಾತ್ರ ಆತ ಚಾಲನೆ ಮಾಡಿದ್ದಾನೆ ಎಂದು ವರದಿ ತಿಳಿಸಿದೆ. ಆರು ವರ್ಷಗಳ ಹಿಂದೆ ಆತ ಉದ್ಯೋಗದಿಂದ ನಿವೃತ್ತಿಯಾದ. ನಂತರ ಆದಾಯ ಗಳಿಸಲು ಅರೆಕಾಲಿಕವಾಗಿ ಊಬರ್‌ ಚಾಲಕನಾಗಿ ಕೆಲಸ ಮಾಡಲು ಆರಂಭಿಸಿದ.

“ಈ ಹಿಂದೆ ವಾರಕ್ಕೆ 40 ಗಂಟೆಗಳು ಕಾರು ಚಾಲನೆ ಮಾಡುತ್ತಿದ್ದೆ. ಆದರೆ ಈಗ ವಾರಕ್ಕೆ 30 ಗಂಟೆ ಮಾತ್ರ ಚಾಲನೆ ಮಾಡುತ್ತೇನೆ. ಟ್ರಿಪ್‌ ಬುಕ್‌ ಮಾಡುವ ಅನೇಕರಿಗೆ “ನಾನು ಬರುವುದಿಲ್ಲ’ ಎಂದು ಹೇಳುತ್ತೇನೆ. ಕೊರೊನಾ ಸಂದರ್ಭದಲ್ಲಿ ಗಂಟೆಗೆ 50 ಡಾಲರ್‌ ಸಂಪಾದಿಸುತ್ತಿದ್ದೆ. ಆದರೆ ಈಗ ಚಾಲಕರ ಸಂಖ್ಯೆ ಅಧಿಕವಾಗಿರುವ ಕಾರಣ ಗಂಟೆಗೆ 15ರಿಂದ 20 ಡಾಲರ್‌ ಗಳಿಸುತ್ತೇನೆ’ ಎಂದು ಆತ ಹೇಳಿದ್ದಾನೆ.

 

Advertisement

Udayavani is now on Telegram. Click here to join our channel and stay updated with the latest news.

Next