Advertisement

USA; ನಿಕ್ಕಿ ‘ಲಿಪ್‌ಸ್ಟಿಕ್‌ ಹಾಕಿರುವ ಫ್ಯಾಸಿಸ್ಟ್‌’!:ವಿವೇಕ್‌ ರಾಮಸ್ವಾಮಿ ಆರೋಪ

12:34 AM Dec 08, 2023 | Vishnudas Patil |

ವಾಷಿಂಗ್ಟನ್‌: ಅಮೆರಿಕ ಅಧ್ಯಕ್ಷೀಯ ಆಕಾಂಕ್ಷಿಗಳಾಗಿರುವ ಭಾರತ ಮೂಲದ ವಿವೇಕ್‌ ರಾಮಸ್ವಾಮಿ ಹಾಗೂ ನಿಕ್ಕಿ ಹ್ಯಾಲೆ ನಡುವೆ ಮಾತಿನ ಚಕಮಕಿ ಭುಗಿಲೆದ್ದಿದ್ದು, ರಿಪಬ್ಲಿಕನ್‌ ಪಕ್ಷದ ಚರ್ಚೆಯಲ್ಲಿ ಪರಸ್ಪರ ಕೆಸರೆರಚಾಟ ನಡೆಸಿದ್ದಾರೆ. ನಿಕ್ಕಿ ಹ್ಯಾಲೆ ಓರ್ವ ಭ್ರಷ್ಟಾಚಾರಿ ಮತ್ತು ಲಿಪ್‌ ಸ್ಟಿಕ್‌ ಹಾಕಿರುವ ಫ್ಯಾಸಿಸ್ಟ್‌ ಎಂದು ರಾಮಸ್ವಾಮಿ ಆರೋಪಿಸಿದ್ದಾರೆ. ಅಲ್ಲದೇ 3 ಇಂಚಿನ ಹೀಲ್ಡ್‌ ತೊಟ್ಟಿರುವ ಆಕೆ ಡಿಕ್‌ಚೆನ್ನಿ (ಅಮೆರಿಕದ ಮಾಜಿ ಉಪಾಧ್ಯಕ್ಷ) ಇದ್ದಂತೆ ಎಂದು ಅಣಕಿಸಿದ್ದಾರೆ. ಜತೆಗೆ ಹ್ಯಾಲೆಗೆ ಭ್ರಷ್ಟಾಚಾರದ ಸಮಸ್ಯೆ ಇದೆ ಎಂದು ಹೇಳಿದ್ದಾರೆ. ಹ್ಯಾಲೆ ಕೂಡ ವಿವೇಕ್‌ ಹೇಳಿಕಗಳು ಬರೀ ಹೊಟ್ಟೆಕಿಚ್ಚಿನವು ಎಂದು ಚಾಟಿ ಬೀಸಿದ್ದಾರೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next