Advertisement

USA; ಧರ್ಮಾಂಧತೆಯಲ್ಲಿ 7ರ ಬಾಲಕನ 26 ಬಾರಿ ಇರಿದು ಕೊಂದ!

11:25 PM Oct 16, 2023 | Team Udayavani |

ವಾಷಿಂಗ್ಟನ್‌: ಧರ್ಮದ ಮೇಲಿನ ಕಿಚ್ಚಿಗೆ 7 ವರ್ಷದ ಮುಸ್ಲಿಂ ಬಾಲಕನೊಬ್ಬನನ್ನು ಚೂರಿಯಿಂದ ಇರಿದು ಕೊಂದಿರುವ ಅಮಾನವೀಯ ಘಟನೆ ಅಮೆರಿಕದ ಷಿಕಾಗೋದಲ್ಲಿ ನಡೆದಿದೆ. ಮುಸ್ಲಿಂ ಕುಟುಂಬವೊಂದು ವಾಸವಿದ್ದ ಅಪಾರ್ಟ್‌ಮೆಂಟ್‌ಗೆ ಅದರ ಮಾಲಕ (71) ಏಕಾಏಕಿ ಲಗ್ಗೆ ಇಟ್ಟಿದ್ದಾನೆ. ಕೈನಲ್ಲಿ ಮಿಲಿಟರಿ ಬಳಕೆಯ ಚಾಕು ಹಿಡಿದು, ನೀವು ಮುಸ್ಲಿಮರು ಸಾಯಬೇಕು ಎಂದು ಚೀರುತ್ತಾ ದಾಳಿಗೆ ಮುಂದಾಗಿದ್ದಾನೆ.

Advertisement

ಮೊದಲಿಗೆ ಮನೆಯಲ್ಲಿದ್ದ ಮಹಿಳೆಯ ಮೇಲೆ ದಾಳಿ ನಡೆಸಿದ್ದು, ಆಕೆ ತೀವ್ರವಾಗಿ ಗಾಯಗೊಂಡಿದ್ದಾರೆ. ಬಳಿಕ ತಪ್ಪಿಸಿಕೊಂಡು ಪೊಲೀಸರಿಗೆ ಕರೆ ಮಾಡಲು ಶೌಚಾಲಯಕ್ಕೆ ಓಡಿದ್ದಾರೆ. ಈ ವೇಳೆ ಆಕೆಯ 7 ವರ್ಷದ ಮಗ ವಾಡಿಯಾ ಅಲ್‌ಫ‌ಯೂಮ್‌ನನ್ನು ಮಾಲಕ ಚೂರಿಯಿಂದ 26 ಬಾರಿ ಇರಿದು ಕೊಂದಿದ್ದಾನೆ. ಆರೋಪಿಯನ್ನು ಬಂಧಿಸಲಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next