ವಾಷಿಂಗ್ಟನ್ : ದಿನ ಬೆಳಗಾದರೆ ಟ್ರೆಂಡಿಂಗ್ ಸುದ್ದಿಗಳದ್ದೇ ಭರಾಟೆ… ಅಲ್ಲಿ ಅದು, ಇಲ್ಲಿ ಇದು ಅಂತ ಒಂದಲ್ಲ ಒಂದು ವಿಶೇಷವಾದ ಸುದ್ದಿ ಸಿಕ್ಕೇ ಸಿಗುತ್ತೆ, ಜನರು ಸಾಮಾಜಿಕ ಜಾಲತಾಣದಲ್ಲಿ ಹುಡುಕುವ ವಿಷಯ ಕೂಡಾ ಅಂತದ್ದೇ ಆಗಿರುತ್ತೆ, ಈಗಿನ ಯುವ ಜನಾಂಗ ಕೂಡಾ ತಾನು ಇತರರಿಗಿಂತ ಭಿನ್ನವಾಗಿ ಕಾಣಿಸಲು ಬಯಸುತ್ತಾರೆ. ಅದಕ್ಕೆ ಪೂರಕ ಎಂಬಂತೆ ಅಮೇರಿಕದ ಮಹಿಳೆಯೊಬ್ಬರು ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಮಾಡಿದ ರೆಸ್ಯೂಮ್, ಅರೆ ಇದರಲ್ಲಿ ಏನಿದೆ ವಿಶೇಷ ಎಲ್ಲರು ಹೊಸ ಕೆಲಸ ಪಡೆಯಬೇಕಾದರೆ ರೆಸ್ಯೂಮ್ ಕಳುಹಿಸುವುದು ಸಾಮಾನ್ಯ ಅದರಲ್ಲಿ ವೈರಲ್ ಆಗುವಂತ ವಿಷಯ ಏನಿದೆ.. ? ಎಂದು ನಾವು ಭಾವಿಸಬಹುದು ಆದರೆ ಈ ರೆಸ್ಯೂಮ್ ಅದೆಲ್ಲದಕ್ಕಿಂತ ಭಿನ್ನವಾಗಿದೆ ಹಾಗಾದರೆ ಹೇಗೆ ಭಿನ್ನವಾಗಿದೆ ಎಂಬುದನ್ನು ನೋಡೋಣ..
ಉತ್ತರ ಕೆರೋಲಿನಾದ ಕಾರ್ಲಿ ಪಾವ್ಲಿನಾಕ್ ಬ್ಲ್ಯಾಕ್ಬರ್ನ್ ಎಂಬ ಯುವತಿ ತಾನು ನೈಕ್ ಕಂಪೆನಿಯಲ್ಲಿ ಕೆಲಸ ಗಿಟ್ಟಿಸಿಕೊಳ್ಳಲು ಹೊಸ ಉಪಾಯವೊಂದನ್ನು ಮಾಡಿದ್ದಾಳೆ ಈ ಯುವತಿ ಮಾಡಿದ ಐಡಿಯಾ ಮಾತ್ರ ಬಾರಿ ಮೆಚ್ಚುಗೆ ಪಡೆದಿರುವಂತದ್ದು, ಅಲ್ಲದೆ ಈ ರೀತಿ ಯಾರು ಮಾಡಿರಲಿಕ್ಕೂ ಇಲ್ಲ, ಅಂದ ಹಾಗೆ ನೈಕ್ ಸಂಸ್ಥೆಯಲ್ಲಿ ಕೆಲಸ ಗಿಟ್ಟಿಸಿಕೊಳ್ಳಲು ಯುವತಿ ಕೇಕ್ ಮೇಲೆ ರೆಸ್ಯೂಮ್ ವಿವರಗಳನ್ನು ಬರೆದು ಕಂಪೆನಿಗೆ ಕಳುಹಿಸಿದ್ದಾಳೆ.
ಲಿಂಕ್ಡಿನ್ ಖಾತೆಯಲ್ಲಿ ಪೋಸ್ಟ್ ಹಾಕಿದ್ದು ಸದ್ಯ ಈಕೆ ಮಾಡಿರುವ ಪೋಸ್ಟ್ ವೈರಲ್ ಆಗಿದೆ. ಅಲ್ಲದೆ ಈ ರೀತಿಯಾಗಿ ಕಳುಹಿಸುವ ಉದ್ದೇಶವನ್ನು ಆಕೆ ವಿವರಿಸಿದ್ದಾಳೆ.
ಕಾರ್ಲಿ ಅವರ ಗೆಳೆಯ ನೈಕ್ ಕಂಪೆನಿಯಲ್ಲಿ ಕೆಲಸ ಹುಡುಕುವಂತೆ ಶಿಫಾರಸ್ಸು ಮಾಡಿದ್ದ ಅದರಂತೆ ಕಂಪೆನಿಯಲ್ಲಿ ಕೆಲಸ ಇದೆಯಾ ಎಂದು ಪರಿಶೀಲಿಸಿದಾಗ ಯಾವುದೇ ಕೆಲಸ ಇಲ್ಲದಿರುವುದು ಗೊತ್ತಾಗಿದೆ ಆದರೂ ಒಂದು ಒಮ್ಮೆ ಪ್ರಯತ್ನ ಪಡೋಣ ಎಂದು ಬೇರೆ ಬೇರೆ ರೀತಿಯಲ್ಲಿ ರೆಸ್ಯೂಮ್ ಹಾಕುವ ವಿಚಾರಗಳನ್ನು ಕಂಡುಕೊಂಡಿದ್ದಾಳೆ ಆದರೆ ಅದು ಯಾವುದು ಆಕೆಗೆ ಹಿಡಿಸಲಿಲ್ಲ ಕೆನೆಯದಾಗಿ ಕೇಕ್ ಮೂಲಕ ರೆಸ್ಯೂಮ್ ಕಳುಹಿಸುವ ಹೊಸ ಮಾರ್ಗವನ್ನು ಕಂಡುಕೊಂಡಿದ್ದಾಳೆ ಇದರಿಂದಾದರೂ ಕಂಪೆನಿ ನನ್ನನ್ನು ಕೆಲಸಕ್ಕೆ ಸೇರಿಸಿಕೊಳ್ಳಬಹುದು ಎಂಬ ನಂಬಿಕೆ ಆಕೆಯದ್ದು.
ಇತ್ತ ರೆಸ್ಯೂಮ್ ಫೋಟೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದ್ದಂತೆ ಕೆಲವರು ಹೊಗಳಿದರೆ ಇನ್ನೂ ಕೆಲವರು ಗಂಭೀರವಾಗಿ ಪರಿಗಣಿಸಿದ್ದಾರೆ , ಇನ್ನು ಕೆಲವರು ತಮಾಷೆಯಾಗಿ ಬರೆದುಕೊಂಡಿದ್ದಾರೆ. ಏನೇ ಆಗಲಿ ಈಕೆಯ ಪ್ರಯತ್ನಕ್ಕೆ ನೈಕ್ ಕಂಪೆನಿ ಕೆಲಸ ಕೊಡುತ್ತದೋ ಇಲ್ಲವೋ ನೋಡಬೇಕಷ್ಟೆ.
ಇದನ್ನೂ ಓದಿ : ಇಂಗ್ಲೆಂಡ್‌ನಲ್ಲಿ ನೌಕರಿ ಹುಡುಕಿದ ಎಂಜಿನಿಯರ್‌ಗೆ 40 ಲಕ್ಷ ವಂಚನೆ