ವಾಷಿಂಗ್ಟನ್: ಅಮೆರಿಕಕ್ಕೆ ಉದ್ಯೋಗಕ್ಕೆ ಹೋಗುವವರಿಗೆ ಸಂತೋಷದ ಸುದ್ದಿಯನ್ನು ಅಲ್ಲಿನ ಸರಕಾರ ನೀಡಿದೆ.
2022ನೇ ಸಾಲಿಗೆ ಸಂಬಂಧಿಸಿದಂತೆ ಎಚ್-1ಬಿ, ಎಲ್-1, ಒ-1 ವೀಸಾಗಳಿಗೆ ಅರ್ಜಿ ಸಲ್ಲಿಸಿದವರು ಸಂದರ್ಶನ ಎದುರಿಸುವ ಅಗತ್ಯವಿಲ್ಲ. ಹೆಚ್ಚುತ್ತಿರುವ ಕೊರೊನಾ ಪ್ರಕರಣಗಳ ಹಿನ್ನೆಲೆಯಲ್ಲಿ ಈ ಕ್ರಮ ಕೈಗೊಳ್ಳಲಾಗಿದೆ ಎಂದು ಅಮೆ ರಿಕದ ವಿದೇಶಾಂಗ ಸಚಿವಾಲಯ ಪ್ರಕಟಿಸಿದೆ.
ಅಮೆರಿಕಕ್ಕೆ ತೆರಳುವವರಿಗೆ ಎಚ್-1ಬಿ, ಎಲ್-1, ಒ-1 ವೀಸಾ ಪಡೆದುಕೊಂಡವರಿಗೆ ಭಾರತ ಸೇರಿದಂತೆ ಹಲವು ದೇಶಗಳಲ್ಲಿರುವ ರಾಯ ಭಾರ ಮತ್ತು ದೂತಾವಾಸ ಕಚೇರಿಗಳಿಗೆ ಕೊನೆಯ ಹಂತದಲ್ಲಿ ಸಂದರ್ಶನಕ್ಕೆ ತೆರಳಬೇಕಾಗಿದೆ.
2022ನೇ ಸಾಲಿಗೆ ಆ ವ್ಯವಸ್ಥೆ ರದ್ದುಪಡಿಸಲಾಗಿದೆ. ಇದರಿಂದಾಗಿ ಭಾರತದಿಂದ ಮುಂದಿನ ವರ್ಷ ಅಮೆರಿಕಕ್ಕೆ ತೆರಳುವ ಮಾಹಿತಿ ತಂತ್ರಜ್ಞಾನ ಕ್ಷೇತ್ರದ ಉದ್ಯೋಗಿಗಳು, ವಿಜ್ಞಾನ- ತಂತ್ರಜ್ಞಾನ ಕ್ಷೇತ್ರದ ಉದ್ಯೋಗಿಗಳಿಗೆ, ಸಂಶೋಧಕರಿಗೆ ನೆರವಾಗಲಿದೆ ಎಂದು ವಿಶ್ಲೇಷಿಸಲಾಗುತ್ತಿದೆ.
ಇದನ್ನೂ ಓದಿ:ವರಿಷ್ಠರ ವಿರುದ್ಧ ಗೆದ್ದರೇ ರಾವತ್? ಉತ್ತರಾಖಂಡ ಪ್ರಚಾರಕ್ಕೆ ಮಾಜಿ ಸಿಎಂ ನೇತೃತ್ವ
ಕೃಷಿ ಮತ್ತು ಕೃಷಿಯೇತರ ಕೆಲಸಗಾರರಿಗೆ, ವಿದ್ಯಾರ್ಥಿಗಳ ವಿನಿಮಯ, ಕ್ರೀಡಾಪಟುಗಳಿಗೆ, ಕಲಾವಿದರಿಗೆ ಮತ್ತು ಮನೋರಂಜನ ಕ್ಷೇತ್ರದವರಿಗೆ ಇದರಿಂದ ನೆರವಾಗಲಿದೆ. ಎಚ್-1ಬಿ ವೀಸಾಕ್ಕಾಗಿ ಕಾಯುವ ಅವಧಿಯೂ ಇಳಿಕೆಯಾಗುವ ಸಾಧ್ಯತೆ ಇದೆ.