Advertisement

ಕೋವಿಡ್-19 ಆರ್ಭಟಕ್ಕೆ ಅಮೆರಿಕಾದಲ್ಲಿ 20 ಸಾವಿರ ಬಲಿ: ಇಟಲಿಯನ್ನು ಮೀರಿಸಿದ ಸಾವಿನ ಪ್ರಮಾಣ

09:26 AM Apr 13, 2020 | Mithun PG |

ವಾಷಿಂಗ್ಟನ್: ಇಡೀ ವಿಶ್ವವನ್ನೇ ಅಪಾಯಕ್ಕೆ ತಂದೊಡ್ಡಿರುವ ಕೋವಿಡ್-19 ಮಹಾಮಾರಿಗೆ ಅಮೆರಿಕಾದಲ್ಲಿ ಬಲಿಯಾದವರ ಸಂಖ್ಯೆ 20 ಸಾವಿರದ ಗಡಿ ದಾಟಿದೆ. ದುರದೃಷ್ಟವೆಂದರೇ ಸಾವಿನ ಪ್ರಮಾಣದಲ್ಲಿ ಇಟಲಿಯನ್ನು ಮೀರಿಸಿದೆ. ಆ ಮೂಲಕ  ಕೋವಿಡ್-19 ಸಾಂಕ್ರಮಿಕ ರೋಗಕ್ಕೆ ಅತೀ ಹೆಚ್ಚು ಜನರು ಬಲಿಯಾದ ದೇಶ ಎಂಬ ಕುಖ್ಯಾತಿಗೆ ಪಾತ್ರವಾಗಿದೆ.

Advertisement

ಜಾನ್ಸ್ ಹಾಫ್ ಕಿನ್ಸ್ ವಿಶ್ವವಿದ್ಯಾನಿಲಯದ ಪ್ರಕಾರ ಶನಿವಾರದ ವೇಳೆಗೆ ಅಮೆರಿಕಾದಲ್ಲಿ ಈ ಮಾರಕ ವೈರಸ್ ಗೆ 20,557 ಜನರು ಮೃತಪಟ್ಟಿದ್ದಾರೆ. ಮಾತ್ರವಲ್ಲದೆ ಸೋಂಕಿತರ ಪ್ರಮಾಣ ಕೂಡ 5,32,879ಕ್ಕೆ ಏರಿಕೆಯಾಗಿದೆ ಎಂದು ತಿಳಿಸಿದೆ. ನ್ಯೂಯಾರ್ಕ್ ನಗರ ಕೋವಿಡ್ 19 ಅಟ್ಟಹಾಸಕ್ಕೆ ನಲುಗಿ ಹೋಗಿದೆ.

ಇಟಲಿಯಲ್ಲಿ ಈ ವೈರಾಣುವಿನಿಂದ 18,849 ಜನರು ಮೃತಪಟ್ಟಿದ್ದಾರೆ. ಈ ದೇಶ ಕೂಡ ವೈರಸ್ ನ ಅಟ್ಟಹಾಸಕ್ಕೆ ಅಕ್ಷರಶಃ ನಲುಗಿ ಹೋಗಿತ್ತು ಎಂಬುದನ್ನು ಗಮನಿಸಬಹುದು.  ಸ್ಪೇನ್ ನಲ್ಲೂ ಕೂಡ ಈ ಮಹಾಮಾರಿ ರುದ್ರ ನರ್ತನ ಮಾಡುತ್ತಿದೆ.

ಜಗತ್ತಿನಾದ್ಯಂತ 17,80,312 ಜನರು ಈ ಸೋಂಕಿಗೆ ತುತ್ತಾಗಿದ್ದು 1,08,827 ಜನರು ಪ್ರಾಣ ತ್ಯೆಜಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next