Advertisement

ಅಮೆರಿಕಾದ ಮೇಲೆ ದಾಳಿ ಮಾಡಿದರೆ ಇರಾನ್ ನ 52 ಪ್ರದೇಶಗಳನ್ನು ನಾಮಾವಶೇಷ ಮಾಡುತ್ತೇವೆ: ಟ್ರಂಪ್

09:54 AM Jan 06, 2020 | Mithun PG |

ವಾಷಿಂಗ್ಟನ್: ಇಸ್ಲಾಮಿಕ್ ಗಣರಾಜ್ಯ ಅಮೇರಿಕಾದ ಮೇಲೆ ದಾಳಿ ಮಾಡಲು ಮುಂದಾದರೇ ತುಂಬಾ ವೇಗವಾಗಿ ಮತ್ತು ಅತ್ಯಂತ ಭೀಕರವಾಗಿ ಪ್ರತಿಕಾರ ತೀರಿಸಿಕೊಳ್ಳುತ್ತೇವೆ. ಈಗಾಗಲೇ ಇರಾನ್ ನ 52 ಪ್ರದೇಶಗಳನ್ನು ಅಮೆರಿಕಾ ಸೇನೆ ಗುರಿಯಾಗಿರಿಸಿಕೊಂಡಿದೆ ಎಂದು ಡೊನಾಲ್ಡ್ ಟ್ರಂಪ್ ಎಚ್ಚರಿಕೆ ನೀಡಿದ್ದಾರೆ.

Advertisement

ಇರಾನ್ ಭದ್ರತಾ ಪಡೆಯ ಮುಖ್ಯಸ್ಥ ಖಾಸಿಮ್ ಸೋಲೆಮನಿಯನ್ನು ಅಮೆರಿಕ ವಾಯುದಾಳಿ ನಡೆಸಿ ಹತ್ಯೆ ಮಾಡಿದ ಬೆನ್ನಲ್ಲೇ ಟ್ವೀಟ್ ಮಾಡಿದ ಟ್ರಂಪ್, ಒಂದು ವೇಳೆ ಇರಾನ್ ಪ್ರತೀಕಾರಕ್ಕೆ ಮುಂದಾದರೇ ಅತ್ಯಂತ ಭೀಕರ ಪರಿಣಾಮವನ್ನು ಎದುರಿಸಬೇಕಾಗುತ್ತದೆ. 1979 ರಿಂದಲೂ ಟೆಹ್ರಾನ್ ನ ಯು ಎಸ್ ರಾಯಭಾರ ಕಚೇರಿಯಲ್ಲಿ 52ಕ್ಕೂ ಹೆಚ್ಚು ಅಮೇರಿಕರನ್ನು ಒತ್ತೆಯಾಳಾಗಿರಸಲಾಗಿತ್ತು. ಆದ ಕಾರಣದಿಂದಲೇ ಮಿಲಿಟರಿ ಕಾರ್ಯಚರಣೆ ಕೈಗೊಳ್ಳಲಾಗಿತ್ತು ಎಂದಿದ್ದಾರೆ.

ಅಮೇರಿಕಾ ದಾಳಿ ನಡೆಸಲು ಗುರಿಯಾಗಿರಿಸಿಕೊಂಡಿರುವ ಪ್ರದೇಶಗಳು ಇರಾನ್  ಮತ್ತು ಅಲ್ಲಿನ ಸಂಸ್ಕೃತಿಗೆ ಉನ್ನತ ಕೊಡುಗೆಯನ್ನು ನೀಡಿದೆ. ಒಂದು ವೇಳೆ ದಾಳಿ ನಡೆಸಿದರೆ ಆ ಪ್ರದೇಶಗಳು ಸಂಪೂರ್ಣ ನಾಮವಶೇಷವಾಗುತ್ತದೆ. ಆದುದರಿಂದ ಇರಾನ್ ಕಡೆಯಿಂದ ಅಮೆರಿಕಾ ಬೆದರಿಕೆಗಳನ್ನು ಬಯಸುವುದಿಲ್ಲ ಎಂದು ಟ್ರಂಪ್ ಎಚ್ಚರಿಕೆ ನೀಡಿದ್ದಾರೆ.

ಇರಾನ್ ಭದ್ರತಾ ಪಡೆಯ ಮುಖ್ಯಸ್ಥ ಖಾಸಿಮ್ ಸೋಲೆಮನಿ ಹತ್ಯೆಯಾದ ಬಳಿಕ ಇರಾನ್ ನಲ್ಲಿ ಪ್ರತಿಕಾರದ ಕೂಗು ಕೇಳಿಬಂದಿತ್ತು. ಅಮೆರಿಕಾ ವಿರುದ್ಧ ಸೇಡು ಎಂದು ಉದ್ಘೋಷ ಇರಾನ್ ನಾದ್ಯಂತ ಮೊಳಗಿತ್ತು. ಅದರ ಬೆನ್ನಲ್ಲೆ ಡೊನಾಲ್ಡ್ ಟ್ರಂಪ್ ಸರಣಿ ಟ್ವೀಟ್ ಮಾಡಿ ಎಚ್ಚರಿಕೆ ನೀಡಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next