ನ್ಯೂಯಾರ್ಕ್: 57 ವರ್ಷದ ಹೃದಯ ಸಂಬಂಧಿ ರೋಗಿಗೆ ಹಂದಿಯ ಹೃದಯವನ್ನು ಯಶಸ್ವಿಯಾಗಿ ಅಳವಡಿಸಿದ ಅಮೆರಿಕದ ವೈದ್ಯರು ಐತಿಹಾಸಿಕ ಸಾಧನೆ ಮಾಡಿದ್ದಾರೆ. ವೈದ್ಯಕೀಯ ಇತಿಹಾಸದಲ್ಲಿ ಇದೇ ಮೊದಲ ಬಾರಿಗೆ ಈ ಸಾಧನೆ ಮಾಡಲಾಗಿದ್ದು, ಅಂಗಾಂಗ ದಾನಗಳ ದೀರ್ಘಕಾಲದ ಕೊರತೆಯನ್ನು ಪರಿಹರಿಸಲು ಒಂದು ದಿನ ಸಹಾಯ ಮಾಡುತ್ತದೆ ಎಂದು ವೈದ್ಯರು ಅಭಿಪ್ರಾಯ ಪಟ್ಟಿದ್ದಾರೆ.
ಈ ಐತಿಹಾಸಿಕ ಶಸ್ತ್ರಚಿಕಿತ್ಸೆಯು ಶುಕ್ರವಾರ ನಡೆಯಿತು ಎಂದು ಮೇರಿಲ್ಯಾಂಡ್ ಮೆಡಿಕಲ್ ಸ್ಕೂಲ್ ವಿಶ್ವವಿದ್ಯಾಲಯವು ಸೋಮವಾರ ತನ್ನ ಹೇಳಿಕೆಯಲ್ಲಿ ತಿಳಿಸಿದೆ.
ರೋಗಿ ಡೇವಿಡ್ ಬೆನೆಟ್ ಗೆ ಮಾನವ ಕಸಿ ಮಾಡಲು ಅಸಾಧ್ಯವಾದ ಹಿನ್ನೆಲೆಯಲ್ಲಿ ಈ ನಿರ್ಧಾರವನ್ನು ತೆಗೆದುಕೊಳ್ಳಲಗಿತ್ತು. ಅವರು ಈಗ ಚೇತರಿಸಿಕೊಳ್ಳುತ್ತಿದ್ದಾರೆ ಮತ್ತು ಹೊಸ ಅಂಗವು ಹೇಗೆ ಕಾರ್ಯನಿರ್ವಹಿಸುತ್ತದೆ ಎಂಬುದನ್ನು ನಿರ್ಧರಿಸಲು ಎಚ್ಚರಿಕೆಯಿಂದ ಮೇಲ್ವಿಚಾರಣೆ ಮಾಡಲಾಗುತ್ತಿದೆ ಎಂದು ವೈದ್ಯರು ತಿಳಿಸಿದ್ದಾರೆ.
ಇದನ್ನೂ ಓದಿ:ಸಿಎಂ ಬೊಮ್ಮಾಯಿಗೆ ಕೋವಿಡ್ ಪಾಸಿಟಿವ್: ಸ್ವಯಂ ಐಸೋಲೇಶನ್ ಗೆ ಒಳಗಾದ ಸಚಿವ ಸುಧಾಕರ್
“ನಾನು ಸಾಯಬೇಕಿತ್ತು ಅಥವಾ ಈ ಕಸಿ ಮಾಡಿಸಿಕೊಳ್ಳಬೇಕಿದೆ. ನಾನು ಬದುಕಲು ಬಯಸುತ್ತೇನೆ. ಇದು ಕತ್ತಲೆಯಲ್ಲಿ ಗುಂಡು ಹಾರಿಸುವಂತಹ ಅವಕಾಶ ಎಂದು ನನಗೆ ತಿಳಿದಿದೆ, ಆದರೆ ಇದು ನನ್ನ ಕೊನೆಯ ಆಯ್ಕೆಯಾಗಿದೆ” ಎಂದು ಮೇರಿಲ್ಯಾಂಡ್ ನಿವಾಸಿ ಡೇವಿಡ್ ಬೆನೆಟ್ ಶಸ್ತ್ರಚಿಕಿತ್ಸೆಗೆ ಒಂದು ದಿನ ಮೊದಲು ಹೇಳಿದ್ದರು.
ಹೃದಯ-ಶ್ವಾಸಕೋಶದ ಬೈಪಾಸ್ ಯಂತ್ರದಲ್ಲಿ ಡೇವಿಡ್ ಬೆನೆಟ್ ಕಳೆದ ಕೆಲವು ತಿಂಗಳಿನಿಂದ ಮಲಗಿದ್ದರು. “ಇನ್ನು ಗುಣಮುಖನಾಗಿ ನಾನು ಹಾಸಿಗೆಯಿಂದ ಎದ್ದೇಳಲು ಎದುರು ನೋಡುತ್ತಿದ್ದೇನೆ” ಎಂದು ಹೇಳಿದ್ದಾರೆ.
ಬೆನೆಟ್ ಗೆ ಹೃದಯ ದಾನ ಮಾಡಿದ ಹಂದಿ ಜೆನೆಟಿಕ್ ಎಡಿಟಿಂಗ್ ಪ್ರೊಸೀಜರ್ ಗೆ ಒಳಗಾದ ಹಿಂಡಿಗೆ ಸೇರಿತ್ತು.