ವಾಷಿಂಗ್ಟನ್ : ಅಮೆರಿಕದ ಒಹಾಯೋ ರಾಜ್ಯ ಸರಕಾರದ ಹಲವಾರು ವೆಬ್ ಸೈಟ್‌ಗಳನ್ನು ಐಸಿಸ್ ಉಗ್ರರು ಹ್ಯಾಕ್ ಮಾಡಿ ಐಸಿಸ್ ಪರ ಸಂದೇಶಗಳನ್ನು, ಘೋಷಣೆಗಳನ್ನು ಅದರಲ್ಲಿ ತುಂಬಿದ್ದಾರೆ ಎಂದು ಮಾಧ್ಯಮ ವರದಿಗಳು ತಿಳಿಸಿವೆ.
“ಟ್ರಂಪ್ ಅವರೇ, ನೀವು ಮತ್ತು ನಿಮ್ಮ ಎಲ್ಲ ಜನರು ಮುಸ್ಲಿಂ ದೇಶಗಳಲ್ಲಿ ಹರಿಸಲಾಗುತ್ತಿರುವ ಪ್ರತಿಯೊಂದು ಬಿಂದು ರಕ್ತಕ್ಕೂ ಉತ್ತರದಾಯಿಗಳಾಗಿರುತ್ತೀರಿ’ ಎಂಬ ಐಸಿಸ್ ಉಗ್ರರ ಸಂದೇಶವು ಒಹಾಯೋ ರಕಾರಿ ವೆಬ್ ಸೈಟ್‌ಗಳಲ್ಲಿ ಕಂಡು ಬಂದಿದೆ. ಇದನ್ನು ‘ಟೀಮ್ ಸಿಸ್ಟಮ್ ಡಿಝಡ್’ ಮಾಡಿರುವಂತೆ ತೋರಿ ಬಂದಿರುವುದಾಗಿ ಚೀನದ ಕ್ಸಿನ್ ಹುವಾ ಸುದ್ದಿ ಸಂಸ್ಥೆ ಹೇಳಿದೆ.
ಟೀಮ್ ಸಿಸ್ಟಮ್ ಡಿಝಡ್ ಎಂದರೆ ಇಸ್ರೇಲ್-ಅರಬ್ ವಿರೋಧಿ ಟೀನೇಜರ್‌ಗಳ ಒಂದು ಸಮೂಹ ಎಂದು ಅಮೆರಿಕ ಹೇಳಿದೆ. ಈ ಸಮೂಹವು ಈ ಹಿಂದೆ ಯುನಿವರ್ಸಿಟಿ ಆಫ್ ನ್ಯೂ ಬ್ರನ್ಸ್‌ವಿಕ್‌ನ ವಿದ್ಯಾರ್ಥಿ ಸಂಘಟನೆಯ ವೆಬ್ ಸೈಟ್ ಹಾಗೂ ಕೆನಡದ ಫುಡ್ ಟ್ರಕ್ ನ ಸ್ಯಾಂಡ್‌ವಿಚ್ ವೆಬ್ ಸೈಟನ್ನು ಹ್ಯಾಕ್ ಮಾಡಿತ್ತು.
ಐಸಿಸ್ ಉಗ್ರರಿಂದ ಹ್ಯಾಕ್ ಮಾಡಲ್ಪಟ್ಟ ವೆಬ್ ಸೈಟ್‌ಗಳೆಂದರೆ ಒಹಾಯೋ ರಾಜ್ಯಪಾಲ ಜಾನ್ ಕ್ಯಾಸಿಶ್ ಅವರ ಕಾರ್ಯಾಲಯದ, ಒಹಾಯೋ ಪುನರ್‌ವಸತಿ ಮತ್ತು ನೇರ್ಪು ಇಲಾಖೆ, ಒಹಾಯೋ ಕ್ಯಾಸಿನೋ ಕಂಟ್ರೋಲ್ ಕಮಿಷನ್, ಒಹಾಯೋ ಆಫೀಸ್ ಆಫ್ ವರ್ಕ್ ಫೋರ್ಸ್ ಟ್ರಾನ್ಸ್‌ಫಾರ್ಮೇಶನ್ , ಒಹಾಯೋ ಇನ್ಸ್‌ಪೆಕ್ಟರ್ ಜನರಲ್ ಮತ್ತು ಒಹಾಯೋ ಡಿಪಾರ್ಟ್‌ಮೆಂಟ್ ಆಫ್ ಮೆಡಿಕ್‌ಏಯ್ಡ.
ಹ್ಯಾಕ್ ಮಾಡಲ್ಪಟ್ಟ ಒಹಾಯೋ ಸರಕಾರಿ ವೆಬ್ ಸೈಟ್‌ಗಳ ಹೋಮ್ ಪೇಜ್‌ಗಳನ್ನು ಹಿನ್ನೆಲೆ ಸಂಗೀತದೊಂದಿಗೆ ಬದಲಾಯಿಸಲಾಗಿದೆ. ಮಧ್ಯಾಹ್ನ 1 ಗಂಟೆಯ ವರೆಗೂ ಎಲ್ಲ ಬಾಧಿತ ವೆಬ್ ಸೈಟ್‌ಗಳು ಆನ್‌ಲೈನ್ ಆಗಿರುವುದಿಲ್ಲ ಎಂದು ತಿಳಿಸಲಾಗಿದೆ.