Advertisement

ಉತ್ತರ ಕೊರಿಯಾಕ್ಕೆ ಅಮೆರಿಕ ಧಮ್ಕಿ ಹಾಕೋದನ್ನು ನಿಲ್ಲಿಸಬೇಕು; ಚೀನಾ

03:46 PM Sep 16, 2017 | Team Udayavani |

ವಾಷಿಂಗ್ಟನ್: ಅಣ್ವಸ್ತ್ರ ಪರೀಕ್ಷೆ ನಡೆಸಿ ಉದ್ಧಟತನ ಪ್ರದರ್ಶಿಸಿದ್ದ ಉತ್ತರ ಕೊರಿಯಾ ಮತ್ತೆ ಜಪಾನ್ ಹಾದು ಹೋಗುವ ಕ್ಷಿಪಣಿ ಹಾರಿಸಿ ಅಟ್ಟಹಾಸ ಮೆರೆದ ಬೆನ್ನಲ್ಲೇ ಅಮೆರಿಕ ಉತ್ತರ ಕೊರಿಯಾಕ್ಕೆ ಬೆದರಿಕೆ ಹಾಕುವುದನ್ನು ನಿಲ್ಲಿಸಬೇಕು ಎಂದು ಚೀನಾ ಸಲಹೆ ನೀಡಿರುವುದಾಗಿ ಮಾಧ್ಯಮದ ವರದಿ ತಿಳಿಸಿದೆ.

Advertisement

ಅಮೆರಿಕದಲ್ಲಿರುವ ಚೀನಾ ರಾಯಭಾರಿ ಸಿಯು ಟಿಯಾಂಕೈ ರಾಯಭಾರ ಕಚೇರಿಯ ಕಾರ್ಯಕ್ರಮವೊಂದರಲ್ಲಿ ಸುದ್ದಿಗಾರರ ಜತೆ ಮಾತನಾಡುತ್ತ, ಪ್ರಾಮಾಣಿಕವಾಗಿ ಹೇಳುವುದಾದರೆ, ಅಮೆರಿಕ ಈಗ ಏನು ಮಾಡಬೇಕೋ ಅದಕ್ಕಿಂತ ಹೆಚ್ಚಿನದನ್ನು ಮಾಡಿದೆ. ಹಾಗಾಗಿ ಈಗ ತೊಂದರೆಯಾದರೆ ಅಂತಾರಾಷ್ಟ್ರೀಯ ಸಹಕಾರಕ್ಕೆ ಈ ವಿವಾದ ತೊಂದರೆಗೆ ಸಿಲುಕಲಿದೆ ಎಂದು ಹೇಳಿದರು.

ಹೆಚ್ಚಿನ ಬೆದರಿಕೆ ಹಾಕುವುದರಿಂದ ಯಾವುದೇ ಪ್ರಯೋಜನವಾಗದು, ಆ ನೆಲೆಯಲ್ಲಿ ಅಮೆರಿಕ ಮಾತುಕತೆ ಮತ್ತು ಚರ್ಚೆಯ ಮೂಲಕವೇ ಮಾರ್ಗವನ್ನು ಕಂಡುಕೊಳ್ಳಬೇಕಾಗಿದೆ ಎಂದು ತಿಳಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next