Advertisement

ಭಾರತಕ್ಕೆ ನ್ಯಾಟೋ ಮಾನ್ಯತೆಯ ಗೌರವ

01:02 AM Jul 03, 2019 | mahesh |

ವಾಷಿಂಗ್ಟನ್‌: ಭಾರತಕ್ಕೆ ನ್ಯಾಟೋ ರಾಷ್ಟ್ರಗಳಿಗೆ ನೀಡುವ ಮಾನ್ಯತೆಗೆ ಸಮನಾಗಿರುವ ಗೌರವ ನೀಡುವ ವಿಧೇಯಕವನ್ನು ಅಮೆರಿಕ ಸಂಸತ್‌ಲ್ಲಿ ಅಂಗೀಕರಿಸಲಾಗಿದೆ.

Advertisement

ಕಳೆದ ವಾರ ಅದನ್ನು ಮಂಡಿಸಲಾಗಿತ್ತು. ನ್ಯಾಷನಲ್ ಡಿಫೆನ್ಸ್‌ ಆಥರೈಸೇಷನ್‌ ಆ್ಯಕ್ಟ್ ಎಂಬ ಶಿರೋನಾಮೆಯ ವಿಧೇಯಕದ ಪ್ರಕಾರ ಇಸ್ರೇಲ್, ದಕ್ಷಿಣ ಕೊರಿಯಾಗಳಿಗೆ ಅಮೆರಿಕದ ವತಿಯಿಂದ ಯಾವ ರೀತಿಯ ಮಾನ್ಯತೆ, ಬಾಂಧವ್ಯ ಹೊಂದಲಾ ಗುತ್ತದೆಯೋ ಅದೇ ರೀತಿ ಮುಂದೆ ಭಾರತದ ಜತೆಗೆ ರಾಜತಾಂತ್ರಿಕ, ರಕ್ಷಣಾತ್ಮಕ ಬಾಂಧವ್ಯ ಹೊಂದಲಾ ಗುತ್ತದೆ. ಸೆನೆಟ್ ಇಂಡಿಯಾ ಕ್ಯಾಕಾಸ್‌ ಸಮಿತಿಯ ಸಹ ಅಧ್ಯಕ್ಷ ಸೆನೆಟರ್‌ ಜಾನ್‌ ಕಾರ್‌ನ್ಯಾನ್‌ ವಿಧೇಯಕ ಮಂಡಿಸಿದ್ದರು. ಹಿಂದೂ ಮಹಾಸಾಗರ ವ್ಯಾಪ್ತಿಯಲ್ಲಿ ಉಗ್ರ ನಿಗ್ರಹ, ಕಡಲ್ಗಳ್ಳರ ವಿರುದ್ಧ ಕ್ರಮ ಮತ್ತು ಕಡಲ ತೀರ ರಕ್ಷಣೆ ಕ್ಷೇತ್ರಗಳಲ್ಲಿ ಸಹಕಾರಕ್ಕೆ ಒಪ್ಪಲಾಗಿದೆ. ಅಮೆರಿಕದ ಹೌಸ್‌ ಆಫ್ ರೆಪ್ರಸೆಂಟೇಟಿವ್ಸ್‌ ಮತ್ತು ಸೆನೆಟ್‌ನ ಅಧ್ಯಕ್ಷರು ಸಹಿ ಮಾಡಿದ ಕೂಡಲೇ ಅದು ಕಾಯ್ದೆಯಾಗಿ ಮಾರ್ಪಾಡಾಗುತ್ತದೆ.

Advertisement

Udayavani is now on Telegram. Click here to join our channel and stay updated with the latest news.

Next