Advertisement

ಭಾರತಕ್ಕೆ ನಾಳೆ ಬ್ಲಿಂಕೆನ್‌ ಆಗಮನ: 2 ದಿನಗಳ ಪ್ರವಾಸ

06:43 PM Jul 26, 2021 | Team Udayavani |

ನವದೆಹಲಿ/ಕಾಬೂಲ್‌: ಅಫ್ಘಾನಿಸ್ತಾನದಲ್ಲಿ ತಾಲಿಬಾನ್‌ ಉಗ್ರರ ಕೈ ಮೇಲಾಗುತ್ತಿರುವಂತೆಯೇ, ಅಮೆರಿಕದ ವಿದೇಶಾಂಗ ಸಚಿವ ಆ್ಯಂಟನಿ ಬ್ಲಿಂಕೆನ್‌ ಜು.27ರಿಂದ 2 ದಿನ ಗಳ ಕಾಲ ಭಾರತ ಪ್ರವಾಸ ಕೈಗೊಳ್ಳಲಿದ್ದಾರೆ.

Advertisement

ಪ್ರಧಾನಿ ಮೋದಿ, ವಿದೇಶಾಂಗ ಸಚಿವ ಎಸ್‌. ಜೈಶಂಕರ್‌, ರಾಷ್ಟ್ರೀ ಯ ಭದ್ರತಾ ಸಲಹೆಗಾರ ಅಜಿತ್‌ ದೊವಾಲ್‌ರನ್ನು ಭೇಟಿಯಾಗಿ ಮಾತುಕತೆ ನಡೆಸಲಿದ್ದಾರೆ. ಪಾಕಿಸ್ತಾನ ಉಗ್ರರ ಸ್ವರ್ಗವಾಗುತ್ತಿರು ವುದು, ಅಫ್ಘಾನಿಸ್ತಾನದಲ್ಲಿ ಅಮೆರಿಕ ಮತ್ತು ನ್ಯಾಟೋ ಪಡೆಗಳು ವಾಪಸಾಗುತ್ತಿರು ವಂತೆಯೇ ತಾಲಿಬಾನ್‌ ಉಗ್ರರ ಬಲ ವರ್ಧನೆ, ಮುಂದಿನ ಹಂತದ ಎರ ಡೂ ದೇಶಗಳ ನಡುವಿನ ರಕ್ಷಣೆ ಮತ್ತು ವಿದೇಶಾಂಗ ಸಚಿವರ 2 ಪ್ಲಸ್‌ 2 ಸಭೆ, ಅದಕ್ಕಿಂತ ಮೊದಲು ರಕ್ಷಣೆ ಹಾಗೂ ತಾಂತ್ರಿಕ ಕ್ಷೇತ್ರಕ್ಕೆ ಸಂಬಂಧಿಸಿದ ಪರಿಣತಿಗಳ ವಿನಿಮಯ ಸೇರಿದಂತೆ ಹಲವು ಪ್ರಮುಖ ವಿಚಾರಗಳ ಬಗ್ಗೆ ಬ್ಲಿಂಕೆನ್‌ ಕೇಂದ್ರ ಸರ್ಕಾರದ ಪ್ರಮುಖರ ಜತೆಗೆ ಮಾತುಕತೆ ನಡೆಸಲಿದ್ದಾರೆ.

ಅಮೆರಿಕ, ಆಸ್ಟ್ರೇಲಿಯಾ, ಭಾರತ, ಜಪಾನ್‌ ಲಸಿಕೆ ಪೂರೈಕೆ ನಿಟ್ಟಿನಲ್ಲಿ ಸಹಕಾರ ನೀಡಿಕೆ, ಭಾರತದಲ್ಲಿ ಉತ್ಪಾದನೆಯಾಗುವ ಲಸಿಕೆಗಳನ್ನು ವಿತರಣೆ, ಅಲ್ಲದೆ, ಬಂಡವಾಳ ಹೂಡಿಕೆ, ಆರೋಗ್ಯ, ಶಿಕ್ಷಣ, ಡಿಜಿಟಲ್‌ ಕ್ಷೇತ್ರದಲ್ಲಿ ಸಹಕಾರದ ಬಗ್ಗೆಯೂ ಚರ್ಚೆಯಾಗಲಿದೆ.

22 ಸಾವಿರ ಕುಟುಂಬ ಪಲಾಯನ
ಅಫ್ಘಾನಿಸ್ತಾನದಲ್ಲಿ ತಾಲಿಬಾನ್‌ನ ಕೇಂದ್ರ ಸ್ಥಾನ ಕಂದಹಾರ್‌ನಿಂದ 22 ಸಾವಿರ ಕುಟುಂಬಗಳು ಮನೆಯನ್ನೇ ಬಿಟ್ಟು ಒಡಿದ್ದಾರೆ. ಈ ಬಗ್ಗೆ ಎಎಫ್ಪಿ ಸುದ್ದಿಸಂಸ್ಥೆ ಜತೆಗೆ ಮಾತನಾಡಿದ ನಿರ್ವಸಿತರ ವಿಭಾಗದ ಮುಖ್ಯಸ್ಥ ಮೊಹಮ್ಮದ್‌ ದರ್ಯಾಬ್‌ ಮಾತನಾಡಿ ತಿಂಗಳಿಂದ ನಡೆಯುತ್ತಿರುವ ಸಂಘರ್ಷ ದಿಂದಾಗಿ 22 ಸಾವಿರ ಕುಟುಂಬಗಳು ಪಲಾಯನ ಮಾಡಿವೆ ಎಂದಿದ್ದಾರೆ.

ಕಂದಹಾರ್‌ ನಗರದ ಹೊರಭಾಗದಲ್ಲಿ ಭಾನುವಾರವೂ ಕದನ ಮುಂದುವರಿದಿದೆ. ಇದೇ ವೇಳೆ, ಕಂದಹಾರ್‌ನಲ್ಲಿ 2 ವಾರದ ಅವಧಿಯಲ್ಲಿ ಪತ್ರಕರ್ತರು ಸೇರಿದಂತೆ 33 ಮಂದಿಯನ್ನು ಉಗ್ರರು ಕೊಂದಿದ್ದಾರೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next